HD Kumaraswamy in Mandya: ಮಂಡ್ಯದಲ್ಲಿ ಎಚ್‌ಡಿ ಕುಮಾರಸ್ವಾಮಿಗೆ ಸೋಲು ಎಂದ ಜಾತಿ ಲೆಕ್ಕಾಚಾರ!

ಮಂಡ್ಯ, ಏಪ್ರಿಲ್.07: ಮಂಡ್ಯ ಲೋಕಸಭಾ ಕ್ಷೇತ್ರ ದಿನ ದಿನಕ್ಕೂ ಕುತೂಹಲ ಕೆರಳಿಸುತ್ತಲೆ ಇದೆ. ಮಂಡ್ಯ ಬಿಟ್ಟುಕೊಡಲ್ಲ ಎನ್ನುತ್ತಿದ್ದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಕಣದಿಂದ ಹಿಂಸೆ ಸರಿದಿದ್ದಾರೆ. ಸದ್ಯ ಬಂಡಾಯದ ಬಿರುಗಾಳಿ ಇಲ್ಲದಿದ್ದರೂ ಕೂಡ ಕ್ಷೇತ್ರದಲ್ಲಿ ಬಿಜೆಪಿ- ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿದ್ದಾರೆ ಎನ್ನುವುದು ಸಂಪೂರ್ಣ ಸತ್ಯವಲ್ಲ.

ಚುನಾವಣಾ ಪ್ರಚಾರವನ್ನು ಭರ್ಜರಿಯಾಗಿ ಆರಂಭಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಜಾತಿ ಲೆಕ್ಕಾಚಾರದ ಸಮೀಕ್ಷೆಯೊಂದು ಭರ್ಜರಿ ಆಘಾತ ನೀಡಿದೆ. ಹೌದು.. ಸಾಮಆಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಮೀಕ್ಷೆಯ ವಿವರಗಳನ್ನು ನೊಡಿದರೇ ಜೆಡಿಎಸ್ ಕೋಟೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿ ಸ್ಟಾರ್ ಚಂದ್ರು ಜಯಶೀಲರಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

Lok Sabha Election 2024 HD Kumaraswamy will lose in Mandya new caste survey report

ಮಂಡ್ಯ ಲೋಕಸಭಾ ಕ್ಷೇತ್ರದ ಜಾತಿವಾರು ವಿವರ

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಪಟ್ಟಿಯ ಪ್ರಕಾರ ಜಿಲ್ಲೆಯಲ್ಲಿ ಒಕ್ಕಲಿಗ ಮತದಾರರು 7,89,420 ಮಂದಿಯಿದ್ದಾರೆ. ಈಗಲೇ ಮತದಾನ ನಡೆದರೇ ಅದರಲ್ಲಿ ಶೇಕಡಾ 75 ರಷ್ಟು ಮತದಾನ ನಡೆದರೆ 5,92,065 ಮತಗಳಾಗುತ್ತವೆ. ಇದರಲ್ಲಿ ಎಚ್ ಡಿ ಕುಮಾರಸ್ವಾಮಿ ಅವರರಿಗೆ ಶೇಕಡಾ 70 ರಷ್ಟು ಮತಗಳು ಹೋಗುತ್ತವೆ. ಅಂದರೆ 4,14,446 ಮತಗಳು ಸೇರುತ್ತವೆ. ಉಳಿದ 30% ಅಂದರೆ 1,77,620 ಮತಗಳು ಸ್ಟಾರ್ ಚಂದ್ರು ಅವರಿಗೆ ಸೇರಲಿವೆ.

ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ/ ಪಂಗಡದ ಮತಗಳು 3,03,601 ಇದ್ದು ಸದ್ಯಕ್ಕೆ ಚುನಾವಣೆ ನಡೆದರೇ ಅದರಲ್ಲಿ ಶೇಕಡಾ 75 ರಷ್ಟು ಮತದಾನ ನಡೆದರೆ 2,27,701 ಮತಗಳಾಗುತ್ತವೆ. ಇದರಲ್ಲಿ ಎಚ್ ಡಿ ಕುಮಾರಸ್ವಾಮಿ ಅವರರಿಗೆ ಶೇಕಡಾ 25 ರಷ್ಟು ಮತಗಳು ಹೋಗುತ್ತವೆ. ಅಂದರೆ 56,925 ಮತಗಳು. ಉಳಿದ 75% ಅಂದರೆ 1,70,776 ಮತಗಳು ಸ್ಟಾರ್ ಚಂದ್ರು ಅವರಿಗೆ.

ಇನ್ನು, ಲಿಂಗಾಯಿತ ಸಮುದಾಯದವರು 1,61,426 ಮತಗಳಿದ್ದು, ಅದರಲ್ಲಿ 75% ಮತದಾನವಾದರೂ 1,21,070 ಮಂದಿ ಮತ ಚಲಾಯಿಸುತ್ತಾರೆ. ಅದರಲ್ಲಿ ಎಚ್‌ಡಿಕೆ ಮತ್ತು ಸ್ಟಾರ್ ಚಂದ್ರು 60:40 ಅನುಪಾತದಲ್ಲಿ ಮತ ಪಡೆಯಲಿದ್ದಾರೆ. ಕುಮಾರಸ್ವಾಮಿಗೆ 72,642 ಮತ್ತು ಸ್ಟಾರ್ ಚಂದ್ರುಗೆ 48,428.

Lok Sabha Election 2024 HD Kumaraswamy will lose in Mandya new caste survey report

ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ 1,29,145 ಮತಗಳಿದ್ದು, 96,859 ಮಂದಿ ಮತ ಚಲಾಯಿಸಿದರೇ ಅದರಲ್ಲಿ 95% ಮತಗಳು ಕಾಂಗ್ರೆಸ್ ಪಾಲಾಗಲಿದೆ. ಉಳಿದ 5% ಮಾತ್ರ ಎಚ್‌ಡಿಕೆ ಅವರಿಗೆ ಉಳಿಯಲಿದೆ. ಅಂದರೆ, 4, 843 ಮತಗಳು ಜೆಡಿಎಸ್ ಪಾಲಾದರೇ, 92,016 ಮತಗಳು ಕಾಂಗ್ರೆಸ್ ಪಾಲಾಗಲಿದೆ.

ಗಂಗಾಮತಸ್ಥರು ಕ್ಷೇತ್ರದಲ್ಲಿ 56,219 ಮತಗಳಿವೆ. ಅದರಲ್ಲಿ 42,164 ಮಂದಿ ಮತ ಚಲಾಯಿಸಿದರೇ ಅದು 40:60 ಅನುಪಾತದಲ್ಲಿ ಅಂದರೆ ಎಚ್ ಡಿ ಕುಮಾರಸ್ವಾಮಿಗೆ 16,866 ಮತ್ತು ಸ್ಟಾರ್ ಚಂದ್ರುಗೆ 25,299 ಸಿಗಲಿವೆ.

30,000 ವಿಶ್ವಕರ್ಮ ಮತದಾರರಿದ್ದು, ಅದರಲ್ಲಿ 22,500 ಮಂದಿ ಮತ ಚಲಾಯಿಸಿದರೆ ಎಚ್‌ಡಿ ಕುಮಾರಸ್ವಾಮಿ 11,250 ಮತ್ತು ಸ್ಟಾರ್ ಚಂದ್ರುಗೆ 11,250 ಮತ ಹೋಗಲಿವೆ. ಅಂದರೆ 50:50.

ಕ್ಷೇತ್ರದಲ್ಲಿ ಬ್ರಾಹ್ಮಣರ ಮತಗಳು 23,915 ಇದ್ದು, ಅದರಲ್ಲಿ 17,936 ಮಂದಿ ಮತದಾನ ಮಾಡಿದರೆ, ಶೇಕಡಾ 90 ರಷ್ಟು ಮತಗಳು ಅಂದರೆ 16,143 ಎಚ್ ಡಿ ಕುಮಾರಸ್ವಾಮಿಗೆ ಹೋಗಲಿದೆ. ಉಳಿದೆ 10% ಮತಗಳು ಅಂದರೆ 1,794 ಮತಗಳು ಮಾತ್ರ ಚಂದ್ರು ಅವರಿಗೆ ಉಳಿಯಲಿವೆ.

ಕ್ಷೇತ್ರದಲ್ಲಿ ಕುರುಬ ಮತದಾರರ ಸಂಖ್ಯೆ 1,71,584 ಇದ್ದು, ಈಗ ಮತದಾನ ನಡೆದರೆ 1,28,688 ಮಂದಿ ಮತ ಚಲಾಯಿಸಲಿದ್ದಾರೆ. ಅದರಲ್ಲಿ 20 % ಮತಗಳು (25,738) ಎಚ್‌ಡಿ ಕುಮಾರಸ್ವಾಮಿಗೆ ಮತ್ತು 80% ಮತಗಳು (1,02,950) ಸ್ಟಾರ್ ಚಂದ್ರುಗೆ ಹೋಗಲಿದೆ.

ಇತರೆ ವಿಭಾಗದಲ್ಲಿ 84,078 ಮತಗಳಿದ್ದು, 63,059 ಮಂದಿ ಮತ ಚಲಾಯಿಸಿದರೇ 18,918 ಎಚ್‌ಡಿ ಕುಮಾರಸ್ವಾಮಿಗೆ, 44,141 ಮತಗಳು ಸ್ಟಾರ್ ಚಂದ್ರುಗೆ ಸೇರಲಿವೆ ಎಂದು ಜಾತಿವಾರು ಲೆಕ್ಕಾಚಾರ ಹೇಳಿದೆ.

ಒಟ್ಟಾರೆ, ಲೆಕ್ಕಾಚಾರದ ಪ್ರಕಾರ ಕ್ಷೇತ್ರದಲ್ಲಿ 17, 49,388 ಮತದಾರರಿದ್ದು ಅದರಲ್ಲಿ 13,12,041 ಮಂದಿ ಮತ ಚಲಾಯಿಸಿದರೆ 6,37,769 ಮತಗಳು ಎಚ್‌ಡಿ ಕುಮಾರಸ್ವಾಮಿ ಅವರಿಗೆ ಮತ್ತು 6,74,272 ಮತಗಳು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರುಗೆ ಸೇರಲಿವೆ. ಇದರಿಂದ 36,503 ಮತಗಳ ಅಂತರದಿಂದ ಸ್ಟಾರ್ ಚಂದ್ರು ಗೆಲ್ಲಲಿದ್ದಾರೆ ಎಂದು ಈ ವಿವರಗಳು ಹೇಳಿವೆ.

ಇದಲ್ಲದೆ ವಿಶೇಷ ಸೂಚನೆಯನ್ನು ಹಂಚಿಕೊಂಡಿದೆ. "ಈ ಮೇಲ್ಕಂಡ ಎಲ್ಲಾ ಸಮುದಾಯಕ್ಕೆ ಸೇರಿದ ಜನರನ್ನು ಸಂಗ್ರಹಿಸಿ ಆಯಾ ಸಮುದಾಯದ ಜನರ ನಾಡಿ ಮಿಡಿತದ ಚುನಾವಣೆಯ ಪೂರ್ವ ಸಮೀಕ್ಷೆಯ ವಿವರದ ಪ್ರಕಾರ ಕಾಂಗ್ರೆಸ್ ಪಕ್ಷವು ಜಯಶಾಲಿಯಾಗಲಿದೆ" ಎಂದು ಹೇಳಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+