ಮಂಡ್ಯ ಬಸ್ ಅಪಘಾತ: ದುರಂತದಲ್ಲಿ ಮೃತಪಟ್ಟವರ ಹೆಸರುಗಳು
ಮಂಡ್ಯ, ನವೆಂಬರ್ 24: ಮಂಡ್ಯದ ಕನಗನವಾಡಿಯ ಬಳಿ ಖಾಸಗಿ ಬಸ್ ವಿಸಿ ನಾಲೆಗೆ ಉರುಳಿ 25 ಕ್ಕೂ ಹೆಚ್ಚು ಜನ ಅಸುನೀಗಿರುವ ಭಾರಿ ದುರಂತ ಘಟಿಸಿದೆ.
ಬಸ್ಸನ್ನು ನಾಲೆಯಿಂದ ಮೇಲೆತ್ತಿತ್ತು. ಮೃತರ ದೇಹಗಳನ್ನು ನಾಲೆಯಿಂದ ಮೇಲೆತ್ತಲಾಗಿದೆ. ಇನ್ನೂ ದೇಹಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಮುಳುಗು ತಜ್ಞರು ಸತತವಾಗಿ ಮೃತ ದೇಹಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದೀಗ ಮೃತರ ಗುರುತು ಪತ್ತೆ ಕಾರ್ಯ ನಡೆಸುತ್ತಿದ್ದು, ಕೆಲವರು ಮೃತರ ಹೆಸರುಗಳು ಗೊತ್ತಾಗಿದ್ದು, ಇನ್ನೂ ಹಲವರ ಗುರುತು ಪತ್ತೆ ಇನ್ನೂ ನಡೆಯುತ್ತಿದೆ. ಶವಗಳ ಮರಣೋತ್ತರ ಪರೀಕ್ಷೆಯನ್ನು ಘಟನೆ ನಡೆದ ಸ್ಥಳದಲ್ಲಿಯೇ ಮಾಡಲು ನಿರ್ಧರಿಸಲಾಗಿದ್ದು, ಆಸ್ಪತ್ರೆಗೆ ತೆಗೆದುಕೊಂಡು ಹೋದರೆ ಸ್ಥಳದ ಅಭಾವ ಹಾಗೂ ಜನ ಸೇರುವ ಸಮಸ್ಯೆ ಇರುವ ಕಾರಣ ಈ ನಿರ್ಧಾರ ತಳೆಯಲಾಗಿದೆ.

22 ಜನರ ಮೃತರ ಹೆಸರುಗಳು ಇಲ್ಲಿದ್ದು, ಅವರ ಬಗೆಯ ಇನ್ನಷ್ಟು ವಿವರಗಳನ್ನು ನಿರೀಕ್ಷಿಸಲಾಗಿದೆ.
ಪ್ರಶಾಂತ್, ಕೆಂಪಯ್ಯ, ನಿಂಗಮ್ಮ, ಕಮಲಮ್ಮ, ಸುಮಾ, ಯಶೋಧಾ, ರತ್ನಮ್ಮ, ಸೌಮ್ಯಾ, ಪಾಪಯ್ಯ, ಸಾವಿತ್ರಮ್ಮ, ಮಂಜುಳಾ, ಅನುಷಾ, ಸಿದ್ದಯ್ಯ, ಚಿಕ್ಕಯ್ಯ, ಪ್ರೀತಿ, ಜಯಲಕ್ಷ್ಮಿ, ಶಶಿಕಲಾ, ಚಂದ್ರು, ಪವಿತ್ರಾ, ಈರಯ್ಯ, ಕಲ್ಪನಾ, ದೇವರಾಜ್, ರಾಧಾ, ಪ್ರೇಕ್ಷಾ ಹಾಗೂ ಲಿಖಿತ್












Click it and Unblock the Notifications