ರಾಜಕೀಯ ಶತ್ರುವೂ ಅಲ್ಲ, ಮಿತ್ರನೂ ಅಲ್ಲ: ಶಾಸಕ ಅನ್ನದಾನಿ
ಮಂಡ್ಯ, ಜುಲೈ 6: ರಾಜಕೀಯ ಶತ್ರುವೂ ಅಲ್ಲ, ಮಿತ್ರನೂ ಅಲ್ಲ, ಯಾರು ಯಾವ ಟೈಮಲ್ಲಿ ಏನ್ ಬೇಕಾದ್ರು ಆಗಬಹುದು ಎಂದು ಮಳವಳ್ಳಿಯಲ್ಲಿ ಮೈತ್ರಿ ಸರ್ಕಾರದ ಭವಿಷ್ಯ ನುಡಿದಿದ್ದಾರೆ ಜೆಡಿಎಸ್ ಶಾಸಕ ಅನ್ನದಾನಿ.
ಅಧಿಕಾರವೇನು ಶಾಶ್ವತವೇ? ಇದೇನ್ ಮೈಸೂರು ಅರಸ ವಂಶಸ್ಥರ ಪಾರಂಪರ್ಯನಾ?. ಇದು ಅಂಬೇಡ್ಕರ್ ಬರೆದಿರುವ ಪ್ರಜಾ ಪ್ರಭುತ್ವ ವ್ಯವಸ್ಥೆ. ಇಲ್ಲಿ ಎಲ್ಲವೂ ಬದಲಾವಣೆ ಆಗುತ್ತಲೇ ಇರುತ್ತದೆ. ನಾಳೆ ಬೆಳಿಗ್ಗೆ ಪುನಃ ಹೊಸ ಸರ್ಕಾರ ಬರಬಹುದು, ಇಲ್ಲ ನಾಳೆ ಪುನಃ ಚುನಾವಣೆ ಆಗಬಹುದು. ಇವೆರಡೂ ಆಗದೇ ಇನ್ನೊಂದು ರೀತಿಯೂ ಆಗಬಹುದು ಎಂದು ಹೇಳಿದ್ದಾರೆ.

ರಾಜಕೀಯ ಬಿಕ್ಕಿಟ್ಟಿನಿಂದ ಮಧ್ಯಂತರ ಚುನಾವಣೆ ವಿಚಾರಕ್ಕೆ, ಈ ಬಗ್ಗೆ ಏನೂ ಕೇಳಬೇಡಿ ಎಂದು ಪ್ರತಿಕ್ರಿಯಿಸಲು ನಿರಾಕರಿಸಿದರು.












Click it and Unblock the Notifications