ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Pay Farmer- ಮಂಡ್ಯದಲ್ಲಿ ರೈತರಿಂದ ಪೇ ಫಾರ್ಮರ್ ಅಭಿಯಾನ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಸೆಪ್ಟೆಂಬರ್‌ 25: ಕಾಂಗ್ರೆಸ್ಸಿಗರು ಪೇ ಸಿಎಂ ಆಂದೋಲನ ಹಮ್ಮಿಕೊಂಡು ರಾಜ್ಯಾದ್ಯಂತ ಬಿಜೆಪಿ ಸರ್ಕಾರವನ್ನು ಪೇಚಿಗೆ ಸಿಲುಕಿಸುವ ಕರ್ಯವನ್ನು ಮಾಡುತ್ತಿದೆ. ಇತ್ತ ಮಂಡ್ಯದಲ್ಲಿ ರೈತರು ಪೇ ಫಾರ್ಮರ್ ಅಭಿಯಾನ ಪ್ರಾರಂಭಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಕಾರ್ಖಾನೆಗೆ ಸರಬರಾಜು ಮಾಡುವ ಪ್ರತಿ ಟನ್ ಕಬ್ಬಿಗೆ 4,500 ರೂಪಾಯಿ ನೀಡಬೇಕು ಎಂದು ಒತ್ತಾಯಿಸಿದ್ದು, ಪೇ ಫಾರ್ಮರ್ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಇದೀಗ ಈ ಅಭಿಯಾನ ಎಲ್ಲೆಡೆ ಸದ್ದು ಮಾಡುತ್ತಿದೆ. ಈಗಾಗಲೇ ರೈತರು ಸರ್ಕಾರ, ಸಂಬಂಧಿಸಿದ ಸಚಿವರು, ಕಾರ್ಖಾನೆ ಆಡಳಿತ ಮಂಡಳಿಗಳಿಗೆ ಮನವಿ ಸಲ್ಲಿಸಿ ಪ್ರಸಕ್ತ ಸಾಲಿನಲ್ಲಿ ಪ್ರತಿ ಟನ್‌ ಕಬ್ಬಿಗೆ 4,500 ರೂಪಾಯಿ ನೀಡಬೇಕು ಎಂದು ಒತ್ತಾಯಿಸಿದ್ದರು. ಹಾಗೂ ರೈತರು ಹೋರಾಟವನ್ನು ತೀವ್ರಗೊಳಿಸಿದ್ದರು.

ಕಾಂಗ್ರೆಸ್‌ನಲ್ಲಿ ಕಡೆಗಣನೆಗೆ ಒಳಗಾದ ಮಂಡ್ಯ ಮಾಜಿ ಸಂಸದೆ ರಮ್ಯಾ, ಬಿಜೆಪಿ ಸೇರಲು ಒಲವು?ಕಾಂಗ್ರೆಸ್‌ನಲ್ಲಿ ಕಡೆಗಣನೆಗೆ ಒಳಗಾದ ಮಂಡ್ಯ ಮಾಜಿ ಸಂಸದೆ ರಮ್ಯಾ, ಬಿಜೆಪಿ ಸೇರಲು ಒಲವು?

ಇಷ್ಟೆಲ್ಲ ಮನವಿ ಸಲ್ಲಿಸಿದರೂ ಸರ್ಕಾರ ಮಾತ್ರ ಇತ್ತ ಕಿವಿಗೊಡಲಿಲ್ಲ. ಇದೀಗ ಪೇ ಪಾರ್ಮರ್ ಎಂಬ ಅಭಿಯಾನಕ್ಕೆ ರೈತ ಸಂಘ ನಾಂದಿ ಹಾಡಿದೆ.
ಪೇ ಫಾರ್ಮರ್ ಅಕ್ಸಪ್ಟೆಡ್ ಇಯರ್, ರೂಪಾಯಿ 4,500 ಪರ್ ಟನ್‌ ಪಾರ್ ಶುಗರ್‌ ಕೇನ್ ಎಂಬ ಘೋಷವಾಕ್ಯ ಕೂಗಿದ್ದಾರೆ. ಇದರೋದಿಗೆ ಪೇಟಿಎಂ ಚಿಹ್ನೆ ಬಳಸಿ ಅದಕ್ಕೆ ರೈತನ ಚಿತ್ರವನ್ನು ಕ್ಯೂಆರ್ ಕೋಡ್ ಮೂಲಕ ಸೃಷ್ಠಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಇನ್ನಾದರೂ ಸರ್ಕಾರಗಳು ರೈತರ ಬೆಳೆಗಳಿಗೆ ಸರಿಯಾದ ಬೆಲೆ ನೀಡಬೇಕು ಎಂದು ರೈತ ಮುಖಂಡರ ಒತ್ತಾಯವಾಗಿದೆ. ಇದಕ್ಕೆ ಸರ್ಕಾರ ಯಾವ ರೀತಿ ಸ್ಪಂಧಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Pay Farmer Campaign by Farmers in Mandya District

ಬಳ್ಳಾರಿಯಲ್ಲೂ ಪೇ ಸಿಎಂ ಅಭಿಯಾನ
ರಾಜ್ಯ ಸರ್ಕಾರದ ಎದುರಿಸುತ್ತಿರುವ ಭ್ರಷ್ಟಾಚಾರ ಆರೋಪದ ಪ್ರಚಾರ ಅಭಿಯಾನದ ಭಾಗವಾಗಿ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ಪೇಸಿಎಂ ಪೋಸ್ಟರ್ ಅಭಿಯಾನವನ್ನು ಬಳ್ಳಾರಿಯಲ್ಲೂ ನಡೆಸಲಾಯಿತು. ಬಳ್ಳಾರಿಯ ಮೋತಿ ವೃತ್ತದ ಬಳಿ ರೈಲ್ವೇ ನಿಲ್ದಾಣದ ಕಾಂಪೌಂಡ್‌ಗೆ ಸಂಸದರಾದ ಡಾ.ಕೆ.ಎಲ್.ಹನುಮಂತಯ್ಯ, ಡಾ.ಸಯ್ಯದ್ ನಾಸಿರ್ ಹುಸೇನ್ ಹಾಗೂ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಪೇ ಸಿಎಂ ಪೋಸ್ಟರ್ ಅಂಟಿಸಿದರು. ಈ ವೇಳೆ ಪೇಸಿಎಂಗೆ ಧಿಕ್ಕಾರ ಎಂಬ ಘೋಷನೆಗಳನ್ನು ಕೂಗಲಾಯಿತು.

ಸುಮಲತಾ ಸವಾಲು ಸ್ವೀಕರಿಸಿ, ಮೇಲುಕೋಟೆಯಲ್ಲಿ ಆಣೆ ಮಾಡಲು ಸಿದ್ಧ ಎಂದ ಜೆಡಿಎಸ್‌ ಶಾಸಕ ಪುಟ್ಟರಾಜುಸುಮಲತಾ ಸವಾಲು ಸ್ವೀಕರಿಸಿ, ಮೇಲುಕೋಟೆಯಲ್ಲಿ ಆಣೆ ಮಾಡಲು ಸಿದ್ಧ ಎಂದ ಜೆಡಿಎಸ್‌ ಶಾಸಕ ಪುಟ್ಟರಾಜು

ಪೇ ಸಿಎಂ ಪೋಸ್ಟರ್ ಅಂಟಿಸಿದ ಬಳಿಕ ಮಾತನಾಡಿದ ಶಾಸಕ ಬಿ. ನಾಗೇಂದ್ರ ಅವರು, ಬೆಂಗಳೂರು ಒಂದೇ ಅಲ್ಲ. ಇಡೀ ರಾಜ್ಯಾದ್ಯಂತ ಪೇ ಸಿಎಂ ಅಭಿಯಾನವನ್ನ ಮಾಡುತ್ತದ್ದೇವೆ. 224 ಕ್ಷೇತ್ರಗಳಲ್ಲೂ ಪೇ ಸಿಎಂ ಭಿತ್ತಿ ಪತ್ರ ಅಂಟಿಸುತ್ತೇವೆ. ಪೇ ಸಿಎಂ ಅಭಿಯಾನ ನೋಡಿ ಹೊರ ರಾಜ್ಯದ ಶಾಸಕರೂ ಆಶ್ಚರ್ಯ ಪಡುತ್ತಿದ್ದಾರೆ‌. 40% ಮಾಡಿದ್ದಾರಾ ಎಂದು ಆಶ್ಚರ್ಯದಿಂದ ಕೇಳುತ್ತಾ ಇದ್ದಾರೆ. ಬೊಮ್ಮಾಯಿ ಸರ್ಕಾರ 40 % ಗುಟ್ಟನ್ನು ನಾವು ರಟ್ಟು ಮಾಡುತ್ತಿದ್ದೇವೆ ಎಂದು ಆಕ್ರೋಶವನ್ನು ಹೊರಹಾಕಿದ್ದರು.

English summary
As Congress started PayCM protest campaign against government, the farmers in Mandya have started Pay Farmers abhiyana demanding for fair price for sugarcane. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X