14 ಜನರ ಡಕಾಯಿತರ ಗುಂಪಿನೊಂದಿಗೆ 52.81ಲಕ್ಷ ಹೊಸ ನೋಟು ವಶ

Posted By:
Subscribe to Oneindia Kannada

ಮಂಡ್ಯ, ಡಿಸೆಂಬರ್,27: ಹಣವನ್ನು ಡಕಾಯಿತಿ ಮಾಡಿ ನೋಟು ಬದಲಾವಣೆ ದಂಧೆಯಲ್ಲಿ ತೊಡಗಿದ್ದ 14 ಮಂದಿಯನ್ನು ಮಂಡ್ಯ ಜಿಲ್ಲಾ ವ್ಯಾಪ್ತಿಯ ಪೊಲೀಸರು ಬಂಧಿಸಿದ್ದಾರೆ. ಅವರ ಬಳಿಯಿದ್ದ 2000 ಮುಖಬೆಲೆಯ 52.81ಲಕ್ಷವನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.

ಡಿಸೆಂಬರ್ 12ರಂದು ಮಳವಳ್ಳಿಯ ರಾಮನಂದೂರು ಬಳಿ ಮಾಡಿದ ಡಕಾಯಿತಿಯಲ್ಲಿ ಒಟ್ಟು 66.50 ಲಕ್ಷ ಹಣವನ್ನು ಕಳವು ಮಾಡಿರುವುದಾಗಿ ಹದಿನಾಲ್ಕು ಜನರ ಗುಂಪು ಒಪ್ಪಿಕೊಂಡಿದೆ. ಅದರಲ್ಲಿ 2000 ಮುಖಬೆಲೆಯ 2631 ನೋಟುಗಳು ಪತ್ತೆಯಾಗಿವೆ.

ಹಣವನ್ನು ವಿನಿಮಯ ಮಾಡಲು ಮೊಟ್ಟೆಗಳನ್ನು ಸಾಗಿಸುತ್ತಿದ್ದ ಕಾರಿನ ಮೇಲೆ ದಾಳಿ ಮಾಡಿದ ಡಕಾಯಿತಿಯ ಗುಂಪು ಮೆಣಸಿನ ಪುಡಿಯನ್ನು ಹಾಕಿ ಹಣವನ್ನು ದೋಚಿತ್ತು. ಹಣವನ್ನು ಸಾಗಿಸುತ್ತಿದ್ದ ಪೋಸ್ಟ್ ಆಫೀಸಿನ ನೌಕರ ಗ್ರಾಮಾಂತರದ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಡಕಾಯಿತಿಯ ಬಗ್ಗೆ ದೂರು ದಾಖಲಿಸಿದ್ದರು.

new note

ಅದರೆ ಪೋಸ್ಟ್ ಆಫೀಸ್ ನೌಕರನು ಕಮೀಷನ್ ಆಧಾರದ ಮೇಲೆ ಹಳೇ ನೋಟುಗಳನ್ನು ಬದಲಾಯಿಸಲು ಹಣವನ್ನು ಸಾಗಿಸುತ್ತಿರುವುದಾಗಿ ತಿಳಿದು ಬಂದಿದೆ. ಹದಿನಾಲ್ಕು ಜನರ ಗುಂಪು ಮನಿ ಲಾಂಡರಿಂಗ್ ದಂಧೆಯಲ್ಲಿ ತೊಡಗಿದ್ದು, ಅವರ ಹಿಂದೆ ಆರು ಜನರ ಕೈವಾಡವಿದೆ ಎಂದು ಹೇಳಲಾಗಿದೆ. ಮಂಡ್ಯ ಪೊಲೀಸರು ಆದಾಯ ತೆರೆಗೆ ಇಲಾಖೆಗೆ ಮಾಹಿತಿಯನ್ನು ರವಾನಿಸಿದ್ದು ಆ ದಂಧೆಯಲ್ಲಿ ಇರುವ ಇನ್ನು ಆರು ಮಂದಿ ಯಾರು ಎಂದು ತಿಳಿಯಬೇಕಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mandya district police arrested 14 people for decamping with new currency notes that were meant to be exchanged illegally on commission basis. Out of the Rs 66.50 lakh that was stolen Rs 52.81 lakh has been recovered from the accused. Out of the notes recovered 2631 notes are of new Rs 2,000 denomination.
Please Wait while comments are loading...