ಮಾಜಿ ಶಾಸಕರ ಮನೆಯಲ್ಲಿ ಗಂಡಸ್ತನ ಕಳೆದುಕೊಂಡೆ! ಶಾಸಕ ಉದಯ್ ವಿವಾದಾತ್ಮಕ ಹೇಳಿಕೆ
ಮದ್ದೂರು: ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಮನೆಯಲ್ಲಿ ನಾನು ನನ್ನ ಗಂಡಸ್ತನವನ್ನು ಕಳೆದುಕೊಂಡಿದ್ದೇನೆ ಎನ್ನುವ ಮೂಲಕ ಮದ್ದೂರು ಶಾಸಕ ಕೆ.ಎಂ.ಉದಯ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮದ್ದೂರು ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಸಮನ್ವಯ ಸಮಿತಿ ಸಭೆಯಲ್ಲಿ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಶಾಸಕ ಉದಯ್ ಅವರು ಗೋವಾದಲ್ಲಿ ತಮ್ಮ ಗಂಡಸ್ತನವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದಕ್ಕೆ ಉತ್ತರ ನೀಡಿದ ಶಾಸಕ ಕೆ.ಎಂ.ಉದಯ್ ಅವರ ಮನೆಯಲ್ಲೇ ಗಂಡಸ್ತನ ಕಳೆದುಕೊಂಡೆ ಎಂದಿದ್ದಾರೆ.

ನಾನು ಗೋವಾದಲ್ಲಾಗಲಿ ಅಥವಾ ಬೇರೆಲ್ಲೂ ನನ್ನ ಗಂಡಸ್ತನವನ್ನು ಕಳೆದುಕೊಂಡಿಲ್ಲ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಮನೆಯಲ್ಲೇ ನಾನು ಗಂಡಸ್ತನ ಕಳೆದುಕೊಂಡಿದ್ದೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನೂರಾರು ಕೋಟಿ ಆಸ್ತಿ ಹೇಗೆ ಬಂತು?
ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರೇನು ರಾಜ ಮನೆತನದವರಾ? ನೂರಾರು ಕೋಟಿ ಆಸ್ತಿ ಹೇಗೆ ಬಂತು ನನ್ನ ತಾತನ ವಯಸ್ಸಾಗಿದೆ ನಾಲಿಗೆಯ ಮೇಲೆ ಹಿಡಿತ ಇರಬೇಕು ಎಂದು ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಅವರ ವಿರುದ್ಧ ಶಾಸಕ ಉದಯ್ ಕಿಡಿಕಾರಿದರು.
ಬಿಜೆಪಿ ಜೆಡಿಎಸ್ ಸಮನ್ವಯ ಸಭೆಯಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡುತ್ತಾ ಶಾಸಕ ಕೆ.ಎಂ.ಉದಯ್ ಅವರು ಎಲ್ಲೋ ಲೂಟಿ ಮಾಡ್ಕೊಂಡು ಬಂದು ಇಲ್ಲಿ ಜನಸೇವೆ ನಾಟಕ ಮಾಡ್ತಿದ್ದಾರೆ. ಚುನಾವಣೆಯಲ್ಲಿ ಕ್ಷೇತ್ರದ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದು ಶಾಸಕ ಕೆ.ಎಂ.ಉದಯ್ ವಿರುದ್ಧ ಆಕ್ರೋಶದ ಮಾತುಗಳನ್ನಾಡಿದರು.
ಈ ಸಂಬಂಧ ಶಾಸಕ ಕೆ.ಎಂ.ಉದಯ್ ಕೆಸ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರು ಅಧಿಕಾರಿಯಾಗಿದ್ದಾಗ ಕೋಟ್ಯಂತರ ರೂಪಾಯಿ ಹಣವನ್ನು ಲೂಟಿ ಮಾಡಿ ರಾಜಕೀಯಕ್ಕೆ ಬಂದು ಆಸ್ತಿ ಮಾಡಿಕೊಂಡಿದ್ದಾರೆ. ನಾವು ಕಷ್ಟಪಟ್ಟು ಬೆಂಗಳೂರಿಗೆ ಹೋಗಿ ಉದ್ಯಮವನ್ನು ಬೆಳೆಸಿ ಅಲ್ಲಿ ಬಂದ ಹಣದಲ್ಲಿ ಜನ ಸೇವೆ ಮಾಡುತ್ತಿದ್ದೇವೆ ಅದನ್ನು ಸಹಿಸದೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ ನಮ್ಮ ತಾತನ ವಯಸ್ಸಾಗಿದೆ ನಾಲಿಗೆಯ ಚಪಲಕ್ಕೆ ಏನೇನು ಮಾತನಾಡಿದರೆ ಹೇಗೆ ಎಂದ ಡಿ.ಸಿ.ತಮ್ಮಣ್ಣ ಅವರ ವಿರುದ್ಧ ಹರಿಹಾಯ್ದರು.
ಕಾಂಗ್ರೆಸ್ ಬಿರುಸಿನ ಪ್ರಚಾರ
ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ಮದ್ದೂರು ವಿಧಾನಸಭಾ ಕ್ಷೇತ್ರದಾದ್ಯಂತ ಶುಕ್ರವಾರ ಬಿರುಸಿನ ಮತಪ್ರಚಾರ ನಡೆಸಿದರು.
ಶಾಸಕ ಕೆ.ಎಂ.ಉದಯ್ ಮಾತನಾಡಿ, ಸರಳ ಸಜ್ಜನಿಕೆ ಹೊಂದಿರುವ ಹಾಗೂ ಸಮಾಜ ಮುಖಿ ಚಿಂತನೆಗಳನ್ನು ಹೊಂದಿರುವ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರನ್ನು ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಸರ್ಕಾರದ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.












Click it and Unblock the Notifications