ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ ಜೆಡಿಎಸ್‌ ಸಮಾವೇಶ : ನಿಖಿಲ್ ಅಭ್ಯರ್ಥಿ ಎಂದು ಘೋಷಣೆ

|
Google Oneindia Kannada News

ಮಂಡ್ಯ, ಮಾರ್ಚ್ 14 : ಮಂಡ್ಯ ಲೋಕಸಭಾ ಕ್ಷೇತ್ರದ ಮದ್ದೂರಿನಲ್ಲಿ ಗುರುವಾರ ಜೆಡಿಎಸ್‌ನ ಬೃಹತ್ ಸಮಾವೇಶ ನಡೆಯುತ್ತಿದೆ. 2019ರ ಲೋಕಸಭಾ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಎಂದು ಸಮಾವೇಶದ ಮೂಲಕ ಘೋಷಣೆ ಮಾಡಲಾಗುತ್ತದೆ.

ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತವರು ಕ್ಷೇತ್ರದಲ್ಲಿ ಜೆಡಿಎಸ್‌ನ ಸಮಾವೇಶ ಆರಂಭವಾಗಿದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ನಿಖಿಲ್ ಕುಮಾರಸ್ವಾಮಿ ಮುಂತಾದವರು ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಬೆಂಬಲಿಸಲ್ಲ : ಪ್ರಸನ್ನಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಬೆಂಬಲಿಸಲ್ಲ : ಪ್ರಸನ್ನ

Nikhil Kumaraswamy

ಎಚ್.ಡಿ.ದೇವೇಗೌಡರು ಹೊಳೆನರಸೀಪುರದಲ್ಲಿ ಬುಧವಾರ ಸಮಾವೇಶ ನಡೆಸಿ ಪ್ರಜ್ವಲ್ ರೇವಣ್ಣ ಹಾಸನದ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರು. ಇಂದು ಮತ್ತೊಬ್ಬ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಹೆಸರು ಘೋಷಣೆ ಮಾಡಲು ಮಂಡ್ಯಕ್ಕೆ ಆಗಮಿಸಿದ್ದಾರೆ.

ಮಂಡ್ಯದ ಬಗ್ಗೆ ಗುಪ್ತಚರ ವರದಿ, ಜೆಡಿಎಸ್‌ ಹಾದಿ ಸುಲಭವಲ್ಲ!ಮಂಡ್ಯದ ಬಗ್ಗೆ ಗುಪ್ತಚರ ವರದಿ, ಜೆಡಿಎಸ್‌ ಹಾದಿ ಸುಲಭವಲ್ಲ!

12 ಗಂಟೆಗೆ ನಿಖಿಲ್ ಕುಮಾರಸ್ವಾಮಿ ಅವರು ವೇದಿಕೆಗೆ ಆಗಮಿಸಿದ್ದಾರೆ. ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ಸಲಹೆಯ ಮೇರೆಗೆ ರಾಹುಕಾಲ ಆರಂಭಕ್ಕೂ ಮುನ್ನ ನಿಖಿಲ್ ವೇದಿಕೆಗೆ ಆಗಮಿಸಿದರು.

Newest FirstOldest First
2:29 PM, 14 Mar

'ನನ್ನ ಆರೋಗ್ಯ ಮುಖ್ಯವಲ್ಲ. ನಮ್ಮನ್ನು ನಂಬಿರುವ ಜನರ ಹಿತ ಮುಖ್ಯ. ಈ ನಾಡಿನಲ್ಲಿ 2ನೇ ಜನ್ಮವನ್ನು ಎತ್ತಿ ಬಂದಿದ್ದೇನೆ. ಮಗನಿಗೆ ಆಸ್ತಿ ಮಾಡಬೇಕು ಎಂದು ನಾನು ಬಂದಿಲ್ಲ. ಬಡವರಿಗಾಗಿ ಜೀವನವನ್ನು ಮೀಸಲಾಗಿಟ್ಟಿದ್ದೇನೆ' : ಕುಮಾರಸ್ವಾಮಿ
2:27 PM, 14 Mar

'ಲಕ್ಷ್ಮೀ ಅಶ್ವಿನ್ ಗೌಡ ಅವರಿಗೆ ದೇವೇಗೌಡರು ಅನ್ಯಾಯ ಮಾಡಿದರು ಎಂಬ ಸುದ್ದಿ ಓಡಾಡುತ್ತಿದೆ. ಅವರ ಪತಿ ಐಆರ್‌ಎಸ್ ಅಧಿಕಾರಿಯಾಗಿದ್ದು ನನ್ನ ಕಚೇರಿಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಮೊನ್ನೆ ದೆಹಲಿಗೆ ಹೋಗಿದ್ದಾಗ ಲಕ್ಷ್ಮೀ ಅಶ್ವಿನ್ ಗೌಡ ಅವರು ಪುನಃ ಸರ್ಕಾರಿ ಸೇವೆಗೆ ಸೇರುವ ಬಗ್ಗೆ ಸಚಿವರೊಂದಿಗೆ ಮಾತುಕತೆ ನಡೆಸಿದ್ದೇನೆ' ಎಂದು ಕುಮಾರಸ್ವಾಮಿ ಹೇಳಿದರು.
2:24 PM, 14 Mar

'ಮಾಧ್ಯಮ ಮಿತ್ರರು ಈ ಕ್ಷೇತ್ರದ ವಿಚಾರದಲ್ಲಿ ಮಾಡುತ್ತಿರುವ ಎಲ್ಲಾ ವರದಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ನನ್ನ ಹೆಸರು, ದೇವೇಗೌಡರ ಹೆಸರನ್ನು ಹೇಗೆ ಬಳಕೆ ಮಾಡುತ್ತಿದ್ದಾರೆ ಎಂಬುದನ್ನು ನೋಡಿದ್ದೇನೆ' ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
1:55 PM, 14 Mar

'ಮಂಡ್ಯ ನನಗೆ ರಾಜಕೀಯ ಜನ್ಮಕೊಟ್ಟ ಸ್ಥಾನ. ನಾನು ಕಷ್ಟದಲ್ಲಿದ್ದಾಗ ಮಳವಳ್ಳಿಯ ಜನರು ನನಗೆ ಬೆಂಬಲವಾಗಿ ನಿಂತರು. ನಾನು ಮಂಡ್ಯಕ್ಕೆ ಏನು ಮಾಡಿದೆ ಎಂಬುದನ್ನು ಈಗ ಹೇಳೋಕೆ ಹೋಗುವುದಿಲ್ಲ. ನಾನು 10 ತಿಂಗಳು ಪ್ರಧಾನಿಯಾಗಿದ್ದಾಗ ಮಾಡಿದ ಕೆಲಸವನ್ನು ಈಗ ಗುರುತಿಸುವ ಕಾಲ ಬಂದಿದೆ' ದೇವೇಗೌಡ
1:53 PM, 14 Mar

'ನನ್ನ ಮೊಮ್ಮಗ ಚಿತ್ರರಂತದಲ್ಲಿದ್ದೇನೆ. ಮೊದಲನೆ ಬಾರಿ ಯಾದರೂ ಜಾಗ್ವಾರ್ ಚಿತ್ರದಲ್ಲಿ ಉತ್ತಮವಾಗಿ ನಟಿಸಿದ್ದಾನೆ. ಪಕ್ಷ ಕಟ್ಟಲು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ. ಕಷ್ಟ ಕಾಲದಲ್ಲಿ ಅವರು ಪಕ್ಷದ ಜೊತೆ ನಿಲ್ಲುತ್ತಾರೆ ಎಂಬ ನಂಬಿಕೆ ಮೇಲೆ ಅವರಿಗೆ ಸ್ಪರ್ಧೆ ಮಾಡಲು ಅವಕಾಶ ನೀಡಿದ್ದೇನೆ' ಎಂದು ದೇವೇಗೌಡರು ಹೇಳಿದರು.
1:50 PM, 14 Mar

'ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಹೇಳುತ್ತಾರೆ. ಎಲ್ಲವನ್ನೂ ನಾನು ಗಮನಿಸುತ್ತಿದ್ದೇನೆ. ಯಾರೂ ಯಾರನ್ನೂ ಮುಗಿಸಲು ಆಗುವುದಿಲ್ಲ' ದೇವೇಗೌಡ
1:47 PM, 14 Mar

'ಕಾಂಗ್ರೆಸ್‌ ನಿಯೋಗ ಮನೆಗೆ ಬಂದಾಗ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿ ನಾನು ಬೆಂಬಲ ಕೊಡುತ್ತೇನೆ ಎಂದು ಹೇಳಿದೆ. ಕುಮಾರಸ್ವಾಮಿ ಅವರಿಗೆ ಆರೋಗ್ಯ ಸರಿ ಇಲ್ಲ. ಅವರು ಮುಖ್ಯಮಂತ್ರಿ ಆಗುವುದು ಬೇಡ ಎಂದು ಹೇಳಿದೆ' ಎಂದು ದೇವೇಗೌಡರು ಹೇಳಿದರು.
Advertisement
1:46 PM, 14 Mar

'ಮಂಡ್ಯದ ಮಹಾಜನತೆ ನಮ್ಮ ಮೇಲೆ ಅಭಿಮಾನ ಇಟ್ಟಿದ್ದಾರೆ. 24 ಗಂಟೆ ಅವಧಿಯೊಳಗೆ ಕರೆದ ಸಭೆಗೆ ಸಾವಿರಾರು ಜನರು ಬಂದಿದ್ದೀರಿ. ನಿಖಿಲ್ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ' ಎಂದು ಎಚ್.ಡಿ.ದೇವೇಗೌಡ ಹೇಳಿದರು.
1:42 PM, 14 Mar

'ನಾನು ಮಂಡ್ಯದ ಮನೆ ಮಗ. ನನ್ನ ಕಿವಿ ಹಿಂಡಿ ಬುದ್ಧಿ ಹೇಳಿ. ನಿಮ್ಮ ಗುಲಾಮನಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಿ' ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
1:31 PM, 14 Mar

'ನಿಖಿಲ್ ಅಭ್ಯರ್ಥಿ ಆಗಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ಅವರು ಬಯಸಿರಲಿಲ್ಲ. ಹಿಂದಿನ ಉಪ ಚುನಾವಣೆಯಲ್ಲಿಯೇ ನಿಖಿಲ್ ಅಭ್ಯರ್ಥಿ ಆಗಬೇಕು ಎಂದು ನಾವೇ ಬಯಸಿದ್ದೆವು. ಆದರೆ, ದೇವೇಗೌಡರು ಎಲ್.ಆರ್.ಶಿವರಾಮೇಗೌಡ ಅವರಿಗೆ ಅವಕಾಶ ನೀಡಿದರು' ಎಂದು ಸಚಿವ ಸಾ.ರಾ.ಮಹೇಶ್ ಹೇಳಿದರು.
1:31 PM, 14 Mar

'ನಿಖಿಲ್ ಅಭ್ಯರ್ಥಿ ಆಗಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ಅವರು ಬಯಸಿರಲಿಲ್ಲ. ಹಿಂದಿನ ಉಪ ಚುನಾವಣೆಯಲ್ಲಿಯೇ ನಿಖಿಲ್ ಅಭ್ಯರ್ಥಿ ಆಗಬೇಕು ಎಂದು ನಾವೇ ಬಯಸಿದ್ದೆವು. ಆದರೆ, ದೇವೇಗೌಡರು ಎಲ್.ಆರ್.ಶಿವರಾಮೇಗೌಡ ಅವರಿಗೆ ಅವಕಾಶ ನೀಡಿದರು' ಎಂದು ಸಚಿವ ಸಾ.ರಾ.ಮಹೇಶ್ ಹೇಳಿದರು.
1:28 PM, 14 Mar

'ಸಾಮಾಜಿಕ ಜಾಲತಾಣದಲ್ಲಿ ಬರುವ ಮಾತಿಗೆ ತಲೆ ಕೆಡಿಸಿಕೊಳ್ಳಬೇಡಿ. ಕುಮಾರಸ್ವಾಮಿ ಅವರು ಮಂಡ್ಯದ ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ ನೀಡಿದ್ದಾರೆ. ಇದಕ್ಕಾಗಿ ನಾವೆಲ್ಲರೂ ಜೆಡಿಎಸ್ ನಾಯಕರನ್ನು ಆರಿಸಿ ಕಳಿಸೋಣ. ವಿಧಾನಸಭೆ ಚುನಾವಣೆಯಲ್ಲಿ ಶಾಸಕರನ್ನು ಗೆಲ್ಲಿಸಿದಂತೆ ಲೋಕಸಭಾ ಚುನಾವಣೆಯಲ್ಲಿ ನಿಖಿಲ್‌ರನ್ನು ಗೆಲ್ಲಿಸೋಣ' ಎಂದು ಡಿ.ಸಿ.ತಮ್ಮಣ್ಣ ಕರೆ ಕೊಟ್ಟರು.
Advertisement
1:25 PM, 14 Mar

'ನಿಖಿಲ್ ಕಮಾರಸ್ವಾಮಿ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನ ಮತ್ತು ಸಿ.ಎಸ್.ಪುಟ್ಟರಾಜು ಅವರ ಮೇಲಿದೆ. ನಿಖಿಲ್ ಈ ಕ್ಷೇತ್ರದ ಮಗ' ಎಂದು ಡಿ.ಸಿ.ತಮ್ಮಣ್ಣ ಹೇಳಿದರು.
1:24 PM, 14 Mar

ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಅವರು ವೇದಿಕೆಗೆ ಬರುವ ಮೊದಲೇ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ ಅವರು ಮಂಡ್ಯಕ್ಕೆ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಎಂದು ಘೋಷಣೆ ಮಾಡಿದರು.
1:19 PM, 14 Mar

'ಜೆಡಿಎಸ್‌ಗೆ ಹೊಂದಾಣಿಕೆ ಅನಿವಾರ್ಯವಾಗಿರಲಿಲ್ಲ. ಹೊಂದಾಣಿಕೆ ಅನಿವಾರ್ಯವಾಗಿದ್ದು ಕಾಂಗ್ರೆಸ್‌ ಪಕ್ಷಕ್ಕೆ. ರಾಹುಲ್ ಗಾಂಧಿ ಅವರಿಗೆ ದೇವೇಗೌಡರ ಶಕ್ತಿ ಏನು ಎಂಬುದು ಗೊತ್ತಿದೆ. ಜೆಡಿಎಸ್ ಅಭ್ಯರ್ಥಿಗಳಿಗೆ ತೊಂದರೆ ಕೊಡದೇ ಅವರು ಅಭ್ಯರ್ಥಿಗಳ ಗೆಲುವಿಗೆ ಸಹಕಾರ ನೀಡಬೇಕು' ಎಂದು ಎಲ್.ಆರ್.ಶಿವರಾಮೇಗೌಡ ಹೇಳಿದರು.
1:15 PM, 14 Mar

'ಪತ್ರಿಕೆಗಳು, ಸಾಮಾಜಿಕ ಜಾಲತಾಣಗಳು ಇಂದು ತೋರಿಸಿ ಮಂಡ್ಯದಲ್ಲಿ ಜೆಡಿಎಸ್ ಬಲಿಷ್ಠವಾಗಿದೆ. ಎಲ್ಲಾ ನಾಯಕರು ಒಗ್ಗಟ್ಟಾಗಿದ್ದಾರೆ. ನಾವೆಲ್ಲರೂ ಸೇರಿ ನಿಖಿಲ್ ಕುಮಾರಸ್ವಾಮಿ ಅವರನ್ನು ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸೋಣ' ಎಂದು ಎಲ್.ಆರ್.ಶಿವರಾಮೇಗೌಡ ಹೇಳಿದರು.
1:05 PM, 14 Mar

'ನಾವೆಲ್ಲರೂ ಸೇರಿ ನಿಖಿಲ್ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿ ಎಂದು ಆಯ್ಕೆ ಮಾಡಿದ್ದೇವೆ. ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಅವರನ್ನು ಗೆಲ್ಲಿಸೋಣ' ಎಂದು ಮಂಡ್ಯದ ಹಾಲಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರು ಅವರು ಕರೆ ನೀಡಿದರು.
12:59 PM, 14 Mar

'ನಿಖಿಲ್ ಕುಮಾರಸ್ವಾಮಿ ಅವರನ್ನು ನಾವು ಹೊರಗಿನಿಂದ ಕರೆ ತಂದಿಲ್ಲ. ಅವರು ಮಂಡ್ಯದ ಮನೆ ಮಗ, ಮುಂದೆ ಮಂಡ್ಯದ ಅಳಿಯ ಆದರೂ ಆಗಬಹುದು. ಅವರು ಏನಾದರೂ ಟೀಕೆ ಮಾಡಿಕೊಳ್ಳಲಿ. ಅದಕ್ಕೆ ನಾವು ಪ್ರತಿಕ್ರಿಯೆ ನೀಡುವುದು ಬೇಡ. ನಿಖಿಲ್ ಕುಮಾರಸ್ವಾಮಿ ಗೆಲ್ಲಿಸಲು ಒಟ್ಟಾಗಿ ಕೆಲಸ ಮಾಡೋಣ' ಎಂದು ನಾಗಮಂಗಲ ಶಾಸಕ ಸುರೇಶ್ ಗೌಡ ಹೇಳಿದರು.
12:52 PM, 14 Mar

'ಅಂಬರೀಶ್ ಅವರ ಕುಟುಂಬದ ಮೇಲೆ ಅಪಾರವಾದ ಗೌರವಿದೆ. ಆದರೆ, ಮತ್ತೆ ನಾವು 10 ವರ್ಷ ಹಿಂದಕ್ಕೆ ಹೋಗುವುದು ಬೇಡ, ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಬೆಂಬಲಿಸುವ ಮೂಲಕ ಕುಮಾರಣ್ಣ ಕೈ ಬಲಪಡಿಸೋಣ, ಜಿಲ್ಲೆಯ ಅಭಿವೃದ್ಧಿ ಶ್ರಮಿಸೋಣ' ಎಂದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಹೇಳಿದರು.

English summary
JD(S) rally in Madduru, Mandya on March 14, 2019. Party supremo H.D.Deve Gowda will announce Nikhil Kumaraswamy as Mandya candidate for Lok sabha elections 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X