ಮಂಡ್ಯದಲ್ಲಿ ಖರ್ಗೆ ಕಾಮಿಡಿ, ಗಂಭೀರ ವದನನ ಹಾಸ್ಯ ಚಟಾಕಿ

ಮಂಡ್ಯ, ಮೇ 06: ಮಂಡ್ಯದಲ್ಲಿ ಚುನಾವಣಾ ಪ್ರಚಾರ ಸಮಯದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಸಂಸದ ಮಲ್ಲಿಕಾರ್ಜುನ ಖರ್ಗೆ ಒಳ್ಳೆ ಕಾಮಿಡಿ ಮಾಡಿದ್ದಾರೆ.

ಮಂಡ್ಯದಲ್ಲಿ ಖರ್ಗೆ ಅವರು ಪ್ರಚಾರ ಭಾಷಣ ಮಾಡುವಾಗ ಇದ್ದಕ್ಕಿದ್ದಂತೆ ಮೈಕ್ ಕೈ ಕೊಟ್ಟಿತು. ಕೂಡಲೇ ಖರ್ಗೆ ಅವರ ಹಾಸ್ಯ ಪ್ರವೃತ್ತಿ ಜಾಗೃತವಾಗಿ, 'ಮೋದಿ ಕಡೆಯವರು ಯಾರಾದ್ರು ಇದಾರಾ ನೋಡ್ರಪ್ಪ ಇಲ್ಲಿ, ಅವರೇ ಮೈಕ್ ಕಟ್ ಮಾಡಿದ್ದಾರೇನೊ?' ಎಂದು ಹಾಸ್ಯ ಚಟಾಕಿ ಹಾರಿಸಿದರು.

ಸದಾ ಗಂಭಿರವಾಗಿರುವ ಖರ್ಗೆ ಬಾಯಲ್ಲಿ ಹಾಸ್ಯ ಚಟಾಕಿ ಕೇಳಿದ ಕಾಂಗ್ರೆಸ್ ಕಾರ್ಯಕರ್ತರು ಗೊಳ್ ಎಂದು ನಕ್ಕರು. ಶಿಳ್ಳೆ, ಚಪ್ಪಾಳೆಗಳ ಸುರಿಮಳೆಯೂ ಜೋರಾಗಿಯೇ ಆಯಿತು. ಸಣ್ಣ ತಾಂತ್ರಿಕ ಸಮಸ್ಯೆಯನ್ನೂ ಖರ್ಗೆಯವರು ಮೋದಿ ವಿರುದ್ಧ ಬಳಸಿ ಮೋದಿ ವಿರುದ್ಧ ಟೀಕಿಸುವ ಸಿಗುವ ಸಣ್ಣ ಅವಕಾಶವನ್ನೂ ತಾವು ಬಿಡುದಿಲ್ಲವೆಂಬುದನ್ನು ಸೂಚ್ಯಗೊಳಿಸಿದರು.

Karnataka elections: Mallikarjun Kharge makes comedy in election campaign

ಇತ್ತೀಚೆಗೆ ತಾನೆ ಮೋದಿ ಅವರು ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ ಖರ್ಗೆ ಅವರ ವಿಷಯ ಪ್ರಸ್ತಾಪಿಸಿ, ದಲಿತ ಮುಖಂಡ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡದೆ ಕಾಂಗ್ರೆಸ್‌ ದಲಿತ ವಿರೋಧಿ ಧೋರಣೆ ಅನುಸರಿಸಿದೆ ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಖರ್ಗೆ 'ಮೋದಿ ಅವರಿಗೆ ಅವಕಾಶ ಇದ್ದರೂ ಸಹಿತ ನನಗೆ ವಿರೋಧ ಪಕ್ಷ ನಾಯಕ ಸ್ಥಾನ ನೀಡಲಿಲ್ಲ, ಇನ್ನು ಕಾಂಗ್ರೆಸ್‌ ಬಗ್ಗೆ ಮಾತನಾಡಬೇಡಿ' ಎಂದು ಎದಿರೇಟು ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+