ಮಂಡ್ಯದಲ್ಲಿ ಸಾಕು ನಾಯಿಗಳ ನಿಗೂಢ ಸಾವು, ಕಳ್ಳರ ಕೃತ್ಯದ ಶಂಕೆ

Posted By: Nayana
Subscribe to Oneindia Kannada

ಮಂಡ್ಯ, ಜನವರಿ 3 : ಸಾಕು ನಾಯಿಗಳು ನಿಗೂಢವಾಗಿ ಸಾವನ್ನಪ್ಪುತ್ತಿರುವ ಘಟನೆಯು ಮಂಡ್ಯ ಜಿಲ್ಲೆಯ ದ್ವಾರಕನಗರದ ನಿವಾಸಿಗಳಲ್ಲಿ ಅನುಮಾನ ಮೂಡಿಸಿದೆ.

ದ್ವಾರಕನಗರವೊಂದರಲ್ಲಿ ಕಳೆದೊಂದು ವಾರದಲ್ಲಿ 9 ಸಾಕು ನಾಯಿಗಳು ಮೃತಪಟ್ಟಿದೆ. ಇದರ ಹಿಂದೆ ಕಳ್ಳರರು ಅಥವಾ ದರೋಡೆಕೋರರ ಕೈವಾಡವಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ನಾಯಗಳನ್ನು ವಿಷ ಹಾಕಿ ಕೊಲೆ ಮಾಡಲಾಗಿದೆ. ಕಳ್ಳತನ ಮಾಡಲು ಬಂದಿರುವ ವ್ಯಕ್ತಿಗಳಿಂದ ಕೃತ್ಯ ನಡೆದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

Mysteriously pets missing in Mandya

ಒಂದು ವಾರದಿಂದ ನಾಯಿಗಳು ನಾಪತ್ತೆಯಾಗುತ್ತಿದೆ. ನಂತರದಲ್ಲಿ ಶವವಾಗಿ ಕಣ್ಣಿಗೆ ಬೀಳುತ್ತಿದೆ. ದೊಡ್ಡ ದೊಡ್ಡ ಮನೆಗಳನ್ನು ನೋಡಿಕೊಂಡು ಸಾಕು ನಾಯಿಗಳನ್ನು ಸಾಯಿಸಲಾಗುತ್ತಿದೆ. ಈ ಘಟನೆಯಿಂದ ಬಡಾವಣೆಯ ನಿವಾಸಿಗಳು ಆತಂಕಗೊಂಡಿದ್ದಾರೆ. ರಾತ್ರಿ ಹೊತ್ತು ಮನೆಯಿಂದ ಹೊರಕ್ಕೆ ಕಾಲಿಡಲು ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ನಾಯಿಗಳ ಸಾವಿಗೆ ಸ್ಪಷ್ಟ ಕಾರಣಗಳು ಏನು ಎಂದು ಇದುವರೆಗೂ ತಿಳಿದುಬಂದಿಲ್ಲ. ಆದರೆ ನಾಯಿಗಳ ಸಾವು ಮಾತ್ರ
ಮುಂದುವರೆದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In last one week, nine pets were mysteriously missing and found later dead in Dwaraka Nagar of Mandya town. The residents of the area have alleged that thieves were poisoning the dogs and killed.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ