ಮಂಡ್ಯ ಸಂಸದ ಪುಟ್ಟರಾಜು ರಾಜೀನಾಮೆ ನಿರ್ಧಾರ ವಾಪಸ್

By: ಮಂಡ್ಯ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಸೆಪ್ಟೆಂಬರ್ 25: ಸಂಸದ ಪುಟ್ಟರಾಜು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನು ಭಾನುವಾರ ವಾಪಸ್ ಪಡೆದಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರವಾಗಿ ಮೇಲುಸ್ತುವಾರಿ ಸಮಿತಿ ಆದೇಶ ಬಂದ ನಂತರ ರಾಜೀನಾಮೆ ಘೋಷಿಸಿದ್ದರು. ದೆಹಲಿಗೆ ತೆರಳಿ ಸ್ಪೀಕರ್ ಗೆ ರಾಜೀನಾಮೆ ಪತ್ರ ಸಲ್ಲಿಸಲು ತೆರಳಿದ್ದರು.

ಆ ವೇಳೆ ಸ್ಪೀಕರ್ ಇರದ ಕಾರಣಕ್ಕೆ ಸಂಸತ್ ಭವನದ ಎದುರು ಕಾವೇರಿ ನೀರು ಬಿಡುಗಡೆ ವಿಛಾರವಾಗಿ ಪ್ರತಿಭಟನೆ ನಡೆಸಿ, ವಾಪಸ್ ಬಂದಿದ್ದರು. ಇದೇ ವಿಛಾರವಾಗಿ ಚರ್ಚಿಸಲು ಮುಖಂಡ ಜಿ.ಮಾದೇಗೌಡ ಅವರ ಬಳಿ ತೆರಳಿದ್ದರು. ಆ ವೇಳೆ ಪುಟ್ಟರಾಜು ಅಭಿಮಾನಿ ಎಂದು ಹೇಳಿಕೊಂಡಿರುವ ನಂಜುಂಡ ಎಂಬಾತ 'ಪುಟ್ಟರಾಜು ರಾಜೀನಾಮೆ ನೀಡಬಾರದು' ಎಂದು ಆಗ್ರಹಿಸಿ, ಬೆಂಕಿ ಹೊತ್ತಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.['ಅಂಬಿಗೆ ನೀಡಿದ ದುಡ್ಡನ್ನು ಬಡ್ಡಿ ಸಮೇತ ಕಿತ್ತುಕೊಳ್ಳಿ!']

Mandya MP Puttaraju U turn from resignation decision

ಯಾವ ಶಾಸಕರು, ಸಂಸದರು ರಾಜೀನಾಮೆ ನೀಡದಿರುವಾಗ ನೀವೇಕೆ ನೀಡಬೇಕು? ರೈತರ ಪರವಾಗಿ ಹೋರಾಟ ಮಾಡಲು ಅಧಿಕಾರ ಅಗತ್ಯ ಎಂದಿದ್ದಾನೆ. ಅದೇ ಸಂದರ್ಭದಲ್ಲಿ ಅಲ್ಲಿಗೆ ಬಂದ ಸಂಸದ ಪುಟ್ಟರಾಜು, ಇಂಥ ಕೃತ್ಯಕ್ಕೆ ಕೈ ಹಾಕಬಾರದು ಎಂದು ಆತನನ್ನು ಗದರಿಕೊಂಡಿದ್ದಾರೆ.[ಮಂಡ್ಯದಲ್ಲಿ ಕಾವೇರಿ ಜಲಸಂಗ್ರಾಮ ತಾತ್ಕಾಲಿಕ ಸ್ಥಗಿತ]

ಜಿ.ಮಾದೇಗೌಡ ಅವರ ಜತೆ ಪುಟ್ಟರಾಜು ಮಾತುಕತೆ ನಡೆಸಿದ್ದಾರೆ. ಅಗ, ನೀವು ರಾಜೀನಾಮೆ ನೀಡಬೇಡಿ. ನಿಮ್ಮ ರೈತಪರ ಧೋರಣೆ ಬಗ್ಗೆ ಯಾರಿಗೂ ಅನುಮಾನವಿಲ್ಲ. ಆದರೆ ನೀವು ಅಧಿಕಾರದಲ್ಲಿ ಮುಂದುವರಿಯಬೇಕು ಎಂದು ಸಲಹೆ ನೀಡಿದ್ದಾರೆ. ಅಭಿಮಾನಿಗಳು ಹಾಗೂ ಮಾದೇಗೌಡರ ಒತ್ತಾಯದ ಮೇರೆಗೆ ರಾಜೀನಾಮೆ ಹಿಂಪಡೆದಿದ್ದೇನೆ ಎಂದು ಸಂಸದ ಪುಟ್ಟರಾಜು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After Cauvery issue Mandya MP Puttaraju announced his resignation. But now take U turn from his decision. After the meeting with G.Madegowda, annonuced his stand. Puttaraju follower who attempted for suicide, demanded to reconsider his resigantion decision.
Please Wait while comments are loading...