ಮಳವಳ್ಳಿಯಲ್ಲಿ ಬಾಲಕಿ ಹತ್ಯೆ: ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸಾರ್ವಜನಿಕರ ಒತ್ತಾಯ
ಮಳವಳ್ಳಿ, ಅಕ್ಟೋಬರ್ 12: ಪಟ್ಟಣದಲ್ಲಿ ಟ್ಯೂಶನ್ ಸೆಂಟರ್‌ನಲ್ಲಿ ಅಮಾನವೀಯ ಕೃತ್ಯಕ್ಕೆ ಬಲಿಯಾದ ಬಾಲಕಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಮಾಜಿ ಸಚಿವ ನರೇಂದ್ರ ಸ್ವಾಮಿ ಹಾಗೂ ಹಲವು ಸಂಘಟನೆಗಳು ಒತ್ತಾಯಿಸಿ ಪ್ರತಿಭಟನೆ ನಡೆಸಿವೆ. ಅಂತಾರಾಷ್ಟ್ರೀಯ ಹೆಣ್ಣಮಕ್ಕಳ ದಿನವೇ ಈ ಪೈಶಾಚಿಕ ಕೃತ್ಯ ನಡೆದಿದೆ. ಈ ದುರ್ಘಟನೆ ಪಟ್ಟಣಾದ್ಯಂತ ಕಾಳ್ಗಿಚ್ಚಿನಂತೆ ಹಬ್ಬಿದ್ದು , ಆರೋಪಿಗೆ ಕಠಿಣ ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಿಲಾಗಿದೆ.
ಮಳವಳ್ಳಿ ಪಟ್ಟಣದಲ್ಲಿ ಬಾಲಕಿಯ ಕೊಲೆ ಘಟನೆ ಖಂಡಿಸಿ ಸಮಾನ ಮನಸ್ಕರ ವೇದಿಕೆ, ಪಟ್ಟಣದ ಮುಸ್ಲಿಂ ಸಮುದಾಯ ಬೃಹತ್ ಮೌನ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ಪಿ ಎಂ ನರೇಂದ್ರಸ್ವಾಮಿ, " ಮಳವಳ್ಳಿಯ ಪಟ್ಟಣದಲ್ಲಿ ನಡೆದ ಪೈಶಾಚಿಕ ಕೃತ್ಯಕ್ಕೆ ಬಲಿಯಾದ ಬಾಲಕಿಯ ಕೊಲೆಗೆ ಆಡಳಿತ ಯಂತ್ರದ ಕುಸಿತವೇ ಕಾರಣ. ಇದೊಂದು ಕರಾಳ ದಿನ, ಕಪ್ಪುಚುಕ್ಕೆ ಇಂತಹ ಘಟನೆಗಳು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ . ಸಣ್ಣ ಮಗುವಿನ ಮೈಮೇಲೆ ಆಗಿರುವ ಗಾಯಗಳನ್ನು ನೋಡಿದರೆ ಆ ಮಗು ಎಷ್ಟು ನೋವು ತಿಂದಿರಬಹುದು. ಆ ಪಾಪಿಗೆ ಕಠಿಣ ಶಿಕ್ಷೆ ನೀಡಬೇಕು" ಎಂದು ಒತ್ತಾಯಿಸಿದರು.
ಶಾಸಕ ಡಾ. ಕೆ ಅನ್ನದಾನಿ ಪ್ರತಿಕ್ರಿಯಿಸಿ, ಪಟ್ಟಣದಲ್ಲಿ ಇಂತಹ ಕೃತ್ಯ ನಡೆದಿರುವುದು ತಲೆ ತಗ್ಗಿಸುವ ವಿಚಾರವಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ. ಕೃತ್ಯವೆಸಗಿದವರಿಗೆ ಹೊರಗೆ ಬಾರದಂತೆ ಜೀವಾವಧಿ ಶಿಕ್ಷೆ ನೀಡಬೇಕು. ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವ ಸಂಂಬಧ ಜಿಲ್ಲಾಧಿಕಾರಿಗಳ ಜೊತೆಗೆ ಮಾತುಕತೆ ನಡೆಸಲಾಗಿದೆ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ ಎಂದು ಮಳವಳ್ಳಿ ಶಾಸಕ ಡಾ. ಕೆ. ಅನ್ನದಾನಿ ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ, ಅಪ್ರಾಪ್ತ ಬಾಲಕಿ ಹತ್ಯೆ ಆರೋಪಕ್ಕೆ ಸಂಬಂಧಿಸಿದಂತೆ ಕಾಂತರಾಜುನನ್ನು ಬಂಧಿಸಲಾಗಿದ್ದು, ವಿಚಾರಣೆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಘಟನೆ ಹಿನ್ನಲೆ?
ಟೂಷನ್‌ಗೆ ಬಂದ ವಿದ್ಯಾರ್ಥಿನಿ ಮೇಲೆ ಇಂತಹ ಕೃತ್ಯ ನಡೆದಿರುವುದನ್ನು ಕುರುಬರ ಸಂಘ ತೀವ್ರವಾಗಿ ಖಂಡಿಸುತ್ತದೆ. ಆರೋಪಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇಂತಹ ಘಟನೆ ಮರುಕಳಿಸದಂತೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ಎಚ್ಚರ ವಹಿಸಬೇಕು ಎಂದು ಅಖಿಲ ಕರ್ನಾಟಕ ರಾಜ್ಯ ಕುರುಬರ ಸಂಘದ ಉಪಾಧ್ಯಕ್ಷ ಪುಟ್ಟಬಸವಯ್ಯ ತಿಳಿಸಿದ್ದಾರೆ.

ಮಂಗಳವಾರ ಪಟ್ಟಣದ ಎನ್‌ಇಎಸ್ ಬಡಾವಣೆಯ ಸುರೇಶ ಎಂಬುವರರ ಪುತ್ರಿ 10 ವರ್ಷದ ಮಗಳು ಬೆಳಗ್ಗೆ 11 ಗಂಟೆಗೆ ಟ್ಯೂಶನ್‌ಗೆ ಹೋಗಿ ಬರುತ್ತೇನೆ ಹೇಳಿ ಓದವಳು ಮನೆಗೆ ಬಂದಿರಲಿಲ್ಲ. ಸಂಜೆಯಾದರೂ ಬಾರದ ಕಾರಣ ಅಕ್ಕಪಕ್ಕ ಭಯಗೊಂಡ ಪೋಷಕರು ಟ್ಯೂಶನ್ ಸೆಂಟ್ ಹಾಗೂ ಅಕ್ಕಪಕ್ಕ ವಿಚಾರಿಸಿರಿ ಸಿಗದಿದ್ದಾಗ ಮಳವಳ್ಳಿ ಪುರ ಠಾಣೆಯಲ್ಲಿ ದೂರು ದಾಖಲಿಸಿ, ಪೊಲೀಸರ ಸಹಾಯದಿಂದ ಹುಡಕಾಟ ನಡೆಸಿದ್ದರು.
ಇದೇ ವೇಳೆ ಮೈಸೂರು ರಸ್ತೆಯ ಹೊಸದಾಗಿ ಕಟ್ಟುತ್ತಿರುವ ಮನೆಯ ಕಟ್ಟಡದ ಸಂಪ್‌ನಲ್ಲಿ ಬಾಲಕಿಯೊಬ್ಬಳ ಶವ ಬಿದ್ದಿರುವುದು ಪತ್ತೆಯಾದ ನಂತರ ಪೊಲೀಸರಿಗೆ ಮನೆ ಮಾಲೀಕ ನಾಗರಾಜು ವಿಷಯ ಮುಟ್ಟಿಸಿದ್ದರು. ಪೊಲೀಸರು ಪರಿಶೀಲನೆ ಮಾಡಿ ಬಾಲಕಿಯ ಶವವನ್ನು ಸುಪರ್ದಿಗೆ ಪಡೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.
ಪ್ರಕರಣ ಸಂಬಂಧ ಟ್ಯೂಶನ್ ಸೆಂಟರ್‌ನ ಉಸ್ತುವಾರಿ ವಹಿಸಿಕೊಂಡಿದ್ದ ಕಾಂತರಾಜು ಎಂಬುವವನನ್ನು ಬಂಧಿಸಿ ಮಳವಳ್ಳಿ ಪಟ್ಟಣ ಪೊಲೀಸಠಾಣೆ ಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.












Click it and Unblock the Notifications