Get Updates
Get notified of breaking news, exclusive insights, and must-see stories!

ಮಂಡ್ಯದಲ್ಲಿ ಅಂಬರೀಶ್ ಗೆ ಶಾಕ್ ನೀಡಿದ ರಮ್ಯಾ ನಡೆ!

Recommended Video

      ಮಂಡ್ಯದಲ್ಲಿ ಅಂಬರೀಶ್ ಗೆ ಶಾಕ್ ನೀಡಿದ ರಮ್ಯಾ ನಡೆ! | Oneindia Kannada

      ಮಂಡ್ಯ, ನವೆಂಬರ್ 15: ಇದುವರೆಗೂ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ಮೌನವಾಗಿದ್ದ ಅಂಬರೀಶ್ ಅವರಿಗೆ ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಭಯ ಆರಂಭವಾಗಿದೆಯಾ? ಈ ಬಾರಿ ಕಾಂಗ್ರೆಸ್ ನಿಂದ ಅವರಿಗೆ ಟಿಕೆಟ್ ಸಿಗುತ್ತದೆಯಾ? ಮಂಡ್ಯ ರಾಜಕೀಯವೀಗ ಕೌತುಕದ ತಾಣವಾಗಿದೆ!

      ತಮ್ಮನ್ನು ಬಿಟ್ಟರೆ ಕಾಂಗ್ರೆಸ್ ನಲ್ಲಿ ಗೆಲ್ಲೋರು ಬೇರೆ ಯಾರೂ ಇಲ್ಲ ಎಂಬ ಆತ್ಮವಿಶ್ವಾಸ ಅಂಬರೀಶ್ ಅವರದ್ದಾಗಿತ್ತು. ಆದರೆ ಯಾವಾಗ ರಮ್ಯಾ ಮಂಡ್ಯಕ್ಕೆ ಬರುತ್ತಿದ್ದಾರೆ, ಇಲ್ಲಿ ಮನೆಯನ್ನೂ ಕೂಡ ಖರೀದಿಸಿದ್ದಾರೆ ಎಂಬಿತ್ಯಾದಿ ಮಾತುಗಳು ಸಾರ್ವಜನಿಕ ವಲಯದಲ್ಲಿ ತೇಲಿ ಬರತೊಡಗಿದವೋ ಅಂಬರೀಶ್ ಅವರಿಗೆ ಆಗ ಆತಂಕ ಶುರುವಾಗಿದೆ!

      ಅಂಬರೀಶ್ ಅವರನ್ನು ಆರಿಸಿ ಕಳುಹಿಸಿ ಸಚಿವರಾದರೂ ಜಿಲ್ಲೆಗೆ ಅವರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಯಾವುದೇ ಹೋರಾಟ, ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ವಸತಿ ಖಾತೆ ನೀಡಿದರೂ ಅದರಲ್ಲಿ ನಿರೀಕ್ಷಿತ ಸಾಧನೆ ಮಾಡಲಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರನ್ನು ಕೈಬಿಟ್ಟರು. ಇದರಿಂದ ಕೋಪಗೊಂಡ ಅಂಬರೀಶ್ ರಾಜಕಾರಣದಿಂದ ದೂರ ಉಳಿದುಬಿಟ್ಟರು. ತಾನೊಬ್ಬ ಜನಪ್ರತಿನಿಧಿ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಬೇಕೆನ್ನುವ ಯೋಚನೆಯನ್ನು ಕೂಡ ಅವರು ಮಾಡಲಿಲ್ಲ.

      ಹೀಗಿರುವಾಗಲೇ ಹೈಕಮಾಂಡ್ ಗೆ ಹತ್ತಿರವಾದ ಮಾಜಿ ಸಂಸದೆ ರಮ್ಯಾ ಮಂಡ್ಯದಲ್ಲಿ ತನ್ನ ಛಾಪು ಮೂಡಿಸಲು ಮುಂದಾಗಿದ್ದು, ಇದೀಗ ಅವರೇ ಮುಂದಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಎನ್ನಲಾಗುತ್ತಿದ್ದು, ಇದು ಅಂಬರೀಶ್ ಅವರ ನಿದ್ದೆಗೆಡಿಸಿದೆ ಎಂದರೆ ತಪ್ಪಾಗಲಾರದು.

      ಕ್ಷೇತ್ರ ಅಭಿವೃದ್ಧಿಯೂ ಆಗಿಲ್ಲ

      ಕ್ಷೇತ್ರ ಅಭಿವೃದ್ಧಿಯೂ ಆಗಿಲ್ಲ

      ಇನ್ನು ಅಂಬರೀಶ್ ಅವರ ಬಗ್ಗೆ ಹೇಳುವುದಾದರೆ ಪಕ್ಷದ ಅಭಿವೃದ್ಧಿಗಾಗಲೀ, ಮಂಡ್ಯ ಜಿಲ್ಲೆಯ ಅಭಿವೃದ್ಧಿಗಾಗಲೀ ಯಾವುದೇ ರೀತಿಯ ಕೊಡುಗೆಗಳನ್ನು ನೀಡಲಿಲ್ಲ. ನೂರಾರು ಮಂದಿ ರೈತರು ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಒಂದು ದಿನವೂ ರೈತರ ಬಳಿಗೆ ಹೋಗಿ ಸಮಸ್ಯೆ ಆಲಿಸಲಿಲ್ಲ. ಕಾವೇರಿ ನೀರು ವಿಚಾರದಲ್ಲಿ ತಮ್ಮ ನಿಲುವನ್ನು ಪ್ರಕಟಿಸಲಿಲ್ಲ. ರೈತರ ಬೆಂಬಲಕ್ಕೂ ನಿಲ್ಲಲಿಲ್ಲ. ಇದರ ಬಗ್ಗೆ ಇಲ್ಲಿನ ರೈತರಿಗೆ ಆಕ್ರೋಶ ಇದ್ದೇ ಇದೆ.

      ಸದನದಲ್ಲಿ ಹಾಜರಾತಿಯೂ ಇಲ್ಲ!

      ಸದನದಲ್ಲಿ ಹಾಜರಾತಿಯೂ ಇಲ್ಲ!

      ಮಂಡ್ಯದ ಜನ ಒಂದಲ್ಲ ಒಂದು ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದಾಗಲೂ ಅವರು ಸದನಕ್ಕೆ ಹೋಗಿ ಸಮಸ್ಯೆ ಬಗ್ಗೆ ಗಮನಸೆಳೆಯಲಿಲ್ಲ. ಇದುವರೆಗೆ ಅವರು ಕೇವಲ ನಾಲ್ಕು ದಿನ ಮಾತ್ರವಂತೆ ಸದನಕ್ಕೆ ಹಾಜರಾಗಿರುವುದು. ಇದೆಲ್ಲವನ್ನು ಗಮನಿಸಿರುವ ಕಾಂಗ್ರೆಸ್ ನಾಯಕರು ಮುಂದಿನ ಚುನಾವಣೆಯಲ್ಲಿ ಮತ್ತೆ ಅವರಿಗೆ ಟಿಕೆಟ್ ನೀಡಿದರೆ ಗೆಲುವು ಕಷ್ಟ ಎನ್ನುವ ನಿರ್ಧಾರಕ್ಕೆ ಬಂದಿದ್ದು, ಹೀಗಾಗಿಯೇ ರಮ್ಯಾ ಅವರನ್ನು ಮಂಡ್ಯದಿಂದ ಸ್ಪರ್ಧಿಸುವಂತೆ ಮಾಡುತ್ತಿದ್ದಾರೆ ಎನ್ನಲಾಗಿದೆ.

      ಜೆಡಿಎಸ್ ಸೇರ್ತಾರಾ ರೆಬೆಲ್ ಸ್ಟಾರ್?

      ಜೆಡಿಎಸ್ ಸೇರ್ತಾರಾ ರೆಬೆಲ್ ಸ್ಟಾರ್?

      ಒಂದು ವೇಳೆ ಕಾಂಗ್ರೆಸ್ ನಿಂದ ರಮ್ಯಾ ಸ್ಪರ್ಧೆಗಿಳಿದರೆ ಪಕ್ಷಕ್ಕೆ ರಾಜೀನಾಮೆ ನೀಡಿ ಅಂಬರೀಶ್ ಜೆಡಿಎಸ್ ನಿಂದ ಸ್ಪರ್ಧಿಸುತ್ತಾರೆ ಎಂಬುದು ಇದೀಗ ಹರಿದಾಡುತ್ತಿರುವ ಹೊಸ ಗಾಸಿಫ್. ಆದರೆ ಇದನ್ನು ಹೆಚ್ಚಿನ ಜನ ನಂಬಲು ಸಾಧ್ಯವಿಲ್ಲ. ಜತೆಗೆ ಮೊದಲಿನಂತೆ ಮತದಾರರು ಇವರಿಗೆ ಮತ ಹಾಕಿ ಗೆಲ್ಲಿಸುತ್ತಾರೆ ಎಂಬ ನಂಬಿಕೆಯೂ ಇಲ್ಲದಾಗಿದೆ.

      ಈ ಸಂದರ್ಭದ ಲಾಭ ಪಡೆಯುತ್ತಾರಾ ರಮ್ಯಾ?

      ಈ ಸಂದರ್ಭದ ಲಾಭ ಪಡೆಯುತ್ತಾರಾ ರಮ್ಯಾ?

      ಒಂದು ಹಂತದಲ್ಲಿ ಅಂಬರೀಶ್ ಸೋಲುವ ಕುದುರೆ ಎಂಬಂತೆ ಮಂಡ್ಯದಲ್ಲಿ ಬಿಂಬಿತರಾಗುತ್ತಿದ್ದಾರೆ. ಇದರ ಲಾಭ ರಮ್ಯಾ ಅವರಿಗೆ ಆಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ. ಮುಂದಿನ ಅಂಬರೀಶ್ ಅವರ ನಡೆ ಏನು ಎಂಬುದು ಮಾತ್ರ ಸದ್ಯ ನಿಗೂಢವಾಗಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+