ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಪರೇಷನ್‌ ಕಮಲ : ಎಚ್ಡಿಕೆಗೆ ಚೆಲುವರಾಯಸ್ವಾಮಿ ಪ್ರಶ್ನೆ!

|
Google Oneindia Kannada News

ಮಂಡ್ಯ, ಡಿಸೆಂಬರ್ 04 : 'ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರುತ್ತಿದ್ದೇವೆ. ಜ.21ರಂದು ಸೇರ್ಪಡೆಗೊಳ್ಳಬಹುದು, ದಿನಾಂಕ ಇನ್ನು ಖಚಿತವಾಗಿಲ್ಲ' ಎಂದು ಶಾಸಕ ಚೆಲುವರಾಯಸ್ವಾಮಿ ಹೇಳಿದರು.

ಡಿಕೆಶಿ ಅಕ್ಕ-ಪಕ್ಕ ಕಾಣಿಸಿಕೊಳ್ಳುತ್ತಿರುವ ಜೆಡಿಎಸ್ ರೆಬೆಲ್ ಶಾಸಕರುಡಿಕೆಶಿ ಅಕ್ಕ-ಪಕ್ಕ ಕಾಣಿಸಿಕೊಳ್ಳುತ್ತಿರುವ ಜೆಡಿಎಸ್ ರೆಬೆಲ್ ಶಾಸಕರು

ಮಂಡ್ಯದಲ್ಲಿ ಮಾತನಾಡಿದ ನಾಗಮಂಗಲ ಕ್ಷೇತ್ರದ ಶಾಸಕ ಚೆಲುವರಾಯ ಸ್ವಾಮಿ, 'ಕಾಂಗ್ರೆಸ್ ಸೇರ್ಪಡೆ ದಿನಾಂಕವನ್ನು ಇನ್ನೂ ಅಂತಿಮಗೊಳಿಸಿಲ್ಲ. ಶೀಘ್ರದಲ್ಲಿಯೇ ಈ ಕುರಿತು ಎಲ್ಲಾ ಶಾಸಕರು ಸೇರಿ ತೀರ್ಮಾನ ಕೈಗೊಳ್ಳಲಿದ್ದೇವೆ' ಎಂದರು.

ಜೆಡಿಎಸ್ ಬಂಡಾಯ ಶಾಸಕರ ಕಾಂಗ್ರೆಸ್ ಸೇರ್ಪಡೆ ಮುಂದಕ್ಕೆ!ಜೆಡಿಎಸ್ ಬಂಡಾಯ ಶಾಸಕರ ಕಾಂಗ್ರೆಸ್ ಸೇರ್ಪಡೆ ಮುಂದಕ್ಕೆ!

ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಮಾತನಾಡಿ, 'ಕುಮಾರಸ್ವಾಮಿ ಅವರು ಮೊದಲು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರಾಗಿ ಮುಸ್ಲಿಂ ಅಥವ ದಲಿತರನ್ನು ನೇಮಕ ಮಾಡಲಿ, ಬಳಿಕ ಮಾತನಾಡಲಿ' ಎಂದು ಸವಾಲು ಹಾಕಿದರು.

ಸಿಎಂ ವಿರುದ್ದ ಎಚ್ಡಿಕೆ ಸಿಡಿಸಿದ ಮತ್ತೊಂದು ಬಾಂಬ್! ಸ್ಫೋಟಿಸುತ್ತಾ, ಠುಸ್ ಆಗುತ್ತಾ?ಸಿಎಂ ವಿರುದ್ದ ಎಚ್ಡಿಕೆ ಸಿಡಿಸಿದ ಮತ್ತೊಂದು ಬಾಂಬ್! ಸ್ಫೋಟಿಸುತ್ತಾ, ಠುಸ್ ಆಗುತ್ತಾ?

ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಭ್ಯರ್ಥಿಯನ್ನು ಬೆಂಬಲಿಸಿದ ಕಾರಣಕ್ಕೆ ಜೆಡಿಎಸ್ 8 ಶಾಸಕರನ್ನು ಪಕ್ಷದಿಂದ ಅಮಾನತು ಮಾಡಿತ್ತು. ಇವರಲ್ಲಿ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಶಾಸಕ ಕೆ.ಗೋಪಾಲಯ್ಯ ಅವರು ಪಕ್ಷಕ್ಕೆ ವಾಪಸ್ ಆಗಿದ್ದಾರೆ. ಉಳಿದ ಏಳು ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ.

ನಡಹಳ್ಳಿ ಕರೆತಂದವರು ಯಾರು?

ನಡಹಳ್ಳಿ ಕರೆತಂದವರು ಯಾರು?

ಜೆಡಿಎಸ್ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಚೆಲುವರಾಯಸ್ವಾಮಿ, 'ಆಪರೇಷನ್ ಕಮಲದಲ್ಲಿ ಸಿದ್ದರಾಮಯ್ಯ ಪಾತ್ರವಿದೆ ಎಂದು ಕುಮಾರಸ್ವಾಮಿ ಆರೋಪ ಮಾಡುತ್ತಾರೆ. ಕಾಂಗ್ರೆಸ್ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರನ್ನು ಜೆಡಿಎಸ್‌ಗೆ ಕರೆತಂದವರು ಯಾರು?' ಎಂದು ಪ್ರಶ್ನಿಸಿದರು.

ಪಕ್ಷ ಬಿಡುವುದು ಸಾಮಾನ್ಯ

ಪಕ್ಷ ಬಿಡುವುದು ಸಾಮಾನ್ಯ

'ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಕ್ಷ ಬಿಡುವುದು, ಸೇರ್ಪಡೆಗೊಳ್ಳುವುದು ಸಾಮಾನ್ಯ. ಒಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಪಕ್ಷದ ಸಾಧನೆ ಆಧರಿಸಿ ಚುನಾವಣೆ ಎದುರಿಸಬೇಕು. ವೈಯಕ್ತಿಕ, ಅನ್ಯ ಪಕ್ಷದ ನಡವಳಿಕೆ ಬಗ್ಗೆ ಟೀಕೆ ಮಾಡುವುದು ಸಮಂಜಸವಲ್ಲ' ಎಂದರು.

ಮೊದಲು ಅಧ್ಯಕ್ಷರನ್ನು ನೇಮಿಸಲಿ

ಮೊದಲು ಅಧ್ಯಕ್ಷರನ್ನು ನೇಮಿಸಲಿ

ಶಾಸಕ ಜಮೀರ್ ಅಹಮದ್ ಖಾನ್ ಮಾತನಾಡಿ, 'ಕುಮಾರಸ್ವಾಮಿ ಪಕ್ಷ ಅಧಿಕಾರಕ್ಕೆ ಬಂದರೆ ದಲಿತ, ಹಿಂದುಳಿದವರಿಗೆ ಉಪ ಮುಖ್ಯಮಂತ್ರಿ ಪಟ್ಟ ನೀಡುತ್ತೇವೆ ಎಂದು ಹೇಳಿದ್ದಾರೆ. ಮೊದಲು ಪಕ್ಷದ ಅಧ್ಯಕ್ಷರಾಗಿ ದಲಿತ ಅಥವ ಮುಸ್ಲಿಂ ನಾಯಕರನ್ನು ನೇಮಿಸಲಿ' ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಸೇರುವ ಶಾಸಕರು ಯಾರು?

ಕಾಂಗ್ರೆಸ್ ಸೇರುವ ಶಾಸಕರು ಯಾರು?

ಶ್ರೀರಂಗಪಟ್ಟಣ ಶಾಸಕ - ರಮೇಶ ಬಂಡಿಸಿದ್ದೇಗೌಡ

ಚಾಮರಾಜಪೇಟೆ ಶಾಸಕ - ಜಮೀರ್ ಅಹಮದ್ ಖಾನ್

ಮಾಗಡಿ ಶಾಸಕ - ಎಚ್.ಸಿ.ಬಾಲಕೃಷ್ಣ

ನಾಗಮಂಗಲ ಶಾಸಕ - ಚೆಲುವರಾಯಸ್ವಾಮಿ

ಗಂಗಾವತಿ ಶಾಸಕ - ಇಕ್ಬಾಲ್ ಅನ್ಸಾರಿ

ಪುಲಿಕೇಶಿ ನಗರ ಶಾಸಕ - ಅಖಂಡ ಶ್ರೀನಿವಾಸಮೂರ್ತಿ

ಹಗರಿಬೊಮ್ಮನಹಳ್ಳಿ ಶಾಸಕ - ಭೀಮಾ ನಾಯಕ್

English summary
Nagamangala MLA N.Cheluvarayaswamy said 7 suspended JDS MLA's will join Indian National Congress on January 21, 2018. JDS suspended MLA's for supporting Congress candidate in Rajya sabha election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X