ಅಂದುಕೊಂಡಿದ್ದನ್ನ ಸಾಧಿಸಿಯೇ ತೀರುತ್ತಿದ್ದ ಛಲಗಾರ:ಕಣ್ಣೀರಿಟ್ಟ ಗುರುವಿನ ಗೆಳೆಯರು
ಮೈಸೂರು, ಫೆಬ್ರವರಿ 15:"ನನ್ನ ಸ್ನೇಹಿತ ಎಂದಿಗೂ ಇಟ್ಟ ಹೆಜ್ಜೆಯನ್ನು ಹಿಂದೆ ತೆಗೆದುಕೊಳ್ಳುವನಲ್ಲ. ಆತ ತೆಗೆದುಕೊಂಡ ಕಾರ್ಯವನ್ನು ಸಾಧಿಸಿಯೇ ತೀರುತ್ತಿದ್ದ ಛಲಗಾರ"ಎಂದು ತನ್ನ ಗೆಳೆಯನನ್ನು ನೆನಪಿಸಿಕೊಂಡು ಕಣ್ಣೀರಿಡುತ್ತಾರೆ ಹುತಾತ್ಮ ಗುರುವಿನ ಸ್ನೇಹಿತರು.
"ಯೋಧ ಗುರು ನಮ್ಮೆಲ್ಲರ ಅಚ್ಚುಮೆಚ್ಚಿನ ಗೆಳೆಯ. ಅವನು ತುಂಬಾ ನಿಯತ್ತಿನಿಂದ ಕೆಲಸ ಮಾಡುತ್ತಿದ್ದನು. ಒಳ್ಳೆಯ ವ್ಯಕ್ತಿತ್ವ ಹೊಂದಿದ್ದ. ಉಗ್ರರು ಈ ರೀತಿ ಮಾಡಿದ್ದಕ್ಕೆ ತಕ್ಕ ಉತ್ತರ ಕೊಡಬೇಕು. ಒಂದು ವಾರದ ಹಿಂದೆಯಷ್ಟೇ ಗುರು ಊರಿಗೆ ಬಂದು, ಮೂರು ದಿನಗಳ ಹಿಂದೆಯಷ್ಟೇ ಮತ್ತೆ ಕೆಲಸಕ್ಕೆ ತೆರಳಿದ್ದ. ಆದರೆ ಅವನು ಉಗ್ರರ ಕೃತ್ಯದಿಂದ ಹುತಾತ್ಮನಾಗಿರುವ ವಿಚಾರ ತಿಳಿದು ಸ್ನೇಹಿತರ ಬಳಗಕ್ಕೆ ತುಂಬಾ ಬೇಸರವಾಗುತ್ತಿದೆ. ಇದಕ್ಕೆ ಪ್ರತಿಫಲವಾಗಿ ನಮ್ಮ ಸರ್ಕಾರ ಸೇಡು ತೀರಿಸಿಕೊಳ್ಳಲೇಬೇಕು. ಇಂತಹ ಯೋಧರು ದೇಶ ಕಾಯುವ ನಮ್ಮ ನಾಯಕರು" ಎಂದು ಕಣ್ಣೀರಿಟ್ಟರು.
ಗುರು ಎಂದಿನಂತೆ ಹೆಂಡತಿಗೆ ಕರೆ ಮಾಡಿ ಮಾತನಾಡುತ್ತಿದ್ದರು. ಆದರೆ ನಿನ್ನೆ ಬೆಳಗ್ಗೆ ಮಾತ್ರ ಒಂದೇ ಒಂದು ಕರೆ ಬಂದಿರಲಿಲ್ಲ. ಹಲವು ಬಾರಿ ಕರೆ ಮಾಡಿದರೂ ಗುರು ಸ್ವೀಕರಿಸಿರಲಿಲ್ಲ. ರಾತ್ರಿ ಮತ್ತೆ ಕರೆ ಮಾಡಿದಾಗ ಅವರ ಸ್ನೇಹಿತರು ಕರೆ ಸ್ವೀಕರಿಸಿ ದುರಂತದ ಸುದ್ದಿ ತಿಳಿಸಿದ್ದಾರೆ.

ಇದು ಒಂದೆಡೆಯಾದರೆ, ಮತ್ತೊಂದೆಡೆ ಜಾರ್ಖಂಡ್ ಗೆಳೆಯೊಬ್ಬರು ಕರೆ ಮಾಡಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಪಟ್ಟಿಯಲ್ಲಿ ಗುರು ಹೆಸರಿದೆ. ಅವರು ಕೂಡ 12 ಗಂಟೆ ಸುಮಾರಿಗೆ ಅದೇ ರಸ್ತೆಯಲ್ಲಿ ಪಾಸ್ ಆಗಿದ್ದರು. ಅವರು ಹುತಾತ್ಮರಾಗಿದ್ದಾರೆ ಎಂದು ಹೇಳಿದ್ದರು ಎಂಬ ಮಾತುಗಳು ಇದೀಗ ಗುರು ಅವರ ಸ್ನೇಹಿತರ ಬಳಗದಿಂದ ಕೇಳಿಬರುತ್ತಿದೆ.












Click it and Unblock the Notifications