ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜ. 14, 15ರಂದು ಮಂಡ್ಯದಲ್ಲಿ "ಟಿಪ್ಪು ನಿಜಕನಸುಗಳು" ನಾಟಕ ಪ್ರದರ್ಶನ: ಅಡ್ಡಂಡ ಕಾರ್ಯಪ್ಪ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಜನವರಿ, 13: ಮೈಸೂರಿನ ರಂಗಾಯಣದ ವತಿಯಿಂದ ಜನವರಿ 14, 15ರಂದು ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಟಿಪ್ಪು ನಿಜಕನಸುಗಳು ನಾಟಕದ 25ನೇ ಪ್ರದರ್ಶನ ನಡೆಯಲಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ತಿಳಿಸಿದರು.

ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ ಈ ನಾಟಕ 24 ಯಶಸ್ವಿ ಪ್ರದರ್ಶನ ಕಂಡಿದ್ದು, ಇದೀಗ ಮಂಡ್ಯದಲ್ಲಿ 25ನೇ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು. ಟಿಪ್ಪು ನಿಜಕನಸುಗಳು ನಾಟಕ ಪ್ರದರ್ಶನ ಮಂಡ್ಯದಲ್ಲಿ ನಡೆಯುತ್ತಿರುವುದು ಮಹತ್ವದ ಸಂಗತಿಯಾಗಿದೆ. ಈ ಮಣ್ಣಿನ ಮಕ್ಕಳಾದ ಉರಿಗೌಡ ಹಾಗೂ ದೊಡ್ಡನಂಜೇಗೌಡ ಎಂಬ ಸಹೋದರರು ಮತಾಂಧ ಟಿಪ್ಪುವನ್ನು 1799 ಮೇ 4ರಂದು ಆತನ ಕೋಟೆಯೊಳಗೆ ನುಗ್ಗಿ ಗುಂಡಿಕ್ಕಿ ಕೊಲ್ಲುತ್ತಾರೆ. ಶ್ರೀರಂಗಪಟ್ಟಣದ ಕೋಟೆಯ ವಾಟರ್‌ಗೇಟ್ ದ್ವಾರದಲ್ಲಿ ಈ ಘಟನೆ ನಡೆಯುತ್ತದೆ ಎಂದು ವಿವರಿಸಿದರು.

ಒಂದು ಕಡೆ ಸ್ಪರ್ಧಿಸಿದರೆ ಬಲವಿಲ್ಲ: ಸಿದ್ದರಾಮಯ್ಯ ರಾಜಕೀಯ ಭವಿಷ್ಯ ನುಡಿದ ಮನೆ ದೇವರುಒಂದು ಕಡೆ ಸ್ಪರ್ಧಿಸಿದರೆ ಬಲವಿಲ್ಲ: ಸಿದ್ದರಾಮಯ್ಯ ರಾಜಕೀಯ ಭವಿಷ್ಯ ನುಡಿದ ಮನೆ ದೇವರು

ಟಿಪ್ಪು 4ನೇ ಮೈಸೂರು ಯುದ್ಧದಲ್ಲಿ ಬ್ರಿಟೀಷರಿಂದ ಹತನಾದ ಎಂಬ ಸುಳ್ಳು ಚರಿತ್ರೆ ಪ್ರಚಲಿತವಿದೆ. ಆದರೆ ಅನೇಕ ದಾಖಲೆಗಂದ ಇದು ಸುಳ್ಳು ಎಂದು ಸಾಬೀತಾಗಿದೆ. ಬ್ರಿಟೀಷರು ಕೋಟೆಯ ಬಾಗಿಲನ್ನು ಒಡೆದು ಒಳ ನುಗ್ಗುವ ಮೊದಲೇ ಟಿಪ್ಪು ಹತನಾಗಿದ್ದ ಎಂದು ಹೇಳಿದರು.

"ಟಿಪ್ಪುವಿನ ರೈತ ವಿರೋಧಿ ನೀತಿಗೆ ಸವಾಲು"

ಉರಿಗೌಡ, ದೊಡ್ಡನಂಜೇಗೌಡ, ರಂಗೇಗೌಡ ಒಕ್ಕಲಿಗ ವೀರನಾಯಕರು ಮಳವಳ್ಳಿಯವರಾಗಿದ್ದು, ಇವರು ಕೃಷಿಕರಾಗಿದ್ದರು. ಇವರು ಟಿಪ್ಪು ರೈತರಿಗೆ ತೆರಿಗೆ ವಿಧಿಸಿದ್ದನ್ನು ವಿರೋಧಿಸಿದ್ದರು. ಮೈಸೂರು 3ನೇ ಯುದ್ಧದಲ್ಲಿ ಟಿಪ್ಪು ಸೋತು ಎಲ್ಲವನ್ನೂ ಕಳೆದುಕೊಂಡಿದ್ದ. ಈತನ ಖಜಾನೆ ಖಾಲಿಯಾಗಿತ್ತು. ಹೀಗಾಗಿ ತನ್ನ ಖಜಾನೆಯನ್ನು ತುಂಬಿಸಲು ಹಿಂದೂ ರೈತರ ಮೇಲೆ ತೆರಿಗೆ ವಿಧಿಸಿದ್ದ. ಇಸ್ಲಾಂಗೆ ಮತಾಂತರಗೊಂಡವರಿಗೆ, ಮುಸ್ಲೀಮರು ತೆರಿಗೆ ನೀಡಬೇಕಾಗಿರಲಿಲ್ಲ. ಇದರಿಂದ ಅಸಮಾಧಾನಗೊಂಡಿದ್ದ ರೈತರು ಟಿಪ್ಪು ವಿರುದ್ಧ ತಿರುಗಿಬಿದ್ದಿದ್ದರು ಎಂದು ವಿವರಿಸಿದರು.

ಬಿಜೆಪಿ ನನಗೆ ಬೆಂಬಲ ನೀಡಿದೆ, ಯಾವುದೇ ಷರತ್ತು ಹಾಕಿಲ್ಲ: ಸುಮಲತಾ ಅಂಬರೀಶ್ಬಿಜೆಪಿ ನನಗೆ ಬೆಂಬಲ ನೀಡಿದೆ, ಯಾವುದೇ ಷರತ್ತು ಹಾಕಿಲ್ಲ: ಸುಮಲತಾ ಅಂಬರೀಶ್

ಟಿಪ್ಪುವಿನ ವೇಷ ಧರಿಸಿ ಕೊಲೆ

ಟಿಪ್ಪುವಿನ ವೇಷ ಧರಿಸಿ ಕೊಲೆ

ಈ ಮಧ್ಯೆ ರಂಗೇಗೌಡ ನೇರವಾಗಿ ಟಿಪ್ಪು ಆಸ್ತಾನಕ್ಕೆ ತೆರಳಿ ಛೀಮಾರಿ ಹಾಕಿದಾಗ, ಟಿಪ್ಪು ಆತನ ಚರ್ಮವನ್ನು ಸುಲಿಸಿ ಬಹಿರಂಗವಾಗಿ ಕೊಲೆ ಮಾಡಿದ್ದ. ಸಯಮ ಕಾಯುತ್ತಿದ್ದ ಇನ್ನಿಬ್ಬರು ಒಕ್ಕಲಿಗ ನಾಯಕರಾದ ಉರಿಗೌಡ, ದೊಡ್ಡನಂಜೇಗೌಡ ಅವರು 4ನೇ ಮೈಸೂರು ಯುದ್ಧದ ಸಂದರ್ಭದಲ್ಲಿ ಕೋಟೆಯೊಳಗೆ ನುಗ್ಗಿ ಟಿಪ್ಪು ಸೈನಿಕರ ವೇಷ ತೊಟ್ಟು ಟಿಪ್ಪುವನ್ನು ಕೊಲ್ಲುತ್ತಾರೆ. ಬ್ರಿಟೀಷರು ಮರ್ಯಾದೆ ಕಾಪಾಡಿಕೊಳ್ಳಲು ಈ ಘಟನೆಯನ್ನು ಮರೆಮಾಚಿ ಟಿಪ್ಪು ಬ್ರಿಟೀಷರಿಂದ ಹತನಾದ ಎಂಬ ಘೋಷಣೆ ಮಾಡುತ್ತಾರೆ. ವಾಟರ್‌ ಗೇಟ್‌ನಿಂದ 300 ಮೀಟರ್ ದೂರದಲ್ಲಿ ಕೋಟೆಯ ಹೊರಗೆ ಟಿಪ್ಪುವಿನ ಹೆಣವನ್ನು ಹಾಕಿ, ಅಲ್ಲಿ ಯುದ್ಧದಲ್ಲಿ ಸತ್ತನೆಂದು ಪ್ರಚಾರ ಮಾಡುತ್ತಾರೆ. ಆ ಜಾಗವನ್ನು ಟಿಪ್ಪು ಹೆಣ ಸಿಕ್ಕ ಸ್ಥಳ ಅಂತಾ ಸ್ಥಾಪಿತ ಮಾಡುತ್ತಾರೆ ಎಂದು ತಿಳಿಸಿದರು.

ನಾಟಕದಲ್ಲಿ ಸತ್ಯದ ಅನಾವರಣ

ನಾಟಕದಲ್ಲಿ ಸತ್ಯದ ಅನಾವರಣ

ಒಬ್ಬ ಮತಾಂಧ, ಹಿಂದೂ ಧರ್ಮವನ್ನು ಕೆಡಿಸಿದ, ಇಸ್ಲಾಂ ಧರ್ಮವನ್ನು ಬಲತ್ಕಾರದಿಂದ ಖಡ್ಗದ ಮೂಲಕ ವಿಸ್ತರಿಸಲು ಹೊರಟಿದ್ದ. ಮತ್ತು ಹಿಂದೂ ದೇವಾಲಯಗಳನ್ನು ಕೆಡವಿ ಅದೇ ಸ್ಥಳದಲ್ಲಿ ಮಸೀದಿ ಕಟ್ಟಿಸಿದ ಒಬ್ಬ ಕ್ರೂರಿಯನ್ನು ಕೊಂದ ಕೀರ್ತಿ ಈ ವೀರ ಒಕ್ಕಲಿಗರಿಗೆ ಸಲ್ಲುತ್ತದೆ ಎಂದು ಕಾರ್ಯಪ್ಪ ತಿಳಿಸಿದರು. ಟಿಪ್ಪು ನಿಜಕನಸುಗಳು ನಾಟಕ ಸುಳ್ಳು ಚರಿತ್ರೆಯನ್ನು ಭೇದಿಸಿ ಸತ್ಯದ ಅನಾವರಣ ಮಾಡುತ್ತದೆ. ಇದೂವರೆಗೆ ಶಾಲಾ ಪಠ್ಯಗಳಲ್ಲಿ ಸುಳ್ಳನ್ನೇ ತುರುಕಿ ಬೋಧಿಸಿದ್ದಲ್ಲದೆ, ಕಾಂಗ್ರೆಸ್ ಸರ್ಕಾರ ಟಿಪ್ಪುವಿನ ಜಯಂತಿಯನ್ನು ಮಾಡಿ ಇತಿಹಾಸಕ್ಕೆ ಅಪಚಾರವೆಸಗಿದೆ. ಮೈಸೂರು ಪ್ರಾಂತ್ಯದಲ್ಲಿ ಕನ್ನಡವನ್ನು ಕೊಂದು ಪರ್ಶಿಯನ್ ಭಾಷೆಯನ್ನು ಆಡಳಿತಕ್ಕೆ ತಂದಿದ್ದರು. ಈ ಎಲ್ಲಾ ಅಂಶಗಳ ಬಹಿರಂಗವಾಗುತ್ತಿದ್ದಂತೆ ಟಿಪ್ಪು ನಿಜಕನಸುಗಳು ನಾಟಕದಲ್ಲಿ ಪ್ರಸ್ತುತಪಡಿಸಲಾಗಿದೆ ಎಂದು ವಿವರಿಸಿದರು.

ನಾಟಕ ಪ್ರದರ್ಶನ, ಟಿಕೆಟ್‌ ಬೆಲೆ ಎಷ್ಟು?

ನಾಟಕ ಪ್ರದರ್ಶನ, ಟಿಕೆಟ್‌ ಬೆಲೆ ಎಷ್ಟು?

ಜನವರಿ 14, 15ರಂದು ಎರಡು ದಿನಗಳ ಕಾಲ ಸಂಜೆ 6 ಗಂಟೆಗೆ ನಾಟಕ ಪ್ರದರ್ಶನ ಪ್ರಾರಂಭವಾಗಲಿದ್ದು, 3:30 ಗಂಟೆಗಳ ಕಾಲ ಪ್ರದರ್ಶನ ನಡೆಯಲಿದೆ. ಹಾಗೆಯೇ 100 ರೂಪಾಯಿ ಪ್ರವೇಶ ಶುಲ್ಕ ಇರಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತ ಡಿ.ಎನ್. ಶ್ರೀಪಾದು, ನಗರಸಭಾ ಸದಸ್ಯ ಕ್ರಾಂತಿಮಂಜು, ಮುಖಂಡ ಜಯಶಂಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

English summary
Addanda C. Cariappa said in Mandya, Tipu Nija kanasulu drama performance on January 14th and 15th in mandya, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X