• search
  • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಿಖಿಲ್ ಪರ ಕೆಲಸ ಮಾಡಿದ ಆರೋಪ : ಡಿಸಿ ಮಂಜುಶ್ರೀ ಎತ್ತಂಗಡಿ

|

ಮಂಡ್ಯ, ಏಪ್ರಿಲ್ 09 : ಲೋಕಸಭಾ ಚುನಾವಣೆಗೆ ಕೆಲವು ದಿನಗಳು ಬಾಕಿ ಇರುವಾಗ ಮಂಡ್ಯ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ. ಪಿ.ಸಿ.ಜಾಫರ್ ಅವರನ್ನು ನೂತನ ಜಿಲ್ಲಾಧಿಕಾರಿಗಳಾಗಿ ತಕ್ಷಣದಿಂದಲೇ ನೇಮಕ ಮಾಡಲಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಂಗಳವಾರ ಚುನಾವಣಾ ಆಯೋಗದ ಸೂಚನೆಯಂತೆ ಮಂಡ್ಯ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅವರನ್ನು ವರ್ಗಾವಣೆ ಮಾಡಲಾಗಿದೆ. ಮಂಡ್ಯ ಜಿಲ್ಲಾಧಿಕಾರಿ ಕಾರ್ಯ ವೈಖರಿ ಬಗ್ಗೆ ಹಲವು ದಿನಗಳಿಂದ ದೂರುಗಳು ಕೇಳಿಬಂದಿದ್ದವು.

ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಎನ್.ಮಂಜುಶ್ರೀ ಅವರ ಕಾರ್ಯ ವೈಖರಿ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಹಲವು ಚುನಾವಣಾ ಏಜೆಂಟರು ಸಹ ಜಿಲ್ಲಾಧಿಕಾರಿಗಳ ಬಗ್ಗೆ ದೂರು ನೀಡಿದ್ದರು.

ಮಂಡ್ಯ ಚುನಾವಣೆ : ಸಾಮಾನ್ಯ ವೀಕ್ಷಕರಾಗಿ ಕೆ.ಅಣ್ಣಾಮಲೈ ನೇಮಕಮಂಡ್ಯ ಚುನಾವಣೆ : ಸಾಮಾನ್ಯ ವೀಕ್ಷಕರಾಗಿ ಕೆ.ಅಣ್ಣಾಮಲೈ ನೇಮಕ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಒತ್ತಡಕ್ಕೆ ಮಣಿದು ಮಂಡ್ಯದ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಮಂಜುಶ್ರೀ ಅವರು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.

ನಿಖಿಲ್ ನಾಮಪತ್ರ ಸರಿಯಾಗಿದೆ: ಚುನಾವಣಾ ಆಯೋಗಕ್ಕೆ ವರದಿನಿಖಿಲ್ ನಾಮಪತ್ರ ಸರಿಯಾಗಿದೆ: ಚುನಾವಣಾ ಆಯೋಗಕ್ಕೆ ವರದಿ

ಎನ್.ಮಂಜುಶ್ರೀ ಅವರು 2017ರ ಆ.9ರಂದು ಮಂಡ್ಯ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಈಗ ಅವರನ್ನು ವರ್ಗಾವಣೆ ಮಾಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಪಿ.ಸಿ.ಜಾಫರ್ ಅವರನ್ನು ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ.

ಕಳೆದ ವಾರ ಸ್ಥಳೀಯರು ಎಂಬ ಕಾರಣಕ್ಕಾಗಿ ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಯಾಲಕ್ಕಿ ಗೌಡ ಅವರನ್ನು ಸರ್ಕಾರ ವರ್ಗಾವಣೆ ಮಾಡಿತ್ತು.

English summary
After direction of election commission Mandya deputy commissioner N.Manjushree transferred. P.C.Jaffer appointed as new deputy commissioner with immediate effect. BJP supported independent candidate Sumalatha Ambareesh had filed a complaint against deputy commissioner stating that the DC had been partial towards JD(S).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X