ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎರಡ್ಹೊತ್ತಿನ ಊಟಕ್ಕೆ ಗತಿ ಇಲ್ದೋರು ಸೇನೆ ಸೇರ್ತಾರೆ ಎಂದ ಎಚ್ಡಿಕೆ!

|
Google Oneindia Kannada News

Recommended Video

Lok Sabha Elections 2019 : ಸೇನೆ ಬಗ್ಗೆ ಲಘುವಾಗಿ ಮಾತನಾಡಿದ ಸಿಎಂಗೆ ಎಲ್ಲೆಲ್ಲೂ ಬೈಗುಳ

ಮಂಡ್ಯ, ಏಪ್ರಿಲ್ 12: "ಆ ಗಡಿ ಕಾಯೋರು, ಶ್ರೀಮಂತರ ಮಕ್ಕಳಲ್ಲ. ಬಡವರ ಮಕ್ಕಳು, ಎರಡ್ಹೊತ್ತಿನ ಊಟಕ್ಕೆ ಗತಿ ಇಲ್ಲದೆ, ಕೆಲಸ ಇಲ್ಲದೆ ಕೊನೆಗೆ ಸೇನೆ ಸೇರಿರೋರು, ಅಂಥವರ ಬಾಳಿನ ಜೊತೆ ಚೆಲ್ಲಾಟ ಆಡುವ ಪ್ರಧಾನಿ ಇವರು" ಎಂದ ಎಚ್ ಡಿ ಕುಮಾರಸ್ವಾಮಿ ಅವರ ಮಾತು ಇದೀಗ ವಿವಾದ ಸೃಷ್ಟಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಅವಸರದಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ದೇಶದ ಹೆಮ್ಮೆಯ ಸೈನಿಕರನ್ನು ಅವಮಾನಿಸಿದ್ದಾರೆ ಎಂದು ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲ ಸಾಕಷ್ಟು ದೂರುಗಳು ಕೇಳಿಬರುತ್ತಿವೆ.

ಮೋದಿ ಸುಳ್ಳಿನ ಕಂತೆಯನ್ನು ಬಿಚ್ಚಿಟ್ಟು ಹೋಗಿದ್ದಾರೆ: ಕುಮಾರಸ್ವಾಮಿಮೋದಿ ಸುಳ್ಳಿನ ಕಂತೆಯನ್ನು ಬಿಚ್ಚಿಟ್ಟು ಹೋಗಿದ್ದಾರೆ: ಕುಮಾರಸ್ವಾಮಿ

'ಗತಿ ಇಲ್ಲದೆ, ಕೆಲಸವಿಲ್ಲದೆ ಸೇನೆಗೆ ಸೇರುತ್ತಾರೆ' ಅಂದರೆ ಏನರ್ಥ? ದೇಶದ ಮೇಲಿನ ಪ್ರೀತಿಯಿಂದ, ತಾಯ್ನಾಡನ್ನು ಕಾಪಾಡುವ ಅಭಿಮಾನದಿಂದ ಸೇನೆಗೆ ಸೇರುವವರನ್ನು ಈ ರೀತಿ ಅವಮಾನ ಮಾಡುವುದು ಸರಿಯೇ ಎಂದು ಹಲವರು ಎಚ್ ಡಿ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ.

ಕುಮಾರಸ್ವಾಮಿ ಅವರ ಈ ಹೇಳಿಕೆ ಟ್ವಿಟ್ಟರ್ ನಲ್ಲೂ ಸಾಕಷ್ಟು ಸದ್ದು ಮಾಡಿ, ಗುದ್ದೂ ಪಡೆದಿದೆ!

ಬಿಜೆಪಿ ಕರ್ನಾಟಕ

ಕುಮಾರಸ್ವಾಮಿ ಅವರೇ, ಜನರು ಸೇನೆ ಸೇರುವುದು ದೇಶದ ಮೇಲಿನ ಪ್ರೀತಿಗಾಗಿ. ನೀವ್ಯಾಕೆ ನಿಮ್ಮ ಮಗನನ್ನು ಲೋಕಸಭಾ ಚುನಾವಣೆಗೆ ನಿಲ್ಲಿಸುವ ಬದಲು ಸೇನೆಗೆ ಕಳಿಸಬಾರದು? ಆಗ ನಿಮಗೆ ಗೊತ್ತಾಗಬಹುದು ಒಬ್ಬ ಸೈನಿಕನಾಗಲು ಏನು ಬೇಕು ಎಂದು! - ಬಿಜೆಪಿ ಕರ್ನಾಟಕ

ರಾಜೀವ್ ಚಂದ್ರಶೇಖರ್

ಇದೇ ನಮ್ಮ ಸೈನಿಕರ ಬಗ್ಗೆ ಕುಮಾರಸ್ವಾಮಿ ತಿಳಿದುಕೊಂಡಿರುವವುದು. ತಂದೆಯ ರಾಜಕೀಯದಿಂದಾಗಿ ರಾಜಕಾರಣ ಮಾಡುವ, ಸಾರ್ವಜನಿಕ ಹಣದಿಂದ ಕುಟುಂಬ ನಡೆಸುವವರಿಗೆ ದೇಶಸೇವೆಯ ಅರ್ಥ ಎಲ್ಲಿಂದ ತಿಳಿಯಬೇಕು?- ರಾಜೀವ್ ಚಂದ್ರಶೇಖರ್, ಬಿಜೆಪಿ ಸಂಸದ

ಅವರೇ ಕಲ್ಲು ತೂರಿ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಕುಮಾರಸ್ವಾಮಿಅವರೇ ಕಲ್ಲು ತೂರಿ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಕುಮಾರಸ್ವಾಮಿ

ಪ್ರಲ್ಹಾದ್ ಜೋಷಿ

ಎಂಥ ವಿಪರ್ಯಾಸದ ಹೇಳಿಕೆ! ದೇಶಭಕ್ತಿಯನ್ನು ಸ್ವಲ್ಪವೂ ಅರ್ಥಮಾಡಿಕೊಳ್ಳದ ಎಚ್ ಡಿ ಕುಮಾರಸ್ವಾಮಿ ತಾಯಿ ಭಾರತಿಯ ಪ್ರತಿಯೊಬ್ಬ ಜವಾರಿಗೂ ಅವಮಾನ ಮಾಡಿದ್ದಾರೆ- ಪ್ರಲ್ಹಾದ್ ಜೋಷಿ

Array

ಸಿಟಿ ರವಿ

ಈ ಮನುಷ್ಯ ನಮ್ಮ ಸೈನಿಕರ ಧೈರ್ಯ ಮತ್ತು ತ್ಯಾಗವನ್ನು ಅವಮಾನಿಸಿದ್ದಾರೆ. ಮುಖ್ಯಮಂತ್ರಿಯಾಗಿರುವುದು ಹೋಗಲಿ, ಅವರೊಬ್ಬ ಮನುಷ್ಯರಾಗಿರಲೂ ಯೋಗ್ಯರಲ್ಲ- ಸಿಟಿರವಿ

ಚುನಾವಣಾ ಪ್ರಚಾರದ ವೇಳೆ ಕುಮಾರಸ್ವಾಮಿ ಕೆನ್ನೆಗೆ ಮುತ್ತುಚುನಾವಣಾ ಪ್ರಚಾರದ ವೇಳೆ ಕುಮಾರಸ್ವಾಮಿ ಕೆನ್ನೆಗೆ ಮುತ್ತು

English summary
Karnataka CM HD Kumaraswamy during a public rally in Madduru, yesterday said, Those who safeguard the borders are not children of rich people. They are children from poor families who can't afford two square meals. Here, is a PM who politicises their ultimate sacrifice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X