ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದು ವರ್ಷದಲ್ಲಿ ಮೂರು ಬಾರಿ ತುಂಬಿದ ಕೆಆರ್‌ಎಸ್‌ ಡ್ಯಾಂ

|
Google Oneindia Kannada News

ಮಂಡ್ಯ ಅಕ್ಟೋಬರ್‌ 18: ಕಳೆದ ಒಂದು ವಾರಗಳಿಂದ ರಾಜ್ಯದಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ಭಾರಿ ಮಳೆಗೆ ರಾಜ್ಯದ ಅನೇಕ ಕಡೆಗಳಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಇನ್ನೂ ಕೆಲವು ದಿನಗಳು ರಾಜ್ಯದ ವಿವಿಧ ಜಿಲ್ಲೆಯಲ್ಲಿ ಮಳೆ ಮುಂದುವರಿದಿಯಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

ನಿರಂತರ ಮಳೆಯಿಂದ ರಾಜ್ಯದ ನದಿಗಳು ತುಂಬಿ ಹರಿಯುತ್ತಿದ್ದು, ಜಲಾಶಯಗಳಲ್ಲಿ ಮತ್ತೆ ನೀರಿನ ಸಂಚಲನ ಆರಂಭವಾಗಿದೆ. ಈ ಬಾರಿ ನಿರೀಕ್ಷೆ ಮೀರಿ ಮಳೆಯಾಗಿದ್ದು, ರಾಜ್ಯದ ಬಹುತೇಕ ಜಲಾಶಯಗಳು ತುಂಬಿ ಹರಿಯುತ್ತಿದೆ. ಇನ್ನು ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯ 1 ವರ್ಷದ ಅವಧಿಯಲ್ಲಿ ಮೂರು ಭಾರಿ ಭರ್ತಿಯಾಗಿದೆ.

ಮಂಡ್ಯ: ಮಳೆ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಗೇಟ್ ಮುರಿದು ಒಳ್ಳ ನುಗ್ಗಿ ಆಕ್ರೋಶಮಂಡ್ಯ: ಮಳೆ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಗೇಟ್ ಮುರಿದು ಒಳ್ಳ ನುಗ್ಗಿ ಆಕ್ರೋಶ

ಮಂಡ್ಯ, ಮೈಸೂರು ಭಾಗಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಕೆಆರ್‌ಎಸ್ ಜಲಾಶಯದ ಒಳ ಹರಿವು ಹೆಚ್ಚಾಗಿದೆ. ಕಳೆದ ನಾಲ್ಕು ದಿನಗಳಿಂದ ಉತ್ತಮ ಮಳೆಯಾದ ಕಾರಣ ಈ ವರ್ಷದಲ್ಲಿ ಮೂರನೇ ಬಾರಿ ಕೃಷ್ಣರಾಜಸಾಗರ ಅಣೆಕಟ್ಟು ತುಂಬಿದೆ.

Mandya: KRS Dam Filled Up 3 Times In A Year

124.80 ಅಡಿಗಳಿರುವ ಕೆಆರ್‌ಎಸ್‌ ಡ್ಯಾಂ ಒಟ್ಟು 49.45 ಟಿಎಂಸಿ ನೀರು ಸಂಗ್ರಹದಷ್ಟು ಸಾಮರ್ಥ್ಯ ಹೊಂದಿದೆ. ಉತ್ತಮ ಮಳೆಯಿಂದಾಗಿ ಕೆಆರ್‌ಎಸ್‌ ಡ್ಯಾಂನ ಇಂದಿನ ನೀರಿನ ಮಟ್ಟ 49.31 ಟಿಎಂಸಿನಷ್ಟಿದೆ. ಸದ್ಯ ಡ್ಯಾಂನ ಒಳಹರಿವು 54,311 ಕ್ಯೂಸೆಕ್‌ನಷ್ಟಿದ್ದು, ಹೊರ ಹರಿವು 52,115 ಕ್ಯೂಸೆಕ್‌ನಷ್ಟಿದೆ ಎಂದು ವರದಿಯಾಗಿದೆ.

ಟನ್ ಕಬ್ಬಿಗೆ 4500 ರೂ. ವೈಜ್ಞಾನಿಕ ಬೆಲೆ ನೀಡುವಂತೆ ಎಎಪಿ ಮುಖಂಡ ಭಾಸ್ಕರ್‌ರಾವ್ ಒತ್ತಾಯಟನ್ ಕಬ್ಬಿಗೆ 4500 ರೂ. ವೈಜ್ಞಾನಿಕ ಬೆಲೆ ನೀಡುವಂತೆ ಎಎಪಿ ಮುಖಂಡ ಭಾಸ್ಕರ್‌ರಾವ್ ಒತ್ತಾಯ

ಇನ್ನು ಕಳೆದ ವರ್ಷ ಕೆಆರ್‌ಎಸ್ ಜಲಾಶಯದಲ್ಲಿ 41.25 ಟಿಎಂಸಿನಷ್ಟು ನೀರು ಸಂಗ್ರಹವಾಗಿತ್ತು. ಈ ಬಾರಿ ರಾಜ್ಯದಲ್ಲಿ ವರುಣನ ಆರ್ಭಟ ಹೆಚ್ಚಾಗಿದ್ದ ಕಾರಣ ಮೊದಲ ಬಾರಿ ಜುಲೈನಲ್ಲಿ, ಎರಡನೇ ಬಾರಿ ಸಪ್ಟೆಂಬರ್‌ನಲ್ಲಿ ಹಾಗೂ ಮೂರನೇ ಬಾರಿ ಅಕ್ಟೋಬರ್‌ನಲ್ಲಿ ಕೆಆರ್‌ಎಸ್‌ ಡ್ಯಾಂ ಭರ್ತಿಯಾಗಿದ್ದು, ದಾಖಲೆ ಬರೆದಿದೆ.

ಕೆಆರ್‌ಎಸ್‌ ಡ್ಯಾಂ ಹಳೆ ಮೈಸೂರು ಭಾಗದ ಜನರ ಜೀವನಾಡಿಯಾಗಿದೆ. ಈ ವರ್ಷ ಮೂರು ಬಾರಿ ಜಲಾಶಯ ಸಂಪೂರ್ಣ ಭರ್ತಿಯಾಗಿರುವುದರಕ್ಕೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ಭಾರಿ ಮಳೆಯಿಂದಾಗಿ, ಕೆಆರ್‌ಎಸ್‌ ಮಾತ್ರವಲ್ಲದೆ, ತುಂಗಭದ್ರಾ ಜಲಾಶಯ, ಆಲಮಟ್ಟಿ ಜಲಾಶಯ, ಕಬಿನಿ ಜಲಾಶಯ, ಭದ್ರಾ ಜಲಾಶಯ, ಮಲಪ್ರಭಾ ಜಲಾಶಯ ಸೇರಿದಂತೆ ರಾಜ್ಯದ ಎಲ್ಲಾ ಜಲಾಶಯಗಳು ಬಹುತೇಕ ಭರ್ತಿಯಾಗಿದೆ. ಒಂದೆಡೆ ಜಲಾಶಯ ತುಂಬಿದಕ್ಕೆ ಕರ್ನಾಟಕದ ಕೆಲ ಪ್ರದೇಶದ ರೈತರು ಸಂತಸ ವ್ಯಕ್ತಪಡಿಸಿದೆ, ಇನ್ನೊಂದಡೆ ಈ ವರ್ಷ ಸುರಿದ ಅಧಿಕ ಮಳೆಯಿಂದಾಗಿ ರೈತರು ಕಂಗಾಲಾಗಿದ್ದಾರೆ.

ಮಳೆಗಾಲ ಆರಂಭದಿಂದ ಅತಿವೃಷ್ಟಿಯ ಹೊಡೆತವನ್ನು ರೈತರು ಅನುಭವಿಸುತ್ತಿದ್ದಾರೆ. ಉತ್ತರ ಕರ್ನಾಟಕ, ತುಮಕೂರು, ಚಿತ್ರದುರ್ಗ ಸೇರಿದಂತೆ ಅನೇಕ ಕಡೆಗಳಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿದ ಮಳೆಯಾಗಿದೆ. ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ್ದು, ಈ ಬಾರಿಯ ಬಹುತೇಕ ಬೆಳೆಗಳು ಮಳೆ ನೀರು ಪಾಲಾಗಿದೆ. ದರ ಕುಸಿತ, ಮಾರುಕಟ್ಟೆ ಸಮಸ್ಯೆ, ಗೊಬ್ಬರ ಕೊರತೆ ಸೇರಿದಂತೆ ಅನೇಕ ಸವಾಲುಗಳನ್ನು ಎದುರಿಸುತ್ತಿರುವ ರೈತರಿಗೆ ಈ ವರ್ಷದ ಮಳೆ ಭಾರಿ ಹೊಡೆತ ನೀಡಿದೆ.

English summary
Mandya Krishna Raja Sagara Dam filled up 3 times in a year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X