ಮಕ್ಕಳನ್ನು ಕೊಂದು ನೇಣಿಗೆ ಶರಣಾದ ತಂದೆ

Posted By:
Subscribe to Oneindia Kannada

ನಾಗಮಂಗಲ, ಆಗಸ್ಟ್ 23: ವ್ಯಕ್ತಿಯೊಬ್ಬ ಡೆತ್ ಬರೆದಿಟ್ಟು ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಹತ್ಯೆಗೈದು ಬಳಿಕ ತಾನೂ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹೊಣಕೆರೆ ಹೋಬಳಿ ಹಂಚಿನಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಜಯರಾಮ (45) ಎಂಬಾತನೇ ಮಕ್ಕಳಾದ ಸೌಭಾಗ್ಯ (4), ಆಶಿಕಾ (2) ಎಂಬ ಇಬ್ಬರು ಮಕ್ಕಳನ್ನು ಹತ್ಯೆಗೈದು ತಾನು ನೇಣಿಗೆ ಶರಣಾದವನು.

Man kills his daughters, commits suicide in Nagamangala

ಜಯರಾಮ ಅವರು ನಾಗಮಂಗಲ ತಾಲೂಕು ಪಡಿಗೌಡನಕೊಪ್ಪಲು ಗ್ರಾಮದ ತೂರೇಗೌಡರ ಮಗಳು ಕಮಲ ಎಂಬುವರನ್ನು ವಿವಾಹವಾಗಿದ್ದನು. ಇವರಿಗೆ ಹರ್ಷಿತ್, ಯಶವಂತ್ ಎಂಬ ಇಬ್ಬರು ಗಂಡು ಮಕ್ಕಳಿದ್ದರಾದರೂ. ಕೆಲ ವರ್ಷಗಳ ಹಿಂದೆÀ ದಂಪತಿ ಬೇರೆಯಾಗಿದ್ದರು.

ಇದಾದ ಬಳಿಕ ಜಯರಾಮ ತಾಲೂಕಿನ ತುಪ್ಪದಮಡು ಗ್ರಾಮದ ಕರೀಗೌಡರ ಮಗಳು ಕಮಲಾ ಎಂಬಾಕೆಯನ್ನು ವಿವಾಹವಾಗಿದ್ದನು. ಆಕೆಯೊಂದಿಗೂ ಎರಡು-ಮೂರು ವರ್ಷ ಅನ್ಯೋನ್ಯದಿಂದ ಸಂಸಾರ ಮಾಡಿಕೊಂಡಿದ್ದನು. ದಂಪತಿಗೆ ಸೌಭಾಗ್ಯ ಮತ್ತು ಆಶಿಕಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು.

ಈ ನಡುವೆ ಗ್ರಾಮದ ರಮೇಶ ಎಂಬುವನ ಜೊತೆಯಲ್ಲಿ ಫೋನ್ ಮಾಡಿ ಮಾತನಾಡುವುದ ಮಾಡುತ್ತಿದ್ದಳು. ಇದೇ ವಿಚಾರಕ್ಕೆ ಮನೆಯಲ್ಲಿ ಆಗಾಗ್ಗೆ ಜಗಳವಾಡುವುದು ಸಾಮಾನ್ಯವಾಗಿತ್ತು.

ಈ ಸಂಬಂಧ ಊರಿನ ಮುಖಂಡರು ರಾಜಿ ಪಂಚಾಯಿತಿ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಅಲ್ಲದೆ ಪತ್ನಿ ಕಮಲಾ ಗಂಡ ಜಯರಾಮನಿಗೆ ಬೆದರಿಕೆ ಹಾಕಿದ್ದಳಲ್ಲದೆ, ವಾರದ ಹಿಂದಷ್ಟೇ ಪತಿ-ಮಕ್ಕಳನ್ನು ತೊರೆದು ಬೆಂಗಳೂರು ಸೇರಿಕೊಂಡಿದ್ದಳು.

ಪತ್ನಿಯ ವರ್ತನೆಯಿಂದ ನೊಂದ ಜಯರಾಮ ಮಂಗಳವಾರ ಆ.22ರಂದು ರಾತ್ರಿ ಎಲ್ಲರೂ ಊಟ ಮಾಡಿ ಮಲಗಿದ ಮೇಲೆ ಮನೆಯಲ್ಲಿ ತನ್ನ ಎರಡು ಹೆಣ್ಣು ಮಕ್ಕಳನ್ನು ಕಿಟಕಿಯ ಸರಳಿಗೆ ನೇಣು ಹಾಕಿ ಕೊಲೆ ಮಾಡಿ ನಂತರ ತಾನೂ ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ನಾಗಮಂಗಲ ಉಪ ವಿಭಾಗದ ಪ್ರಭಾರ ಡಿವೈಎಸ್‍ಪಿ ಚಂದ್ರಶೇಖರ್, ವೃತ್ತ ನಿರೀಕ್ಷಕ ಧನರಾಜ್ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‍ಐ ಬಿ.ಚಿದಂಬರ್ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A man commits suicide after killing his two daugheters Saubhagya (4) and Ashika (2) in Honakere Hobali of Nagamangala taluk of Mandya district.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ