ಮಂಡ್ಯ; ಅಕ್ಟೋಬರ್ 6ರಿಂದ ಮಹದೇಶ್ವರ ಜ್ಯೋತಿ ಯಾತ್ರೆ, ಇಲ್ಲಿದೆ ಮಾಹಿತಿ
ಮಂಡ್ಯ, ಅಕ್ಟೋಬರ್, 04: ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಂಬಿಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ಅಕ್ಟೋಬರ್ 14 ರಿಂದ 16 ರವರೆಗೆ ಮಹಾಕುಂಭಮೇಳ ಪುಣ್ಯಸ್ನಾನ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಅಕ್ಟೋಬರ್ 6ರಂದು ಮಹದೇಶ್ವರ ಬೆಟ್ಟದಲ್ಲಿ ಪೂಜೆ ಸಲ್ಲಿಸಿ ಜ್ಯೋತಿ ಯಾತ್ರೆಗೆ ಚಾಲನೆ ನೀಡಲಾಗುತ್ತದೆ. ಈ ಜ್ಯೋತಿ ಯಾತ್ರೆಯು ಚಾಮರಾಜನಗರ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಸಂಚರಿಸಿ ತ್ರಿವೇಣಿ ಸಂಗಮ ಸೇರಲಿದೆ.
ಅಕ್ಟೋಬರ್ 6ರಂದು ಶ್ರೀ ಮಲೆ ಮಹದೇಶ್ವರ ಬೆಟ್ಟದಿಂದ ಸಾಲೂರು ಮಠ- ಹನೂರು- ಕುಂತೂರು- ಕೊಳ್ಳೇಗಾಲದ ಮಾರ್ಗವಾಗಿ ಸಂಚರಿಸಿ ಟಿ ನರಸೀಪುರ ಜಗದ್ಗುರು ಶ್ರೀ ಶಿವರಾತ್ರೀಶ್ವರ ಮಂಗಳ ಮಂಟಪದಲ್ಲಿ ವಾಸ್ತವ್ಯ ಹೂಡಲಿದೆ. ಅಕ್ಟೋಬರ್ 7ರಂದು ಬೆಳಗ್ಗೆ ಟಿ ನರಸೀಪುರದಿಂದ ಕರೊಹಟ್ಟಿ, ವಾಟಾಳು, ಮೂಗೂರು - ಸಂತೇಮರಳ್ಳಿ -ಯಳಂದೂರು ಇರಸುವಾಡಿ- ಮಸಣಾಪುರ- ಹೊಂಗನೂರು- ರೇಚಂಬಳ್ಳಿ- ಕಾಗಲವಾಡಿ, ಹುರಳಿಬಂಜನಪುರ, ಸರಗೂರು, ಚಂದಕವಾಡಿ, ಕೋಡಿಮೋಳೆ, ರಾಮಸಮುದ್ರ ಮಾರ್ಗವಾಗಿ ಸಂಚರಿಸಿ ಚಾಮರಾಜನಗರ ಸಿದ್ದಮಲ್ಲೇಶ್ವರ ಮಠದಲ್ಲಿ ವಾಸ್ತವ್ಯ ಹೂಡಲಿದೆ.
ಇನ್ನು ಅಕ್ಟೋಬರ್ 8ರಂದು ಬೆಳಗ್ಗೆ ಚಾಮರಾಜನಗರದಿಂದ ಗುಂಡ್ಲುಪೇಟೆ- ನಂಜನಗೂಡು -ಸುತ್ತೂರು ಮಠ- ಮಾರ್ಗವಾಗಿ ಸಂಚರಿಸಿ ಸುತ್ತೂರು ಮಠದಲ್ಲಿ ವಾಸ್ತವ್ಯ ಹೂಡಲಿದೆ. ಅಕ್ಟೋಬರ್ 9ರಂದು ಬೆಳಗ್ಗೆ ಸುತ್ತೂರು ಮಠದಿಂದ ಅಲತ್ತೂರುಹುಂಡಿ, ಮಾದಯ್ಯನಹುಂಡಿ, ಮಲ್ಲರಾಜಯ್ಯನಹುಂಡಿ, ಮೂಡಳ್ಳಿ, ಹದಿನಾರು, ಮರಿಗೌಡನಹುಂಡಿ, ದೇವಲಾಪುರ, ಚಿಕ್ಕೇಗೌಡನಹುಂಡಿ, ಹೊಸಹುಂಡಿ, ತ್ರಿನೇಶ್ವರ ದೇವಸ್ಥಾನದ ಅರಮನೆ- ಮೈಸೂರು- ಚಾಮುಂಡಿ ಬೆಟ್ಟ- ಲಕ್ಷ್ಮಿಕಾಂತ ದೇವಸ್ಥಾನ-ಒಂಟಿಕೊಪ್ಪಲ್ - ವೆಂಕಟೇಶ್ವರ ದೇವಸ್ಥಾನ- ಚಂದ್ರಮೌಳೇಶ್ವರ ದೇವಸ್ಥಾನ- ಹೆಗ್ಗಡ ದೇವನಕೋಟೆ- ಸರಗೂರು ಹ್ಯಾಂಡ್ ಪೋಸ್ಟ್ ಮಾರ್ಗವಾಗಿ ಸಂಚರಿಸಿ ಶ್ರೀ ಮಹದೇಶ್ವರ ದೇವಾಲಯ ಭೀಮ ಕೊಲ್ಲಿಯಲ್ಲಿ ವಾಸ್ತವ್ಯ ಹೂಡಲಿದೆ.

ಜ್ಯೋತಿ ಯಾತ್ರೆ ಪ್ರರಂಭವಾಗುವ ಸ್ಥಳ?
ನಂತರ ಅಕ್ಟೋಬರ್ 10 ರಂದು ಬೆಳಗ್ಗೆ ಶ್ರೀ ಮಹದೇಶ್ವರ ದೇವಾಲಯ ಭೀಮ ಕೊಲ್ಲಿಯಿಂದ ಹೆಗ್ಗಡ ದೇವನಕೋಟೆ- ಅಂತರಸಂತೆ - ಬೇಲದ ಕುಪ್ಪೆ ಮಾರ್ಗವಾಗಿ ಸಂಚರಿಸಿ ಗದ್ದಿಗೆ ಶ್ರೀ ಕೆಂಡಗಣೇಶ್ವರ ದೇವಾಲಯದಲ್ಲಿ ವಾಸ್ತವ್ಯ ಹೂಡಲಿದೆ. ಅಕ್ಟೋಬರ್ 11ರಂದು ಬೆಳಗ್ಗೆ ಗದ್ದಿಗೆ ಶ್ರೀ ಕೆಂಡಗಣೇಶ್ವರ ದೇವಾಲಯದಿಂದ ಹುಣಸೂರು- ಬೆಟ್ಟದಪುರ- ಮಾರ್ಗವಾಗಿ ಸಂಚರಿಸಿ ಶ್ರೀ ಮಹಾದೇಶ್ವರ ದೇವಾಲಯ ಪಿರಿಯಾಪಟ್ಟಣದಲ್ಲಿ ವಾಸ್ತವ್ಯ ಹೂಡಲಿದೆ. ಅಕ್ಟೋಬರ್ 12ರಂದು ಬೆಳಗ್ಗೆ ಪಿರಿಯಾಪಟ್ಟಣದಿಂದ ಶಿವನ ದೇವಸ್ಥಾನ- ಪಿರಿಯಾಪಟ್ಟಣ -ಹುಣಸೂರು- ತಿಪ್ಪೂರು -ಸಾಲಿಗ್ರಾಮ -ಕೆ.ಆರ್ ನಗರ- ಎಡತೊರೆ- ಅರ್ಕೇಶ್ವರ ದೇವಸ್ಥಾನ- ಆಲಂಬಾಡಿ ಕಾವಲು- ಅಕ್ಕಿ ಹೆಬ್ಬಾಳು ಮಾರ್ಗವಾಗಿ ಸಂಚರಿಸಿ ಕೆ.ಆರ್ ಪೇಟೆಯಲ್ಲಿ ತಂಗಲಿದೆ. ಅಕ್ಟೋಬರ್ 13 ರಂದು ಬೆಳಗ್ಗೆ ಕೆ.ಆರ್ ಪೇಟೆಯಿಂದ ಮತ್ತಿಘಟ್ಟ -ವಿಠಲಾಪುರ -ಸೋಮನಹಳ್ಳಿ -ಪುರ- ಅಂಬಿಗರಹಳ್ಳಿ ಮಾರ್ಗವಾಗಿ ಸಂಚರಿಸಿ ತ್ರಿವೇಣಿ ಸಂಗಮದಲ್ಲಿ ವಾಸ್ತವ್ಯ ಹೂಡಲಿದೆ.

ತಂಗಲು ಯಾವೆಲ್ಲ ಸ್ಥಳಗಳಲ್ಲಿ ವ್ಯವಸ್ಥೆ?
ಅಕ್ಟೋಬರ್ 6ರಂದು ಶ್ರೀ ಮಲೆ ಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲ -ಹನೂರು -ಬಿ.ಜಿ ಪುರ- ಮಾರ್ಗವಾಗಿ ಸಂಚರಿಸಿ ಬಿ.ಜಿ ಪುರ ಮಂಟೇಸ್ವಾಮಿ ಪುಣ್ಯ ಕ್ಷೇತ್ರದಲ್ಲಿ ದೇವಾಲಯದಲ್ಲಿ ವಾಸ್ತವ್ಯ ಹೂಡಲಿದೆ. ಅಕ್ಟೋಬರ್ 7ರಂದು ಬೆಳಗ್ಗೆ ಬಿ.ಜಿ ಪುರ ಮಂಟೇಸ್ವಾಮಿ ಪುಣ್ಯ ಕ್ಷೇತ್ರದಿಂದ ಹಲಗೂರು ಮಳವಳ್ಳಿ- ಕಸಬಾ 1, 2 ಮತ್ತು 3, ಕಿರಗಾವಲು 1, 2 ಮತ್ತು 3 ಕೆಎಂ ದೊಡ್ಡಿ ಮಾರ್ಗವಾಗಿ ಸಂಚರಿಸಿ ಕೆಎಂ ದೊಡ್ಡಿ ಹನುಮಂತನಗರ ಆತ್ಮಲಿಂಗೇಶ್ವರ ದೇವಾಲಯದಲ್ಲಿ ವಾಸ್ತವ್ಯ ಹೂಡಲಿದೆ. ಅಕ್ಟೋಬರ್ 8ರಂದು ಬೆಳಗ್ಗೆ ಕೆಎಂ ದೊಡ್ಡಿ ಹನುಮಂತನಗರ ಆತ್ಮಲಿಂಗೇಶ್ವರ ದೇವಾಲಯದಿಂದ ಆತಗೂರು -ಕೆಸ್ತೂರು -ಬೆಸಗರಹಳ್ಳಿ -ಕೊಪ್ಪ- ಬಿದರಕೋಟೆ - ಮಾರಗೌಡನಹಳ್ಳಿ ಮಾರ್ಗವಾಗಿ ಸಂಚರಿಸಿ ಕೆರಗೋಡು ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ವಾಸ್ತವ್ಯ ಹೂಡಲಿದೆ.
ಅಕ್ಟೋಬರ್ 9ರಂದು ಬೆಳಗ್ಗೆ ಕೆರಗೋಡು ಶ್ರೀ ಪಂಚಲಿಂಗೇಶ್ವರ ದೇವಾಲಯದಿಂದ ಕೀಲಾರ- ಹನಕೆರೆ- ಮಂಡ್ಯ ಹುಲಿವಾನ -ಜೀಗುಂಡಿ ಪಟ್ಟಣ -ದುದ್ದ -ಶಿವಳ್ಳಿ ಚಂದಗಾವಲು -ಹೊಳಲು -ಯಲಿಯೂರು -ತೂಬಿನಕೆರೆ ಮಾರ್ಗವಾಗಿ ಸಂಚರಿಸಿ ಕೊತ್ತತ್ತಿಯಲ್ಲಿ ವಾಸ್ತವ್ಯ ಹೂಡಲಿದೆ. ಅಕ್ಟೋಬರ್ 10 ರಂದು ಬೆಳಗ್ಗೆ ಅರಕೆರೆ 1 ಮತ್ತು 2 ಮಹದೇವಪುರ, ಮಂಡ್ಯ ಕೊಪ್ಪಲು, ಶ್ರೀರಂಗಪಟ್ಟಣ, ಶೆಟ್ಟಳ್ಳಿ 1 ಮತ್ತು 2 ದರಸಗುಪ್ಪೆ, ಉಕ್ಕುಡ, ಕ್ಯಾತನಹಳ್ಳಿ, ಅರಳಕುಪ್ಪೆ ಹರವು, ಕಟ್ಟೆರಿ, ಗಾಮನಹಳ್ಳಿ, ಚಿನಕುರಳಿ ಬೆಟ್ಟಹಳ್ಳಿ, ಪಾಂಡವಪುರ, ಬೆಳ್ಳಾಳೆ, ಇಂಗಳಗುಪ್ಪೆ ಕೆರೆತೊನ್ನೂರು, ಪಿಎಸ್ ಛತ್ರ, ಜಕ್ಕನಹಳ್ಳಿ ಮಾರ್ಗವಾಗಿ ಸಂಚರಿಸಿ ಮೇಲುಕೋಟೆಯಲ್ಲಿ ವಾಸ್ತವ್ಯ ಹೂಡಲಿದೆ. ಅಕ್ಟೋಬರ್ 11ರಂದು ಬೆಳಗ್ಗೆ ಮೇಲುಕೋಟೆಯಿಂದ ಹೊಣಕೆರೆ, ದೇವಲಾಪುರ, ನಾಗಮಂಗಲ, ಬೆಳ್ಳೂರು ಮಾರ್ಗವಾಗಿ ಸಂಚರಿಸಿ ಚುಂಚನಗಿರಿಯಲ್ಲಿ ವಾಸ್ತವ್ಯ ಹೂಡಲಿದೆ.
ಅಕ್ಟೋಬರ್ 12ರಂದು ಬೆಳಗ್ಗೆ ಚುಂಚನಗಿರಿಯಿಂದ ಬಿಂಡಿಗನವಿಲೆ, ಕಂಬದ ಹಳ್ಳಿ , ಸಂತೆ ಬಾಚನಹಳ್ಳಿ ಮಾರ್ಗವಾಗಿ ಸಂಚರಿಸಿ ಕೆ.ಆರ್ ಪೇಟೆಯಲ್ಲಿ ತಂಗಲಿದೆ. ಅಕ್ಟೋಬರ್ 13ರಂದು ಬೆಳಗ್ಗೆ ಕೆ.ಆರ್ ಪೇಟೆಯಿಂದ ಮತ್ತಿಘಟ್ಟ, ವಿಠಲಾಪುರ, ಸೋಮನಹಳ್ಳಿ, ಪುರ ಅಂಬಿಗರ ಹಳ್ಳಿ ಮಾರ್ಗವಾಗಿ ಸಂಚರಿಸಿ ತ್ರಿವೇಣಿ ಸಂಗಮದಲ್ಲಿ ವಾಸ್ತವ್ಯ ಹೂಡಲಿದೆ.

ವಾಸ್ತವ್ಯ ಹೂಡಲಿರುವ ಸ್ಥಳಗಳು?
ಅಕ್ಟೋಬರ್ 6ರಂದು ಬೆಳಗ್ಗೆ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿ ಜ್ಯೋತಿ ಯಾತ್ರೆ ಹನೂರು, ಕೊಳ್ಳೇಗಾಲ, ಮರಡಿಗುಡ್ಡ, ಬನ್ನೂರು, ಬೆಳವಾಡಿ, ಪಾಲಳ್ಳಿ ಬೆಳಗೋಳ, ಕೆಆರ್‌ಎಸ್ ಕನ್ನಂಬಾಡಿ, ವೇಣುಗೋಪಾಲಸ್ವಾಮಿ ಡಿಂಕಾ ಬಲ್ಲೇನಹಳ್ಳಿ ಮಾರ್ಗವಾಗಿ ಸಂಚರಿಸಿ ಕಲ್ಲಹಳ್ಳಿ ಭೂ ವರಾಹನಾಥ ಸ್ವಾಮಿ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಲಿದೆ. ಅಕ್ಟೋಬರ್ 7ರಂದು ಬೆಳಗ್ಗೆ ಕಲ್ಲಹಳ್ಳಿ ಭೂ ವರಾಹನಾಥ ಸ್ವಾಮಿ ದೇವಸ್ಥಾನದಿಂದ ಬಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಗ್ರಾಮಗಳು, ಭೂಕನಕೆರೆ ಗ್ರಾಮ ಪಂಚಾಯಿತಿ ಗ್ರಾಮಗಳು, ತೆಂಡೆಕೆರೆ, ಶೀಳನೆರೆ ಮಾರ್ಗವಾಗಿ ಸಂಚರಿಸಿ ಶೀಳನೆರೆಯಲ್ಲಿ ವಾಸ್ತವ್ಯ ಹೂಡಲಿದೆ. ಅಕ್ಟೋಬರ್ 8ರಂದು ಬೆಳಗ್ಗೆ ಶೀಳನೆರೆಯಿಂದ ಸಿಂಧಘಟ್ಟ, ಹರಳಹಳ್ಳಿ, ಚೌಡೇನಹಳ್ಳಿ, ಮಾಕಾವಳ್ಳಿ ಬಂಡಿಹೊಳೆ ಮಾರ್ಗವಾಗಿ ಸಂಚರಿಸಿ ಬಂಡಿ ಹೊಳೆಯಲ್ಲಿ ವಾಸ್ತವ್ಯ ಹೂಡಲಿದೆ.

ಭಕ್ತಾದಿಗಳಿಗೆ ಮಂಡ್ಯ ಜಿಲ್ಲಾಡಳಿತ ಮನವಿ
ಅಕ್ಟೋಬರ್ 9ರಂದು ಬಂಡಿಹೊಳೆಯಿಂದ ಹರಿಹರಪುರ, ಮಡುವಿನ ಕೋಡಿ, ಬಳ್ಳೇಕೆರೆ, ಐಚನಹಳ್ಳಿ ಮಾರ್ಗವಾಗಿ ಸಂಚರಿಸಿ ಗಂಜಿಗೆರೆಯಲ್ಲಿ ವಾಸ್ತವ್ಯ ಹೂಡಲಿದೆ. ಅಕ್ಟೋಬರ್ 10ರಂದು ಬೆಳಗ್ಗೆ ಗಂಜಿಗೆರೆ ಭಾರತಿಪುರ ಕ್ರಾಸ್, ಅಘಲಯ, ಸಂತೆ ಬಾಚನಹಳ್ಳಿ, ರಂಗನಾಥಪುರ ಕ್ರಾಸ್, ಸಾರಂಗಿ ಮಾರ್ಗವಾಗಿ ಸಂಚರಿಸಿ ಆಗ್ರಹಾರ ಬಾಚಹಳ್ಳಿಯಲ್ಲಿ ವಾಸ್ತವ್ಯ ಹೂಡಲಿದೆ. ಅಕ್ಟೋಬರ್ 11ರಂದು ಬೆಳಗ್ಗೆ ಆಗ್ರಹಾರ ಬಾಚಹಳ್ಳಿಯಿಂದ ಕಿಕ್ಕೇರಿ, ಲಕ್ಷ್ಮಿಪುರ, ಆನೆಗೋಳ, ಮಾದ್ದಾಪುರ, ದಬ್ಬೆಘಟ್ಟ ಮಾರ್ಗವಾಗಿ ಸಂಚರಿಸಿ ಐಕನಹಳ್ಳಿಯಲ್ಲಿ ವಾಸ್ತವ್ಯ ಹೂಡಲಿದೆ. ಅಕ್ಟೋಬರ್ 12ರಂದು ಬೆಳಗ್ಗೆ ಹೈಕನಹಳ್ಳಿಯಿಂದ ಬೀರುವಳ್ಳಿ, ಹಿರಿಕಳಲೆ, ಮಂದಗೆರೆ ಮಾರ್ಗವಾಗಿ ಸಂಚರಿಸಿ ಕೆ.ಆರ್ ಪೇಟೆಯಲ್ಲಿ ವಾಸ್ತವ್ಯ ಹೂಡಲಿದೆ. ಅಕ್ಟೋಬರ್ 13ರಂದು ಬೆಳಗ್ಗೆ ಕೆ.ಆರ್ ಪೇಟೆ ಟೌನ್ ಮಾರ್ಗವಾಗಿ ಸಂಚರಿಸಿ ತ್ರಿವೇಣಿ ಸಂಗಮದಲ್ಲಿ ವಾಸ್ತವ್ಯ ಹೂಡಲಿದೆ. ಭಕ್ತಾಧಿಗಳು ಜ್ಯೋತಿ ಯಾತ್ರೆಯಲ್ಲಿ ಹಾಗೂ ಅಕ್ಟೋಬರ್ 14 ರಿಂದ 16 ರವರೆಗೆ ಕೆ.ಆರ್.ಪೇಟೆಯ ಅಂಬಿಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ನಡೆಯುವ ಕುಂಭಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಂಡ್ಯ ಜಿಲ್ಲಾಡಳಿತ ಕೋರಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications