• search
 • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸುಮಲತಾ ಅಂಬರೀಶ್ ಅವರ ಮನವೊಲಿಸುತ್ತೇವೆ: ಡಿಕೆ.ಶಿವಕುಮಾರ್

|
   Lok Sabha Election 2019 : ಕಾಂಗ್ರೆಸ್ ಸುಮಲತಾ ಅವರಿಗೆ ಟಿಕೆಟ್ ವಿಚಾರದಲ್ಲಿ ಕೈ ಕೊಡತ್ತಾ? | Oneindia Kannada

   ಬೆಂಗಳೂರು, ಫೆಬ್ರವರಿ 25: ಮಂಡ್ಯದಿಂದ ಚುನಾವಣೆಗೆ ನಿಲ್ಲಲು ನಿಶ್ಚಯಿಸಿರುವ ಸುಮಲತಾ ಅಂಬರೀಶ್ ಅವರ ಮನವೊಲಿಸುತ್ತೇವೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

   ಸುಮಲತಾ ಅಂಬರೀಶ್‌ ಪಕ್ಷೇತರವಾಗಿ ಸ್ಪರ್ಧಿಸಿದರೂ ಕಾಂಗ್ರೆಸ್‌ ಬೆಂಬಲ?

   ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ಬೇರೆ ನಿರ್ಣಯ ಆಗಿದೆ. ಅಲ್ಲಿ ಈಗ ಜೆಡಿಎಸ್ ಸಂಸದರಿದ್ದಾರೆ ಹಾಗಾಗಿ ಸುಮಲತಾ ಅವರನ್ನು ಮನವೊಲಿಸುವ ಕಾರ್ಯವನ್ನು ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.

   ಸುಮಲತಾ ಅಂಬರೀಶ್, ಸಿದ್ದರಾಮಯ್ಯ ಭೇಟಿ: ಮಂಡ್ಯ ಟಿಕೆಟ್ ಚರ್ಚೆ

   ಸುಮಲತಾ ಅಂಬರೀಶ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಂಡ್ಯ ಟಿಕೆಟ್‌ ಗಾಗಿ ಬೇಡಿಕೆ ಇಟ್ಟಿದ್ದಾರೆ. ಆದರೆ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ನೀಡಬೇಕು ಎಂದು ಮೈತ್ರಿ ಸೂತ್ರ ಹೇಳುತ್ತಿದೆ. ಟಿಕೆಟ್ ಸಿಗದಿದ್ದಲ್ಲಿ ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ಸುಮಲತಾ ಹೇಳಿದ್ದಾರೆ. ಇದು ಜೆಡಿಎಸ್-ಕಾಂಗ್ರೆಸ್‌ಗೆ ಆತಂಕ ತಂದಿದೆ.

   ಹಾಗಾಗಿ ಸುಮಲತಾ ಅವರ ಮನವೊಲಿಸುವ ಕಾರ್ಯದಲ್ಲಿ ಕಾಂಗ್ರೆಸ್ ನಿರತವಾಗಲಿದೆ. ಡಿ.ಕೆ.ಶಿವಕುಮಾರ್ ಅವರು ಅಂಬರೀಶ್ ಅವರ ಕುಟುಂಬಕ್ಕೆ ಆಪ್ತರಾಗಿರುವ ಕಾರಣ ಅಂಬರೀಶ್ ಅವರ ಹೆಗಲಿಗೆ ಈ ಜವಾಬ್ದಾರಿ ಬೀಳಲಿದೆ.

   ಮಂಡ್ಯ: ಕಾಂಗ್ರೆಸ್ ನಿರ್ಧಾರದಿಂದ ಸುಮಲತಾ ಅಂಬರೀಶ್ ಗೆ ಭ್ರಮನಿರಸನ?

   ಪರಮೇಶ್ವರ್ ಅವರ ಹೇಳಿಕೆ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ದಲಿತರಿಗೆ ಹೆಚ್ಚು ಅಧಿಕಾರ ನೀಡಿರುವುದು ಕಾಂಗ್ರೆಸ್ ಪಕ್ಷ, ಎಸ್‌ಸಿ ಸಮುದಾಯದ ಒಳ ಜಾತಿಗಳಿಗೂ ಆದ್ಯತೆ ನೀಡಿ ಸಚಿವರನ್ನಾಗಿ ಮಾಡಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರು ವಿಪಕ್ಷ ನಾಯಕರಾಗಿದ್ದಾರೆ ಎಂದು ಹೇಳಿದರು.

   English summary
   DK Shivakumar said we will convinse Sumalatha Ambareesh not to contest to Lok Sabha elections from Mandya. He said Mandya we have anouther plans.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X