ಮಂಡ್ಯ ಲೋಕಸಭೆ ಉಪಚುನಾವಣೆ ಫಲಿತಾಂಶ: ಶಿವರಾಮೇಗೌಡರ ಭರ್ಜರಿ ಗೆಲುವು
ಮಂಡ್ಯ,ನವೆಂಬರ್ 6: ಮಂಡ್ಯ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ನ ಭದ್ರಕೋಟೆ ಎನಿಸಿರುವ ಕ್ಷೇತ್ರಗಳ ಪೈಕಿ ಮಂಡ್ಯ ಕೂಡ ಒಂದಾಗಿದ್ದು, ಹಾಲಿ ಸಚಿವ ಸಿಎಸ್ ಪುಟ್ಟರಾಜು ಅವರ ರಾಜಿನಾಮೆಯಿಂದ ತೆರವಾಗಿತ್ತು.
ಈ ಹಿನ್ನೆಲೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಎಲ್‌ಆರ್ ಶಿವರಾಮೇಗೌಡ ಕಣಕ್ಕಿಳಿದಿದ್ದು ಕಾಂಗ್ರೆಸ್ ಇಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಿತ್ತು.ಹೀಗಾಗಿ ಈ ಬಾರಿ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡರಿಗೆ ಕಾಂಗ್ರೆಸ್ ನ ಬೆಂಬಲವೂ ದೊರಕಿದೆ.
ಬಿಜೆಪಿಯಿಂದ ಡಾ. ಸಿದ್ದರಾಮಯ್ಯ ಕಣಕ್ಕಿಳಿದಿದ್ದು, ಎಷ್ಟರ ಮಟ್ಟಿಗೆ ಪ್ರತಿಸ್ಪರ್ಧೆ ಒಡ್ಡುತ್ತಾರೆ ಎಂಬುದು ಈಗಿರುವ ಕುತೂಹಲ, ಮೇಲ್ನೋಟಕ್ಕೆ ಜೆಡಿಎಸ್ ಗೆ ವಿಜಯಲಕ್ಷ್ಮೀ ಒಲಿಯುತ್ತಾಳೆ ಎನ್ನಲಾಗುತ್ತಿದ್ದು ಮತದಾರನ ಮನದಲ್ಲಿ ಅಡಗಿರುವ ಗುಟ್ಟು, ರಟ್ಟಾಗಲು ಈಗ ಕ್ಷಣಗಣನೆ ಆರಂಭಗೊಂಡಿದೆ.

ನವೆಂಬರ್ 3ರಂದು ನಡೆದ ಉಪ ಚುನಾವಣೆಯಲ್ಲಿ ಶೇ.52.63 ಮತದಾನವಾಗಿದೆ.ಅಂತಿಮವಾಗಿ ಯಾರತ್ತ ಮತದಾರ ಪ್ರಭುವಿನ ಒಲಲು ಇದೆ ಎಂಬುದು ಇದೀಗ ಹೊರ ಬೀಳಲಿದೆ.












Click it and Unblock the Notifications