ನಿಖಿಲ್ ಸೋತಿದ್ದಕ್ಕೆ ಬೆರಳು ಕತ್ತರಿಸಿಕೊಂಡ ಹುಚ್ಚು ಅಭಿಮಾನಿ

Recommended Video

      ನಿಖಿಲ್ ಸೋತಿದ್ದಕ್ಕೆ ಇಂಥ ಹುಚ್ಚಾಟಾನಾ? | Oneindia Kannada

      ಮಂಡ್ಯ, ಮೇ 25: ರಾಜಕಾರಣದಲ್ಲಿ ಸೋಲು-ಗೆಲುವು ಸಾಮಾನ್ಯ ಎಂಬುದು ರಾಜಕಾರಣಿಗಳಿಗೆ ಗೊತ್ತಿರುತ್ತದೆ. ಆದರೆ ಸೋಲು-ಗೆಲುವನ್ನು ರಾಜಕಾರಣಿಗಳಷ್ಟೆ ಮುಕ್ತ ಮನಸ್ಸಿನಿಂದ ತೆಗೆದುಕೊಳ್ಳಲು ಕಾರ್ಯಕರ್ತರಿಗೆ ಆಗುವುದಿಲ್ಲ. ಅವರು ಹೋರಾಟದ ಮುಂಚೂಣಿಯಲ್ಲಿರುವವರು ಹಾಗಾಗಿಯೇ ಅವರಿಗೆ ಸೋಲು ಸಹಿಲಾಗದು.

      ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಸೋಲನುಭವಿಸಿದ್ದಕ್ಕೆ ಹುಚ್ಚು ಅಭಿಮಾನಿಯೊಬ್ಬ ತನ್ನ ತೋರು ಬೆಳನ್ನೇ ಕತ್ತರಿಸಿಕೊಂಡಿದ್ದಾನೆ.

      ಮಂಡ್ಯದ ಮದ್ದೂರು ತಾಲ್ಲೂಕಿನ ಅಬಲವಾಡಿ ಗ್ರಾಮದ ಯುವಕ ಸುನಿಲ್ ತನ್ನ ತೋರು ಬೆರಳನ್ನೇ ಕತ್ತರಿಸಿಕೊಂಡಿದ್ದಾನೆ. ಈ ಮೂಲಕ ನಿಖಿಲ್ ಕುಮಾರಸ್ವಾಮಿ ಪರ ಅಂದಾಭಿಮಾನ ಮೆರೆದಿದ್ದಾನೆ.

      Nikhil Kumaraswamy follower choped his finger

      ತನ್ನ ಮತ ನಿಖಿಲ್ ಅನ್ನು ಗೆಲ್ಲಿಸಲಿಲ್ಲವೆಂಬ ಕೋಪಕ್ಕೆ ಶಾಯಿ ಹಾಕಿದ್ದ ಎಡಗೈನ ತೋರುಬೆಳನನ್ನು ಸುನಿಲ್ ಕತ್ತರಿಸಿಕೊಂಡಿದ್ದಾನೆ.

      ಈತ ಜೆಡಿಎಸ್ ಕಾರ್ಯಕರ್ತನಾಗಿದ್ದು ನಿಖಿಲ್ ಕುಮಾರಸ್ವಾಮಿ ಅಭಿಮಾನಿಯಾಗಿದ್ದ. ಚುನಾವಣೆ ಸಮಯದಲ್ಲಿ ನಿಖಿಲ್ ಕುಮಾರಸ್ವಾಮಿ ಪರ ಜೋರು ಪ್ರಚಾರ ನಡೆಸಿದ್ದ. ಆದರೆ ಸೋಲಿನಿಂದ ತೀವ್ರ ವಿಚಲಿತನಾಗಿ ಈ ಹುಚ್ಚಾಟ ಮರೆದಿದ್ದಾನೆ.

      ಮಂಡ್ಯದಲ್ಲಿ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ಸುಮಲತಾ ವಿರುದ್ಧ 1.25 ಲಕ್ಷ ಮತಗಳ ಭಾರಿ ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+