ಮಂಡ್ಯ ಚುನಾವಣೆ: ಐತಿಹಾಸಿಕ ದೇವಾಲಯದಲ್ಲಿ ಹೊರಬಿದ್ದ ಹೂವಿನ ಭವಿಷ್ಯ
Recommended Video
ಮಂಡ್ಯ, ಮೇ 14: ಜಿದ್ದಾಜಿದ್ದಿನ ಲೋಕಸಭಾ ಕಣವಾಗಿ ಮಾರ್ಪಟ್ಟು, ರಾಜ್ಯದ ಜನರನ್ನು ತುದಿಗಾಲಿನಲ್ಲಿ ನಿಲ್ಲಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಯಾರು ವಿಜಯಶಾಲಿಯಾಗಲಿದ್ದಾರೆ ಎಂದು ಐತಿಹಾಸಿಕ ದೇವಾಲಯವೊಂದರಲ್ಲಿ ಭವಿಷ್ಯವನ್ನು ಕೇಳಲಾಗಿತ್ತು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಈ ಹಿಂದೆ, ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ದೇವಾಲವೊಂದರಲ್ಲೂ, 'ಮೋದಿ ಮತ್ತೆ ಪ್ರಧಾನಿಯಾಗುವುದಾದರೆ ಬಲಭಾಗದಿಂದ ಪ್ರಸಾದ ಕೊಡು' ಎಂದು ಅರ್ಚಕರು ಪ್ರಾರ್ಥಿಸುವಾಗ, ಬಲಭಾಗದಿಂದ ಹೂ ಬಿದ್ದ ದೃಶ್ಯಾವಳಿ ಭಾರೀ ವೈರಲ್ ಆಗಿತ್ತು.
ಈಗ, ಹೊನ್ನಾದೇವಿ ದೇವಾಲಯದಲ್ಲಿ ಇದೇ ರೀತಿಯ ಭವಿಷ್ಯವನ್ನು ಕೇಳಲಾಗಿದ್ದು, ಮೋದಿ ಮತ್ತೆ ಪ್ರಧಾನಿಯಾಗುತ್ತಾರಾ ಎನ್ನುವ ಬದಲು ಮಂಡ್ಯದಲ್ಲಿ ಸೋಲು ಗೆಲುವು ಯಾರಿಗೆ ಎನ್ನುವ ಪ್ರಶ್ನೆಯನ್ನು ಕೇಳಲಾಗಿದೆ. ಸುಮಲತಾ ಗೆಲ್ಲುವುದಾದರೆ ಬಲಭಾಗದಿಂದ ಪ್ರಸಾದ ಕೊಡು ಎಂದು ಅರ್ಚಕರು ಪ್ರಾರ್ಥಿಸಿದಾಗ, ಬಲಭಾಗದಿಂದ ಹೂಬಿದ್ದಿದೆ.

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಗೆಲ್ಲೋದು 'ಸುಮಲತಾ' ಎಂದು ದೇವರು ಹೇಳಿದ್ದಾನೆ! "ನಿಖಿಲ್ ಬಂದಾನಾ, ಸುಮಲತಾ ಬಂದಾಳಾ?" ಅದಕ್ಕೆ ಮೈ ಮೇಲೆ ದೇವರು ಬಂದಂತೆ ನಟಿಸುತ್ತಿರುವ ಹುಡುಗ ರೋಷಾವೇಶದಲ್ಲಿ, 'ಸುಮಲತಾ' ಎನ್ನುತ್ತಾನೆ! ಮಕ್ಕಳ ಈ ವಿಡಿಯೋ ಭಾರೀ ವೈರಲ್ ಆಗಿತ್ತು.
ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲುವು ಸಾಧಿಸುವುದರ ಜತೆಗೆ ಕೇಂದ್ರ ಸಚಿವರಾಗುವುದು ಖಚಿತ ಎಂದು ಬೀದರ್ ಜಿಲ್ಲೆ ಬಸವಕಲ್ಯಾಣದ ಬಸವಧರ್ಮ ಪ್ರಸಾರಕ ಶ್ರೀ ಬಸವಾನಂದಸ್ವಾಮಿ ವಿಭೂತಿಮಠ ಇತ್ತೀಚೆಗೆ ಭವಿಷ್ಯ ನುಡಿದಿದ್ದರು.












Click it and Unblock the Notifications