ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದ ಸ್ಫೋಟಕ ಆಡಿಯೋ ಬಗ್ಗೆ ಸುಮಲತಾಗೆ ಮೊದಲೇ ಡೌಟಿತ್ತಂತೆ!

|
Google Oneindia Kannada News

Recommended Video

Lok Sabha Elections 2019: ಮಂಡ್ಯ ರಾಜಕ್ಕಾರಣಕ್ಕೆ ಸ್ಫೋಟಕ ತಿರುವು ಕೊಟ್ಟ ಆಡಿಯೋ

ಮಂಡ್ಯ, ಏಪ್ರಿಲ್ 13: ಮಂಡ್ಯದ ಹಾಲಿ ಸಂಸದ ಎಲ್ ಆರ್ ಶಿವರಾಮೇಗೌಡರ ಪುತ್ರ ಚೇತನ್ ಗೌಡ ಮತ್ತು ಜೆಡಿಎಸ್ ಕಾರ್ಯಕರ್ತ ಪಿ ರಮೇಶ್ ಎಂಬುವವರ ಧ್ವನಿ ಎನ್ನಲಾದ ಆಡಿಯೋ ಕುರಿತು ಮಂಡ್ಯದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಪ್ರತಿಕ್ರಿಯೆ ನೀಡಿದ್ದಾರೆ.

"ಮಂಡ್ಯದಲ್ಲಿ ನನ್ನನ್ನು ಸೋಲಿಸಲು ಸಾಕಷ್ಟು ತಂತ್ರಗಳು ನಡೆಯುತ್ತಿವೆ. ಆಡಿಯೋದಲ್ಲಿ ಹೇಳಲಾದ ವಿಷಯದ ಬಗ್ಗೆ ನನಗೆ ಮೊದಲೇ ಸಂಶಯವಿತ್ತು. ಸಾಕಷ್ಟು ಅಕ್ರಮ ನಡೆಯುತ್ತಿದೆ ಎಂಬ ಅನುಮಾನವಿತ್ತು. ಆದ್ದರಿಂದ ನಾನು ಈ ಬಗ್ಗೆ ಚುನಾವಣಾ ಆಯೋಗದ ಬಳಿ ಪ್ರಸ್ತಾಪಿಸಿದ್ದೆ" ಎಂದು ಸುಮಲತಾ ಅಂಬರೀಶ್ ಪ್ರತಿಕ್ರಿಯೆ ನೀಡಿದ್ದಾರೆ.

ಮಂಡ್ಯ ರಾಜಕೀಯಕ್ಕೆ ಹೊಸ ತಿರುವು, ಮತ್ತೊಂದು ಆಡಿಯೋ ಸ್ಫೋಟ!ಮಂಡ್ಯ ರಾಜಕೀಯಕ್ಕೆ ಹೊಸ ತಿರುವು, ಮತ್ತೊಂದು ಆಡಿಯೋ ಸ್ಫೋಟ!

ಹಾಲಿ ಸಂಸದ ಶಿವರಾಮೇಗೌಡರ ಪುತ್ರ ಚೇತನ್ ಗೌಡ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ನಡೆದ ಸಂಭಾಷಣೆಯ ಆಡಿಯೋ ಇದು ಎನ್ನಲಾಗಿದ್ದು, ಮಂಡ್ಯದಲ್ಲಿ ಸ್ವತಂತ್ರ ಅಭ್ಯರ್ಥಿಯನ್ನು ಸೋಲಿಸಿ, ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಸುಮಾರು 150 ಕೋಟಿ ರೂ. ಖರ್ಚು ಮಾಡುವ ಕುರಿತ ಮಾತುಕತೆಯನ್ನು ಇದು ಒಳಗೊಂಡಿದೆ ಎನ್ನಲಾಗಿದೆ.

LS Polls: I had doubt about it: Sumalatha Ambareesh reacts about Audio clips

ಆದರೆ ಈ ಆಡಿಯೋದಲ್ಲಿರುವ ಧ್ವನಿ ನನ್ನದಲ್ಲ ಎಂದು ಚೇತನ್ ಗೌಡ ಹೇಳಿದ್ದು, ನನ್ನ ಮಗನ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಲು ಯಾರೋ ಬೇಕೆಂದೇ ಈ ಕೆಲಸ ಮಾಡಿದ್ದಾರೆ ಎಂದು ಶಿವರಾಮೇಗೌಡ ಸಹ ಆರೋಪಿಸಿದ್ದೆ.

ಜಯಲಲಿತಾ ನಂತರ ಸುಮಲತಾ ಬಹುದೊಡ್ಡ ಮಾಯಾಂಗನೆ: ಶಿವರಾಮೇಗೌಡಜಯಲಲಿತಾ ನಂತರ ಸುಮಲತಾ ಬಹುದೊಡ್ಡ ಮಾಯಾಂಗನೆ: ಶಿವರಾಮೇಗೌಡ

'ಸ್ವತಂತ್ರ ಅಭ್ಯರ್ಥಿ ಸಿನಿಮಾ ಕ್ಷೆತ್ರದವರು, ಅವರಿಗೆ ಮಿಮಿಕ್ರಿ ಮಾಡಿಸಿ ಆಡಿಯೋ ಮಾಡೋದು ಕಷ್ಟದ ಕೆಲಸವಲ್ಲ. ಚುನಾವಣೆಯ ಸಮಯದಲ್ಲಿ ಇನ್ನೂ ಎಷ್ಟು ಆಡಿಯೋಗಳು ಬಿಡುಗಡೆಯಾಗುತ್ತವೋ' ಎಂದು ಶಿವರಾಮೇಗೌಡದರು ಲೇವಡಿ ಮಾಡಿದ್ದಾರೆ.

English summary
"I Had doubt that opponents can do something like this to defeat me" Mandya independent candidate Sumalatha Ambareesh told to media. She reacts about the issue, where MP Shivarame Gowda's Son and a JDS worker have a conversation of Rs 150 Crore deal to defeat the independent candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X