ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆ.ಎಂ. ದೊಡ್ಡಿಯಲ್ಲಿ ಪಂಚರತ್ನ ಯಾತ್ರೆ: ಅಸ್ವಸ್ಥಗೊಂಡು ಕುಸಿದು ಬಿದ್ದ ಶಾಸಕ ಡಿ.ಸಿ. ತಮ್ಮಣ್ಣ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮದ್ದೂರು, ಡಿಸೆಂಬರ್‌, 21: ತಾಲೂಕಿನ ಕೆ.ಎಂ. ದೊಡ್ಡಿಯಲ್ಲಿ ಬುಧವಾರ ನಡೆದ ಪಂಚರತ್ನ ರಥ ಯಾತ್ರೆ ವೇಳೆ ಶಾಸಕ ಡಿ.ಸಿ. ತಮ್ಮಣ್ಣ ದಿಢೀರ್ ಅಸ್ವಸ್ಥಗೊಂಡು ಕುಸಿದುಬಿದ್ದ ಘಟನೆ ಜರುಗಿತು. ಇದರಿಂದ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೆ.ಎಂ. ದೊಡ್ಡಿಯ ಸರ್ ಎಂ. ವಿಶ್ವೇಶ್ವರಯ್ಯ ವೃತ್ತದಲ್ಲಿ ಎಚ್.ಡಿ. ಕುಮಾರಸ್ವಾಮಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಈ ವೇಳೆ ಸುಡುಬಿಸಿಲಿನಿಂದ ಬಸವಳಿದಿದ್ದ ಶಾಸಕ ಡಿ.ಸಿ. ತಮ್ಮಣ್ಣ ರಥಯಾತ್ರೆಯಲ್ಲಿ ಕುಸಿದುಬಿದ್ದರು.

ಕುಸಿದು ಬಿದ್ದ ಶಾಸಕ ಡಿ.ಸಿ. ತಮ್ಮಣ್ಣ

ನಂತರ ಸ್ಥಳದಲ್ಲಿದ್ದ ತಮ್ಮಣ್ಣನ ಪುತ್ರಿ ಡಾ. ಸೌಮ್ಯ ಹಾಗೂ ರಥಯಾತ್ರೆಯ ಜೊತೆಯಲ್ಲಿ ಆ್ಯಂಬುಲೆನ್ಸ್‌ನಲ್ಲಿ ಬಂದಿದ್ದ ವೈದ್ಯಕೀಯ ಸಿಬ್ಬಂದಿಗಳು ತಮ್ಮಣ್ಣ ಅವರ ರಕ್ತದೊತ್ತಡ ಮತ್ತು ಸಕ್ಕರೆ ಅಂಶ ಪರಿಶೀಲನೆ ನಡೆಸಿದರು. ಅವರ ಆರೋಗ್ಯದಲ್ಲಿ ಸಾಮಾನ್ಯ ಸ್ಥಿತಿ ಇದ್ದು, ಯಾವುದೇ ಆತಂಕವಿರಲಿಲ್ಲ ಎಂದು ವೈದ್ಯರು ತಿಳಿಸಿದರು. ಸುಡು ಬಿಸಿಲಿನಿಂದ ಅವರಿಗೆ ಈ ಪರಿಸ್ಥಿತಿ ಉಂಟಾಗಿದೆ ಎಂದು ತಪಾಸಣೆ ನಂತರ ತಿಳಿದುಬಂದಿತು. ನಂತರ ಚೇತರಿಸಿಕೊಂಡ ಶಾಸಕ ತಮ್ಮಣ್ಣ ಕಾರ್ಯಕರ್ತರತ್ತ ಕೈ ಬೀಸಿ ನಗೆ ಬೀರಿದರು. ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ಕ್ರೀಡಾಂಗಣದ ವೇದಿಕೆ ನಿರ್ಮಾಣ ಹಾಗೂ ಹಳ್ಳಿಗಳಿಂದ ಕಾರ್ಯಕರ್ತರನ್ನು ಕರೆತರುವ ಸಿದ್ಧತೆ ಇದ್ದ ಕಾರಣ ವಿಶ್ರಾಂತಿ ಇಲ್ಲದೆ ಕೆಲಸ ಮಾಡಿದ್ದರು. ಇದರಿಂದಾಗಿ ಅವರು ಅಸ್ವಸ್ಥಗೊಳ್ಳಲು ಕಾರಣವೆಂದು ಹೇಳಲಾಗಿದೆ.

ಮಳವಳ್ಳಿ: ಕೊಟ್ಟ ಭರವಸೆಗಳನ್ನ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಮತ ಕೇಳುವುದಿಲ್ಲ ಎಂದ ಕುಮಾರಸ್ವಾಮಿಮಳವಳ್ಳಿ: ಕೊಟ್ಟ ಭರವಸೆಗಳನ್ನ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಮತ ಕೇಳುವುದಿಲ್ಲ ಎಂದ ಕುಮಾರಸ್ವಾಮಿ

ಎಚ್‌ಡಿಕೆ ಲಘುವಾಗಿ ಮಾತಾಡುವುದು ಸರಿಯಲ್ಲ

ವಿಧಾನಸಭಾ ಅಧಿವೇಶನದ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಲಘುವಾಗಿ ಮಾತನಾಡಿರುವುದು ಸರಿಯಲ್ಲ. ಮುಖ್ಯಮಂತ್ರಿಯಾಗಿದ್ದವರು ಸದನದ ಬಗ್ಗೆ ಗೌರವವಿಟ್ಟುಕೊಂಡು ಮಾತನಾಡಬೇಕು. ಸದನದ ಗೌರವ ಕುಂದಿಸುವ ಮಾತುಗಳು ಅವರಿಗೆ ಶೋಭೆ ತರುವುದಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಮಂಡ್ಯದಲ್ಲಿ ಹೇಳಿದ್ದರು. ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಅಧಿವೇಶನದಲ್ಲಿ ಭಾಗವಹಿಸುವುದಕ್ಕಿಂತ ಚುನಾವಣೆಯೇ ಮುಖ್ಯ ಎಂದುಕೊಂಡವರಿಗೆ ಏನೂ ಹೇಳಲಾಗದು. ಪಂಚರತ್ನ ರಥಯಾತ್ರೆಯನ್ನು ಮುಂದೆಯೂ ಮಾಡಬಹುದು. ಅಧಿವೇಶನಕ್ಕೆ ಮತ್ತೆ ಅವಕಾಶ ಸಿಗುವುದಿಲ್ಲ ಎಂದಿದ್ದರು.

JDS Pancharatna yatra in K M Doddi; Health problem to D C Thammanna

ಸದನದಲ್ಲಿ ಚರ್ಚೆಯಾಗುವ ವಿಷಯಗಳೆಲ್ಲವೂ ಜಾರಿಯಾಗುತ್ತಾ ಎಂದು ಕುಳಿತರೆ ಏನೂ ಆಗಲ್ಲ. ಜನರು, ರೈತರ ಸಮಸ್ಯೆಗಳಿಗೆ ಪರಿಹಾರ ಸಿಗುವ ವೇದಿಕೆ ಅದು. ಅಲ್ಲಿ ಶಾಸಕರಾದವರಿಗೆ ಹಕ್ಕೋತ್ತಾಯಗಳನ್ನು ಮಂಡಿಸುವುದಕ್ಕೆ ಸಂಪೂರ್ಣ ಅಧಿಕಾರವಿದೆ. ಸದನವನ್ನೇ ದೂರುವುದಾದರೆ ನಾವೆಲ್ಲಾ ವಿಧಾನಸಭೆಗೆ ಏಕೆ ಆಯ್ಕೆಯಾಗಬೇಕು. ವಿಧಾನಸಭೆಯಾದರೂ ಏಕಿರಬೇಕು ಎಂದು ಪ್ರಶ್ನಿಸಿದರು. ರೈತರು ತಿಂಗಳಿಗೂ ಹೆಚ್ಚು ಕಾಲ ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದಾರೆ. ಹಾಲಿಗೆ ಪ್ರೋತ್ಸಾಹಧನ ಬಿಡುಗಡೆಯಾಗಿಲ್ಲ. ವಸತಿರಹಿತರಿಗೆ ವಸತಿಯನ್ನು ನೀಡಲಾಗಿಲ್ಲ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತಬೇಕಾದ ಶಾಸಕರು ಪಂಚರತ್ನ ರಥಯಾತ್ರೆಯಲ್ಲಿ ನಿರತರಾಗಿದ್ದರೆ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಸಿಗುವುದು ಹೇಗೆ? ನಮಗಂತೂ ಅಧಿಕಾರವಿಲ್ಲ. ನಾವು ಸರ್ಕಾರಕ್ಕೆ ಮನವಿ ಕೊಡಬಹುದು ಅಷ್ಟೇ. ಶಾಸಕರಾಗಿರುವವರಿಗೆ ಸದನದಲ್ಲಿ ಮಾತನಾಡುವ ಅಧಿಕಾರವಿದೆ. ಜನರು, ರೈತರ ಕಷ್ಟಗಳನ್ನು ಪ್ರಸ್ತಾಪಿಸುವುದಕ್ಕೆ ಅವಕಾಶವಿದ್ದರೂ ಚುನಾವಣೆಯನ್ನೇ ಪ್ರಧಾನ ಆದ್ಯತೆಯನ್ನಿಟ್ಟುಕೊಂಡು ಕರ್ತವ್ಯವನ್ನು ಮರೆತರೆ ಜನರೇ ಅದಕ್ಕೆ ಉತ್ತರ ಕೊಡಬೇಕು ಎಂದು ಹೇಳಿದ್ದರು.

English summary
JDS Pancharatna yatra in K M Doddi of Maddur talu, mandya district. Health problem to MLA D C Thammanna,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X