ಮಂಡ್ಯ ಉಪಚುನಾವಣೆ: ಜೆಡಿಎಸ್, ಕಾಂಗ್ರೆಸ್ಸಿಗೆ ಬಿಜೆಪಿ ನೀಡಿದ ಅಚ್ಚರಿಯ ಆಫರ್

Recommended Video

      Mandya Lok Sabha By-elections : ಮಂಡ್ಯ ಉಪಚುನಾವಣೆ | ಕಾಂಗ್ರೆಸ್ ಹಾಗು ಜೆಡಿಎಸ್ ಗೆ ಬಿಜೆಪಿಯ ಆಫರ್

      ಮಂಡ್ಯ ಲೋಕಸಭಾ ಉಪಚುನಾವಣೆಗೆ ವೇದಿಕೆ ಸಿದ್ದವಾಗಿದೆ. ಬಿಜೆಪಿ ತನ್ನ ಅಭ್ಯರ್ಥಿಯನ್ನು ಈಗಾಗಲೇ ಘೋಷಿಸಿದೆ. ತನ್ನ ಭದ್ರಕೋಟೆಯಾಗಿರುವ ಮಂಡ್ಯದಲ್ಲಿ ಜೆಡಿಎಸ್ ಇನ್ನೂ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಲಿಲ್ಲ. ಗುರುವಾರ (ಅ 11) ತಡರಾತ್ರಿವರೆಗೂ ನಡೆದ ಸಭೆ ಅಪೂರ್ಣವಾಗಿದೆ.

      ಮಂಡ್ಯದಲ್ಲಿ ಡಾ. ಸಿದ್ದರಾಮಯ್ಯ ಅವರು ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಇನ್ನು ರಾಮನಗರದಲ್ಲಿ ಪಕ್ಷದ ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ಬಿಜೆಪಿಯಲ್ಲಿ ಇನ್ನೂ ಗೊಂದಲವಿದೆ. ಅಲ್ಲಿಂದ, ಅನಿತಾ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.

      ಹಾಲೀ ಲೋಕಸಭೆಯ ಅವಧಿ ನಾಲ್ಕೈದು ತಿಂಗಳು ಮಾತ್ರ ಇರುವುದರಿಂದ, ಮೂರೂ ಪಕ್ಷಗಳಿಗೂ ಇದು ಬೇಡವಾದ ಚುನಾವಣೆ. ಮುಖಂಡರಿಗೆ ಈ ಚುನಾವಣೆಯಲ್ಲಿ ಹೇಗೆ ಉತ್ಸಾಹವಿಲ್ಲವೋ, ಅದೇ ರೀತಿ ಕಾರ್ಯಕರ್ತರಿಗೂ ಕೂಡಾ.

      ಜೆಡಿಎಸ್ ವರಿಷ್ಠ ದೇವೇಗೌಡ್ರ ಮನೆಯಲ್ಲಿ ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ಮುಖಂಡರ ಸಭೆ ನಡೆದರೂ, ಲಕ್ಷ್ಮೀ ಅಶ್ವಿನ್ ಗೌಡ ಅಥವಾ ಶಿವರಾಮೇ ಗೌಡ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಗೊಂದಲದಲ್ಲಿ ಗೌಡ್ರು ಇದ್ದಿದ್ದರಿಂದ ಹೆಸರು ಅಂತಿಮವಾಗಿಲ್ಲ.

      ಈ ನಡುವೆ, ಅಲ್ವ ಅವಧಿಯ ಲೋಕಸಭಾ ಉಪಚುನಾವಣೆ ಇದಾಗಿರುವುದರಿಂದ, ಬಿಜೆಪಿ ಇತರ ಎರಡು ಪ್ರಮುಖ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ಸಿಗೆ ಒಂದು ಆಫರ್ ನೀಡಿದೆ. ಮೂರೂ ಪಕ್ಷಗಳು ಅವಿರೋಧವಾಗಿ ಒಬ್ಬರನ್ನು ಆಯ್ಕೆ ಮಾಡೋಣ ಎಂದಿದೆ. ಬಿಜೆಪಿ ಸೂಚಿಸಿರುವ ಹೆಸರು ಯಾವುದು?

      ಬಿಜೆಪಿ ಅಭ್ಯರ್ಥಿ ಡಾ. ಸಿದ್ದರಾಮಯ್ಯ

      ಬಿಜೆಪಿ ಅಭ್ಯರ್ಥಿ ಡಾ. ಸಿದ್ದರಾಮಯ್ಯ

      ಮಂಡ್ಯದಲ್ಲಿ ಡಾ. ಸಿದ್ದರಾಮಯ್ಯ ಅವರ ಹೆಸರನ್ನು ಬಿಜೆಪಿ ಈಗಾಗಲೇ ಅಂತಿಮಗೊಳಿಸಿದೆ. ಮೇಲ್ನೋಟಕ್ಕೆ ಇದು ಜೆಡಿಎಸ್ ಪ್ರಭಲ ಕೋಟೆಯಾಗಿರುವುದರಿಂದ, ಬಿಜೆಪಿಯಿಂದ ತೀವ್ರ ಪೈಪೋಟಿ ಎದುರಾಗುವ ಸಾಧ್ಯತೆ ಕಮ್ಮಿ. ಜೊತೆಗೆ, ಜಿಲ್ಲೆಯ ಎಲ್ಲಾ ಏಳು ಅಸೆಂಬ್ಲಿ ಕ್ಷೇತ್ರಗಳಲ್ಲಿ ಜೆಡಿಎಸ್ ಕಳೆದ ಚುನಾವಣೆಯಲ್ಲಿ ಜಯಗಳಿಸಿತ್ತು.

      ಲಕ್ಷಾಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣ ಪೋಲು

      ಲಕ್ಷಾಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣ ಪೋಲು

      ಚುನಾವಣೆಯೆಂದರೆ ಲಕ್ಷಾಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣ ಖರ್ಚಾಗುತ್ತದೆ. ಈ ಉಪಚುನಾವಣೆಯ ಅವಧಿ ಕೆಲವೇ ತಿಂಗಳು ಇರುವುದರಿಂದ, ಮೂರೂ ಪಕ್ಷಗಳು ಅವಿರೋಧವಾಗಿ ಒಬ್ಬರನ್ನು ಆಯ್ಕೆಮಾಡಿ, ಲೋಕಸಭೆಗೆ ಕಳುಹಿಸೋಣ. ಇದರಿಂದ, ಸಮಯ, ಹಣ ಪೋಲಾಗುವುದನ್ನು ತಡೆಯಬಹುದು ಎಂದು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

      ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಅವಿರೋಧವಾಗಿ ಆಯ್ಕೆ ಮಾಡೋಣ

      ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಅವಿರೋಧವಾಗಿ ಆಯ್ಕೆ ಮಾಡೋಣ

      ರಾಜ್ಯದಲ್ಲಿ ಎಲ್ಲರೂ ಗೌರವಿಸುವ ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದ ಸ್ವಾಮೀಜಿಯವರನ್ನು ಅವಿರೋಧವಾಗಿ ಆಯ್ಕೆ ಮಾಡೋಣ. ಮೂರೂ ಪಕ್ಷಗಳ ಮುಖಂಡರು, ಕಾರ್ಯಕರ್ತರು ಮಠದ ಭಕ್ತರಾಗಿದ್ದಾರೆ. ಶ್ರೀಗಳ ಬಗ್ಗೆ ಯಾರಿಗೂ ತಕರಾರು ಇರಲು ಸಾಧ್ಯವಿಲ್ಲ, ಹಾಗಾಗಿ ಅವರನ್ನು ಆಯ್ಕೆ ಮಾಡೋಣ ಎಂದು ಬಿಜೆಪಿ ಕಾರ್ಯಕರ್ತರು, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಮನವಿ ಮಾಡಿದ್ದಾರೆ.

      ಜೆಡಿಎಸ್, ಕಾಂಗ್ರೆಸ್ ಮುಖಂಡರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ

      ಜೆಡಿಎಸ್, ಕಾಂಗ್ರೆಸ್ ಮುಖಂಡರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ

      ಬಿಜೆಪಿ ಕಾರ್ಯಕರ್ತರ ಈ ಮನವಿಗೆ ನಿರ್ಮಲಾನಂದ ಶ್ರೀಗಳಿಂದಾಗಲಿ ಅಥವಾ ಜೆಡಿಎಸ್, ಕಾಂಗ್ರೆಸ್ ಮುಖಂಡರಿಂದ ಯಾವುದೇ ಪ್ರತಿಕ್ರಿಯೆ ಇದುವರೆಗೆ ಬಂದಿಲ್ಲ. ಖುದ್ದು, ಬಿಜೆಪಿ ಮುಖಂಡರೂ ಇದರ ಬಗ್ಗೆ ಇನ್ನೂ ತಮ್ಮ ಅಭಿಪ್ರಾಯ ಮಂಡಿಸಲಿಲ್ಲ.

       ಐದು ಲಕ್ಷ ಮತದಾರರಿದ್ದಾರೆ

      ಐದು ಲಕ್ಷ ಮತದಾರರಿದ್ದಾರೆ

      ಈ ನಡುವೆ, ಮಂಡ್ಯದಲ್ಲಿ ಕಾಂಗ್ರೆಸ್‌ಗೆ ಐದು ಲಕ್ಷ ಮತದಾರರಿದ್ದಾರೆ. ಕಳೆದ ಚುನಾವಣೆಯಲ್ಲಿ ರಮ್ಯಾ ಕೆಲವೇ ಮತಗಳ ಅಂತರದಿಂದ ಸೋತಿದ್ದರು. ಈ ಬಾರಿ ಉಪ ಚುನಾವಣೆಗೆ ಜೆಡಿಎಸ್‌ಗೆ ಕ್ಷೇತ್ರವನ್ನು ಬಿಟ್ಟುಕೊಟ್ಟರೆ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ತೊಂದರೆಯಾಗಲಿದೆ. ನನಗೆ ಅಥವಾ ರಮ್ಯಾಗೆ ಟಿಕೆಟ್ ನೀಡಿ ಎಂದು ರಮ್ಯಾ ತಾಯಿ ರಂಜಿತಾ, ಕಾಂಗ್ರೆಸ್ ಹೈಕಮಾಂಡಿಗೆ ಮನವಿ ಮಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+