• search
 • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಡ್ಯ: ಕೆಆರ್ ಎಸ್ ಜಲಾಶಯ ಭರ್ತಿಗೆ ಒಂದೇ ಅಡಿ ಮಾತ್ರ ಬಾಕಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮಂಡ್ಯ, ಆಗಸ್ಟ್ 13: ಕಳೆದ ಒಂದು ವಾರದಿಂದ ಕೊಡಗಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕಾವೇರಿ ನದಿ ತುಂಬಿ ಹರಿಯುತ್ತಿದ್ದು, ಇದರಿಂದ ಕೆ ಆರ್ ಎಸ್ ಜಲಾಶಯದ ಒಳಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಜಲಾಶಯ ಭರ್ತಿಗೆ ಇನ್ನು ಒಂದೇ ಅಡಿ ಮಾತ್ರ ಬಾಕಿ ಇದೆ.

   DJ ಹಳ್ಳಿಯಲ್ಲಿ ಇದೀಗ ಶುರುವಾಯ್ತು ಹೊಸ ಆತಂಕ | Oneindia Kannada

   ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಕೆ.ಆರ್.ಎಸ್ ಜಲಾಶಯವು ಇಂದು ಸಂಜೆ ವೇಳೆಗೆ ಭರ್ತಿಯಾಗುವ ಸಾಧ್ಯತೆ ಇದೆ. 124.80 ಅಡಿ ಗರಿಷ್ಠ ಸಾಮರ್ಥ್ಯವನ್ನು ಕೆ ಆರ್ ಎಸ್ ಜಲಾಶಯ ಹೊಂದಿದ್ದು, ಪ್ರಸ್ತುತ ನೀರಿನ ಮಟ್ಟ 123 ಅಡಿ ಗಡಿ ದಾಟಿದೆ. ಈ ಮೂಲಕ ಜಲಾಶಯ ಭರ್ತಿಯಾಗಲು ಇನ್ನು ಒಂದು ಅಡಿಯಷ್ಟೇ ಬಾಕಿ ಇದೆ.

    ಕೆಆರ್‌ಎಸ್ ಬಹುತೇಕ ಭರ್ತಿ; ಸಂಸದೆ ಸುಮಲತಾ ಭೇಟಿ ಕೆಆರ್‌ಎಸ್ ಬಹುತೇಕ ಭರ್ತಿ; ಸಂಸದೆ ಸುಮಲತಾ ಭೇಟಿ

   20,923 ಕ್ಯೂಸೆಕ್ ಒಳಹರಿವಿನ ಪ್ರಮಾಣವಿದ್ದು, ಜಲಾಶಯದಿಂದ 3,756 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಕೆ ಆರ್ ಎಸ್ ಜಲಾಶಯ ಗರಿಷ್ಠ 49.454 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಜಲಾಶಯದಲ್ಲಿ ಪ್ರಸ್ತುತ 47.038 ಟಿಎಂಸಿ ನೀರು ಸಂಗ್ರಹವಾಗಿದೆ.

   English summary
   The Cauvery River has been overflow by heavy rains in Kodagu for the past one week, resulting in the KRS reservoir inflow increasing, the reservoir filling only one foot pending.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X