ಮಂಡ್ಯ: ಪೊಲೀಸರಿಂದ ಗ್ರಾಮ ವಾಸ್ತವ್ಯ, ಕುಂದು-ಕೊರತೆ ಆಲಿಕೆ
ಮಂಡ್ಯ, ಜುಲೈ 30: ಜಿಲ್ಲೆಯ ಪೊಲೀಸರು ವಿನೂತಮ ಕಾರ್ಯಕ್ರಮಕ್ಕೆ ನಾಂದಿ ಹಾಡಿದ್ದು, ಕುಮಾರಸ್ವಾಮಿ ಅವರಂತೆಯೇ ಪೊಲೀಸರು ಕೂಡ ಇನ್ನು ಮುಂದೆ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.
ಜಿಲ್ಲಾ ವರಿಷ್ಠಾಧಿಕಾರಿ ಡಾ.ಶಿವಪ್ರಕಾಶ್ ದೇವರಾಜ್ ಅವರು ಈ ಸಂಪ್ರದಾಯಕ್ಕೆ ನಾಂದಿ ಹಾಡಿದ್ದು, ನಿನ್ನೆ ಅವರು ಜಿಲ್ಲೆಯ ಸೋಮನಹಳ್ಳಿ ಗ್ರಾಮದಲ್ಲಿ ರಾತ್ರಿ ಸಭೆ ನಡೆಸಿ ಅದೇ ಊರಿನ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಮಾಡಿದರು.
ಜಿಲ್ಲೆಯ ಎಲ್ಲ ಪೊಲೀಸ್ ಅಧಿಕಾರಿಗಳು ಗ್ರಾಮಗಳಲ್ಲಿ ವಾಸ್ತವ್ಯ ಮಾಡಬೇಕು ಎಂದು ಎಸ್‌ಪಿ ಅವರು ಸೂಚನೆ ನೀಡಿದ್ದು, ಎಸ್‌ಐ, ಸಿಐ ಸೇರಿ ಎಲ್ಲ ಅಧಿಕಾರಿಗಳು ಯಾವುದಾದರೂ ಒಂದು ಗ್ರಾಮದಲ್ಲಿ ಸಭೆ ನಡೆಸಿ, ಜನರ ಕುಂದು-ಕೊರತೆ ಆಲಿಸಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.

ಕುಮಾರಸ್ವಾಮಿ ಅವರು ಮೊದಲ ಬಾರಿಗೆ 2006 ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಗ್ರಾಮ ವಾಸ್ತವ್ಯ ಪ್ರಾರಂಭಿಸಿದರು. ಆಗ ಅದು ಭಾರಿ ಜನಪ್ರಿಯಗೊಂಡಿತ್ತು. ಕುಮಾರಸ್ವಾಮಿ ಅವರಿಗೆ ರಾಷ್ಟ್ರಮಟ್ಟದಲ್ಲಿ ಹೆಸರು ತಂದುಕೊಟ್ಟಿತ್ತು, ರಾಜಕೀಯ ವಲಯದಲ್ಲಿ ಅವರಿಗೆ ಜನಪ್ರಿಯತೆಯನ್ನೂ ತಂದುಕೊಟ್ಟಿತ್ತು.












Click it and Unblock the Notifications