ಮಂಡ್ಯ ಟಿಕೆಟ್ ಬಗ್ಗೆ ಸ್ವತಃ ಅಂಬರೀಶ್ ಹೀಗಂದಿದ್ದಾರೆ

Posted By:
Subscribe to Oneindia Kannada

ಮಂಡ್ಯ, ಏಪ್ರಿಲ್ 10: ಮಂಡ್ಯ ರಾಜಕೀಯ ಸದಾ ಕುತೂಹಲದ್ದು, ಅದರಲ್ಲೂ ಈ ಬಾರಿ ಅಂಬರೀಶ್ ನಡೆಯಂತೂ ಮಂಡ್ಯ ರಾಜಕೀಯದತ್ತ ಎಲ್ಲರ ಚಿತ್ತ ನೆಡುವಂತೆ ಮಾಡಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಅಂಬರೀಶ್ ಅವರು ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿಯೇ ಹಾಕದೆ, ಪ್ರಚಾರಕ್ಕೂ ಇಳಿಯದೇ ಬಿಂದಾಸ್‌ ಆಗಿ ಚಲನಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇಂತಿಪ್ಪ ಅಂಬರೀಶ್ ಅವರನ್ನು ಸುದ್ದಿಗಾರರು ಭೇಟಿ ಮಾಡಿದಾಗ ತಮ್ಮ ಚುನಾವಣಾ ಸ್ಪರ್ಧೆ ಬಗ್ಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ ಅಂಬಿ.

ಮಂಡ್ಯದ ಟಿಕೆಟ್ : ಹೊಸ ಬೇಡಿಕೆ ಮುಂದಿಟ್ಟ ಅಂಬರೀಶ್!

'ಕಾಂಗ್ರೆಸ್‌ನಲ್ಲಿ ಬಿ ಫಾರಂ ಅನ್ನು ಅಭ್ಯರ್ಥಿಗೆ ಕೊಟ್ಟರೆ ಅದು ಕನ್‌ಫರ್ಮ್ ಆದಂತಲ್ಲ, ಅಭ್ಯರ್ಥಿ ಅದನ್ನು ಚುನಾವಣಾ ಅಧಿಕಾರಿಗೆ ಕೊಟ್ಟು ನಾಮಪತ್ರ ಸಲ್ಲಿಕೆಯಾದಾಗಲಷ್ಟೆ ಕನ್‌ಫರ್ಮ್‌ ಆಗುವುದು' ಎಂದಿದ್ದಾರೆ. ಆ ಮೂಲಕ ತಮಗೆ ಇನ್ನೂ ಟಿಕೆಟ್ ಕನ್‌ಫರ್ಮ್‌ ಆಗಿಲ್ಲ ಎಂದು ಸೂಚ್ಯವಾಗಿ ತಿಳಿಸಿದ್ದಾರೆ ಅಂಬರೀಶ್.

MLA Ambarish talked about his election ticket

'ಮೊನ್ನೆ ಮೈಸೂರಿನಿಂದ ವಾಪಾಸ್ ಬರುವಾಗ ಭೇಟಿ ಆಗುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದ್ದರು, ಅಂದು ಅವರು ಹೊರಡುವುದು ತಡವಾಯಿತು, ಜೊತೆಗೆ ಅವರ ತಲೆಗೆ ಪೆಟ್ಟು ಬಿದ್ದಿದ್ದರಿಂದ ಭೇಟಿ ಸಾಧ್ಯವಾಗಿಲ್ಲ' ಎಂದು ಅವರು ಹೇಳಿದರು.

ಅಂಬರೀಶ್ ಟಿಕೆಟ್ ಆಕಾಂಕ್ಷಿಯಾಗಿದ್ದರು, ಕೆಲವು ಒಳ ಒತ್ತಡಗಳಿಂದಾಗಿ ಅವರಿಗೆ ಟಿಕೆಟ್ ತಪ್ಪುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಅಂಬರೀಶ್‌ ಅವರು ರಾಜ್ಯ ನಾಯಕರುಗಳ ಮೂಲಕ ಹೈಕಮಾಂಡ್‌ ಮೇಲೆ ಒತ್ತಡ ಹೇರಿದ್ದು, ಅವರಿಗೇ ಟಿಕೆಟ್ ದೊರಕುತ್ತದೆ ಎನ್ನಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
MLA Ambrish who ticket aspirant from Mandya is talked about his election ticket with media persons. He said in congress no one's ticket is confirmed till the candidate submit his nomination. anything can happen in congress party'.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ