ಮಂಡ್ಯದಲ್ಲಿ 'ನಿಖಿಲ್ ಎಲ್ಲಿದ್ದೀಯಪ್ಪಾ' ಎಂದ ನಿಖಿಲ್ ಕುಮಾರಸ್ವಾಮಿ!
Recommended Video
ಮಂಡ್ಯ, ಮೇ 10: ಭಾರಿ ಟ್ರೋಲ್ ಆಗಿದ್ದ 'ನಿಖಿಲ್ ಎಲ್ಲಿದ್ದೀಯಪ್ಪ' ಬಗ್ಗೆ ನಿಖಿಲ್ ಕುಮಾರಸ್ವಾಮಿ ವ್ಯಂಗ್ಯವಾಗಿಯೇ ಪ್ರತಿಕ್ರಿಯಿಸಿದ್ದಾರೆ. 'ನಿಖಿಲ್ ಎಲ್ಲಿದ್ದೀಯಪ್ಪಾ' ಸಿನಿಮಾಗೆ ನಾನೇ ಹೀರೋ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಮಂಡ್ಯದಲ್ಲಿ ಮಾತನಾಡಿದ ನಿಖಿಲ್, 40 ವರ್ಷದಲ್ಲಿ ಗಳಿಸುವ ರಾಜಕೀಯ ಅನುಭವವನ್ನು 45 ದಿನಗಳಲ್ಲೇ ಗಳಿಸಿದ್ದೇನೆ, 'ನಿಖಿಲ್ ಎಲ್ಲಿದ್ದೀಯಪ್ಪಾ' ವಿಶ್ವ ಪ್ರಸಿದ್ಧಿ ಪಡೆದಿದೆ, ಆ ಟೈಟಲ್ ಯಾರಿಗೂ ಕೊಡಲ್ಲ, ನಾನೇ ಆ ಸಿನಿಮಾ ಮಾಡ್ತೀನಿ' ಎಂದು ಹೇಳಿದರು.
ವಿರೋಧಿಗಳು ನನಗೆ ಅವಮಾನ ಮಾಡಲೆಂದು ಆ ವಿಡಿಯೋವನ್ನು ವೈರಲ್ ಮಾಡಿದರು, ಆದರೆ ಅದೇ ನನಗೆ ಖ್ಯಾತಿ ಗಳಿಸಿಕೊಟ್ಟಿತು, ಫಿಲಂ ಛೇಂಬರ್‌ನಲ್ಲೂ ಆ ಟೈಟಲ್‌ಗೆ ಬೇಡಿಕೆ ಹೆಚ್ಚಿತು, ಪುಟ್ಟರಾಜಣ್ಣ (ಸಚಿವ ಸಿ.ಎಸ್.ಪುಟ್ಟರಾಜು) ನಿರ್ಮಾಣ ಮಾಡ್ತಾರೆ, ನಾನೇ ಹೀರೋ ಎಂದು ಹಾಸ್ಯ ಮಾಡಿದರು.

ಮಾಧ್ಯಮಗಳ ಬಗ್ಗೆ ನಿಖಿಲ್ ಕುಟುಕು
ಮಾಧ್ಯಮಗಳ ಬಗ್ಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ನಿಖಿಲ್‌ಗೆ ಹಿನ್ನಡೆ ಆಗುತ್ತದೆಯೆಂದು ಮಾಧ್ಯಮಗಳು ಪದೇ-ಪದೇ ಹೇಳಿದ ಕಾರಣದಿಂದಲೇ, ನಾವು ಎಚ್ಚರಿಕೆಯಿಂದ ಕಾರ್ಯ ಮಾಡಲು ಸಾಧ್ಯವಾಯಿತು, ಇದಕ್ಕೆ ಮಾಧ್ಯಮಗಳಿಗೆ ಧನ್ಯವಾದ ಹೇಳಬೇಕು ಎಂದು ಅವರು ಹೇಳಿದರು.

ನಾನು ಎಲ್ಲೂ ಹೋಗಿಲ್ಲ ಮಂಡ್ಯದಲ್ಲೇ ಇದ್ದೇನೆ: ನಿಖಿಲ್
ಚುನಾವಣೆ ನಂತರ ನಾನು ವಿಶ್ರಾಂತಿ ಪಡೆಯುತ್ತಿದ್ದೇನೆ, ವಿದೇಶಕ್ಕೆ ತೆರಳಿದ್ದೇನೆ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸಿದರು, ಆದರೆ ನಾನು ಇಲ್ಲೇ ಇದ್ದೇನೆ, ಮಂಡ್ಯದಲ್ಲಿ ಶಾಲೆ-ಕಾಲೇಜುಗಳನ್ನು ಸ್ಮಾರ್ಟ್ ಮಾಡುವ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ಹೇಳಿದರು.

ಬಹುವಾಗಿ ಟ್ರೋಲ್ ಆಗಿದ್ದ 'ನಿಖಿಲ್ ಎಲ್ಲಿದ್ದೀಯಪ್ಪಾ'
'ನಿಖಿಲ್ ಎಲ್ಲಿದ್ದೀಯಪ್ಪಾ' ಬಹುವಾಗಿ ಟ್ರೋಲ್ ಆಗಿತ್ತು, ಈ ವರೆಗೆ ಅಷ್ಟೋಂದು ದೊಡ್ಡ ಮಟ್ಟದಲ್ಲಿ ಟ್ರೋಲ್ ಆದ ಮತ್ತೊಂದು ವಿಡಿಯೋ ಕನ್ನಡದಲ್ಲಿ ಯಾವುದೂ ಇಲ್ಲ. ಅಮೆರಿಕ, ಚೀನಾ, ದಕ್ಷಿಣ ಆಫ್ರಿಕಾ ಹಲವು ಕಡೆಗಳನ್ನು 'ನಿಖಿಲ್ ಎಲ್ಲಿದ್ದೀಯಪ್ಪಾ' ಟ್ರೋಲ್ ಆಗಿತ್ತು.

ಜಾಗ್ವಾರ್ ಸಿನಿಮಾದ ಸಂದರ್ಭದ ವಿಡಿಯೋ
ಜಾಗ್ವಾರ್ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕುಮಾರಸ್ವಾಮಿ ಅವರು 'ನಿಖಿಲ್ ಎಲ್ಲಿದ್ದೀಯಪ್ಪಾ' ಎಂದು ಕರೆಯುವ ವಿಡಿಯೋವನ್ನು ಮಂಡ್ಯ ಚುನಾವಣೆ ಸಮಯದಲ್ಲಿ ವೈರಲ್ ಮಾಡಲಾಗಿತ್ತು. ವಿಡಿಯೋದಲ್ಲಿ ಕುಮಾರಸ್ವಾಮಿ ಮತ್ತು ನಿಖಿಲ್ ನಡುವೆ ನಡೆಯುವ ನಾಟಕೀಯ ರೀತಿಯ ಸಂಭಾಷಣೆಯನ್ನು ಬಹುವಾಗಿ ಟ್ರೋಲ್ ಮಾಡಲಾಗಿತ್ತು.

ಮಂಡ್ಯದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಭಾಗಿ
ಮಂಡ್ಯ ಪುರಸಭೆ ಚುನಾವಣೆಗೆ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಇಂದು ನಿಖಿಲ್ ಕುಮಾರಸ್ವಾಮಿ ಅವರು ಭಾಗವಹಿಸಿದ್ದರು. ಸಭೆಯಲ್ಲಿ ಸಚಿವ ಪುಟ್ಟರಾಜು, ಮಂಡ್ಯ ಜೆಡಿಎಸ್ ಶಾಸಕರು ಭಾಗವಹಿಸಿದ್ದರು.












Click it and Unblock the Notifications