ರಾಮಮಂದಿರ ಉದ್ಘಾಟನೆಗೆ ಸಿದ್ದರಾಮಯ್ಯಗೆ ಆಹ್ವಾನ ನೀಡದೆ ಬಿಜೆಪಿಗರಿಂದ ರಾಜಕೀಯ: ಚಲುವರಾಯಸ್ವಾಮಿ ಟೀಕೆ

ಮಂಡ್ಯ, ಜನವರಿ 02: ಅಯೋಧ್ಯೆಯಲ್ಲಿ ಜನವರಿ 22ರಂದು ಶ್ರೀರಾಮಂದಿರ ಉದ್ಘಾಟನಾ ಸಮಾರಂಭಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡದೆ ಬಿಜೆಪಿಗರು ರಾಜಕೀಯ ಮಾಡುತ್ತಿದ್ದಾರೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಟೀಕಿಸಿದರು.

ಸಿರಿಧಾನ್ಯ ಮೇಳ ಕಾರ‌್ಯಕ್ರಮದಲ್ಲಿ ಆಗಮಿಸಿದ ಅವರನ್ನು ಭೇಟಿಯಾದ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಇಂತಹ ನಡವಳಿಕೆಯನ್ನು ನಾವು ನಿರೀಕ್ಷಿಸಿರಲಿಲ್ಲ ಎಂದರು.

Politics by BJP not inviting Siddaramaiah to inaugurate Ram Mandir: Chaluvarayaswamy criticizes

ಶ್ರೀರಾಮ ಎಲ್ಲರಿಗೂ ಸೇರಿದ ದೇವರು. ರಾಮಮಂದಿರ ಕಟ್ಟಿರೋದು ಬಿಜೆಪಿಯವರಿಗಿಂತ ನಾವೇ ಹೆಚ್ಚು ಖುಷಿ ಪಡುತ್ತೇವೆ. ರಾಮಮಂದಿರ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾವಣ ಮಾತ್ರ ಅಲ್ಲಾ ಸಿದ್ದರಾಮಯ್ಯ ಕೂಡ ರಾಮನ ವಿರೋಧಿ ಎಂಬ ಹೇಳಿಕೆ ಎಂದು ಮಾಜಿ ಸಚಿವ ಸುನೀಲ್ ಕುಮಾರ್‌ಗೆ ಟಾಂಗ್ ನೀಡಿದ ಅವರು, ಪಾಪ ಸುನೀಲ್ ಬಹಳ ಹೈ ಟೋನ್ ಬಳಸಿ ನೋಡಿದ್ರು ಆದರೆ ಅಧ್ಯಕ್ಷನು ಆಗಲಿಲ್ಲ, ವಿಪಕ್ಷ ನಾಯಕನು ಆಗಲಿಲ್ಲ. ಈಗ ಇನ್ನೇನಾದ್ರು ತಪ್ಪೊಗಬಹುದು ಎಂದು ಸುನೀಲ್, ಅಶ್ವಥ್ ನಾರಾಯಣ್ ಎಲ್ಲಾ ಕೂಗಾಡ್ತರೆ. ಅವರೆಲ್ಲರೂ ನನಗೂ ಆತ್ಮೀಯರೇ, ಪಾಪ ಕೂಗ್ಲಿ ಬಿಡಿ ಎಂದು ಪ್ರತಿಕ್ರಿಯಿಸಿದರು.

ನಮ್ಮ ಕುಟುಂಬದಿಂದ ಸ್ಪರ್ಧೆ ಮಾಡಲ್ಲ :

ಮುಂಬರುವ ಲೋಕಸಭಾ ಚುನಾವಣೆಗೆ ಸಚಿವರು ನಿಲ್ಲಬೇಕು ಎಂಬ ಸೂಚನೆ ನಮಗೆ ಹೈಕಮಾಂಡ್ ಕೊಟ್ಟಿಲ್ಲ. ನಮ್ಮ ಹೈಕಮಾಂಡ್ ಈ ರೀತಿಯ ಯಾವ ಸೂಚನೆಯನ್ನೂ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲೆಯ ಎಲ್ಲ ನಾಯಕರನ್ನೂ ಒಟ್ಟಾಗಿಸಿ ಅಭ್ಯರ್ಥಿ ಆಯ್ಕೆ ಮಾಡುವಂತೆ ಸೂಚನೆ ನಮ್ಮ ಹೈಕಮಾಂಡ್ ಸೂಚನೆ ಕೊಟ್ಟಿದೆ. ಅದನ್ನು ನಾವು ಶಿರಸಾ ವಹಿಸಿ ಪಕ್ಷದ ಸೂಚನೆಯನ್ನು ನಮ್ಮ ಜಿಲ್ಲೆಯ ಶಾಸಕರು, ಮುಖಂಡರು ನಿರ್ವಹಿಸುತ್ತೇವೆ. ಸಚಿವರು ಸ್ಪರ್ಧೆ ಮಾಡಬೇಕು ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ನಾನಾಗಲೀ, ನನ್ನ ಮನೆಯವರಾಗಲೀ ಯಾರೂ ಅಭ್ಯರ್ಥಿ ಆಗಲ್ಲ. ಈಗಾಗಲೇ ಅಭ್ಯರ್ಥಿ ಯಾರು ಎಂದು ನಿರ್ಧಾರ ಮಾಡಿಯಾಗಿದೆ. ಸೂಕ್ತ ಸಮಯದಲ್ಲಿ ಅದನ್ನು ಪ್ರಕಟಿಸುತ್ತೇವೆ ಎಂದು ಅಭ್ಯರ್ಥಿ ಆಯ್ಕೆ ವಿಚಾರವಾಗಿ ಸೂಚ್ಯವಾಗಿ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+