ಮಂಡ್ಯದಲ್ಲಿ ಮಗುಚಿ ಬಿದ್ದ ಕೆಎಸ್ ಆರ್ ಟಿಸಿ ಬಸ್: ಓರ್ವ ಸಾವು
ಮಂಡ್ಯ, ಫೆಬ್ರವರಿ 24: ಚಾಲಕನ ನಿಯಂತ್ರಣ ತಪ್ಪಿ ಕೆಎಸ್ ಆರ್‍ಟಿಸಿ ಸಂಸ್ಥೆಗೆ ಸೇರಿದ ರಾಜಹಂಸ ಬಸ್ಸೊಂದು ರಸ್ತೆಯ ಬದಿಯ ಹಳ್ಳಕ್ಕೆ ಮಗುಚಿ ಬಿದ್ದ ಪರಿಣಾಮ ಓರ್ವ ಪ್ರಯಾಣಿಕ ಮೃತಪಟ್ಟು, 12ಮಂದಿ ಗಾಯಗೊಂಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ. ಮೈಸೂರಿನಿಂದ ಬೆಳಗಾವಿಗೆ ತೆರಳುತ್ತಿದ್ದ ಸಂದರ್ಭದ ತಾಲೂಕಿನ ಕಿಕ್ಕೇರಿ ಬಳಿಯ ಬಸವನಹಳ್ಳಿ ಗ್ರಾಮದ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಬೂದಿಹಾಳ ಗ್ರಾಮದ ನಿವಾಸಿ ಸೈಯ್ಯದ್ ಶಕೀಲ್ ಅಹಮದ್(45) ಮೃತ ಪ್ರಯಾಣಿಕ. ಇವರು ಕೆಎಸ್ ಆರ್‍ಟಿಸಿ ಮೈಸೂರು ಗ್ರಾಮಾಂತರ 2ನೇ ಡಿಪೋ ನೌಕರರಾಗಿದ್ದು ಕೆಲಸ ಮುಗಿಸಿ ವಾರದ ರಜೆಗಾಗಿ ತಮ್ಮ ಊರಿನತ್ತ ಪ್ರಯಾಣಿಸುತ್ತಿದ್ದರು.

ರಾಜಹಂಸ ಬಸ್ಸಿನ ಡ್ರೈವರ್ ಮರಂಕ ಮತ್ತು ಕಂಡಕ್ಟರ್ ಮಂಜಪ್ಪ ತುಪ್ಪದ್ ಸೇರಿದಂತೆ 12ಮಂದಿಗೆ ಗಾಯಗಳಾಗಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಕಿಕ್ಕೇರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.












Click it and Unblock the Notifications