Get Updates
Get notified of breaking news, exclusive insights, and must-see stories!

ಸುಮಲತಾ ಪರ ಚಲುವರಾಯಸ್ವಾಮಿ ಹಣ ಹಂಚಿದ್ದಾರೆ: ಸುರೇಶ್ ಗೌಡ

Recommended Video

      Mandya: ಸುಮಲತಾ ಹಾಗು ಎನ್ ಚಲುವರಾಯಸ್ವಾಮಿ ಬಗ್ಗೆ ಅಚ್ಚರಿಯ ಹೇಳಿಕೆಯನ್ನ ನೀಡಿದ ಜೆಡಿಎಸ್ ಶಾಸಕ |Oneindia Kannada

      ನಾಗಮಂಗಲ, ಮೇ 10: "ಮಾಜಿ ಶಾಸಕ ಚಲುವರಾಯಸ್ವಾಮಿ ಅವರೊಬ್ಬ ರಾಜಕೀಯ ವ್ಯಭಿಚಾರಿ. ಅವರು ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರ ಹಣ ಹಂಚಿದ್ದಾರೆ" ಎಂಬ ಸ್ಫೋಟಕ ಹೇಳಿಕೆಯನ್ನು ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ನೀಡಿದ್ದಾರೆ.

      ಲೋಕಸಭೆ ಚುನಾವಣೆ ಘೋಷಣೆಯಾದಂದಿನಿಂದಲೂ ಚಲುವರಾಯಸ್ವಾಮಿ ಮತ್ತು ಸುರೇಶ್ ಗೌಡ ಅವರ ನಡುವಿನ ವೈಮನಸ್ಯ ತಾರಕಕ್ಕೇರಿದ್ದು, "ಚಲುವರಾಯಸ್ವಾಮಿ ಒಬ್ಬ ವ್ಯಭಿಚಾರಿ" ಎನ್ನುವ ಮೂಲಕ ಸುರೇಶ್ ಗೌಡ ತಮ್ಮ ಕೋಪವನ್ನು ಹೊರಹಾಕಿದ್ದಾರೆ.

      'ಹಣಕ್ಕಾಗಿ ಏನು ಬೇಕಾದರೂ ಮಾಡುವ ವ್ಯಭಿಚಾರಿಯನ್ನು ಚಲುವರಾಯಸ್ವಾಮಿಗೆ ಹೋಲಿಸಿದರೆ ತಪ್ಪೇನಿಲ್ಲ. ಅವರೂ ಹಾಗೆಯೇ. ಜೆಡಿಎಸ್ ನಲ್ಲಿದ್ದಾಗಲೂ ಪಕ್ಷವಿರೋಧಿ ಕೆಲಸ ಮಾಡಿದ್ರು. ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಆಗ ತಮ್ಮದೇ ಪಕ್ಷದ ಸಿಎಸ್ ಪುಟ್ಟರಾಜು ಅವರನ್ನು ಸೋಲಿಸಿ, ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಅವರು ಗೆಲ್ಲುವಂತೆ ಮಾಡಿದ್ದು, ಇದೇ ಚಲುವರಾಯಸ್ವಾಮಿ' ಎಂದು ಮತ್ತೊಂದು ಬಾಂಬ್ ಸಿಡಿಸಿದರು.

      "ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ನಡವಳಿಕೆಯನ್ನು ತಿದ್ದುಕೊಳ್ಳದಿದ್ದರೆ ಸರ್ಕಾರ ಉಳಿಯೋಲ್ಲ ಎಂದು ಚಲುವರಾಯ ಸ್ವಾಮಿ ಹೇಳಿದ್ದೆ. ಇದು ಭೂತದ ಬಾಯಲ್ಲಿ ಭಗವದ್ಗೀತೆಯನ್ನು ಕೇಳಿದಂತಿದೆ" ಎಂದು ಅವರು ಲೇವಡಿ ಮಾಡಿದರು.

      ಸುಮಲತಾ ಪರ ಕೆಲಸ

      ಸುಮಲತಾ ಪರ ಕೆಲಸ

      "ಚಲುವರಾಯಸ್ವಾಮಿ ಅವರು ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಲೇಬೇಕು ಎಂದು ಪಣತೊಟ್ಟಿದ್ದಾರೆ. ಆದ್ದರಿಂದಲೇ ಸುಮಲತಾ ಅವರ ಪರ ಕೆಲಸ ಮಾಡಿದ್ದೆ. ಅವರಿಗೆ ಮತ ನೀಡುವಂತೆ ಹಣ ಹಂಚಿದ್ದಾರೆ. ಆದರೆ ಗೆಲ್ಲುವುದ ನಮ್ಮ ಅಭ್ಯರ್ಥಿಯೇ. ಚಲುವರಾಯಸ್ವಾಮಿ ಜೆಡಿಎಸ್ ಗಂತೂ ದ್ರೋಹ ಬಗೆದರು. ಇದೀಗ ಕಾಂಗ್ರೆಸ್ ಗೂ ದ್ರೋಹ ಬಗೆಯುವ ಕೆಲಸ ಮಾಡುತ್ತಿದ್ದಾರೆ"- ಸುರೇಶ್ ಗೌಡ

      ರಮ್ಯಾ ಅವರನ್ನು ಸೋಲಿಸಿದ್ದೂ ಚಲುವರಾಯಸ್ವಾಮಿ!

      ರಮ್ಯಾ ಅವರನ್ನು ಸೋಲಿಸಿದ್ದೂ ಚಲುವರಾಯಸ್ವಾಮಿ!

      "2013 ರಲ್ಲಿ ನಡೆದ ಮಂಡ್ಯ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರಮ್ಯಾ ಕಣದಲ್ಲಿದ್ದರು. ಆಗ ಜೆಡಿಎಸ್ ಅಭ್ಯರ್ಥಿಯಾಗಿದ್ದ ಸಿಎಸ್ ಪುಟ್ಟರಾಜು ಅವರು ಸೋಲುವುದಕ್ಕೆ ಕಾರಣ ಇದೇ ಚಲುವರಾಯಸ್ವಾಮಿ. ಆಗ ನಾನು ಕಾಂಗ್ರೆಸ್ಸಿನಲ್ಲಿದ್ದಿದ್ದರಿಂದ ನನಗೆ ಇವೆಲ್ಲವೂ ಗೊತ್ತು. ಅವರು ಜೆಡಿಎಸ್ ನಲ್ಲೇ ಇದ್ದುಕೊಂಡು ಜೆಡಿಎಸ್ ವಿರುದ್ಧ ಕೆಲಸ ಮಾಡಿದ್ದರು. ಆದರೆ ನಂತರ 2014 ರ ಲೋಕಸಭೆ ಚುನಾವಣೆಯಲ್ಲಿ ಚಲುವರಾಯಸ್ವಾಮಿ ಅವರ ಕುತಂತ್ರಗಳನ್ನು ಅರಿತ ಪುಟ್ಟರಾಜು ಎಚ್ಚರಿಕೆಯ ಹೆಜ್ಜೆ ಇಟ್ಟರು. ಗೆದ್ದರು"- ಸುರೇಶ್ ಗೌಡ

      ಸುಮಲತಾ ಅವರನ್ನು ಬಿಎಸ್ ವೈ ಮನೆಗೆ ಕಳಿಸಿದ್ದು ಯಾರು?

      ಸುಮಲತಾ ಅವರನ್ನು ಬಿಎಸ್ ವೈ ಮನೆಗೆ ಕಳಿಸಿದ್ದು ಯಾರು?

      "ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರ ಮನೆಗೆ ಕಳಿಸಿದ್ದು ಯಾರು? ಚಲುವರಾಯಸ್ವಾಮಿಯವರೇ. ಅವರು ಪಕ್ಷದಲ್ಲಿದ್ದುಕೊಂಡೇ ಪಕ್ಶಃದ ವುರುದ್ಧ ಕೆಲಸ ಮಾಡುತ್ತಿದ್ದಾರೆ. ಅವರನ್ನು ವ್ಯಭಿಚಾರಿ ಎನ್ನದೆ ಏನೆನ್ನಬೇಕು? ಇದಕ್ಕಿಂತ ಸೂಕ್ತ ಪದ ಬೇರೆ ಇಲ್ಲ!"- ಸುರೇಶ್ ಗೌಡ

      ಮೋದಿಯವರನ್ನು ಪ್ರಧಾನಿ ಮಾಡಲು ಹೊರಟಿದ್ದಾರೆ!

      ಮೋದಿಯವರನ್ನು ಪ್ರಧಾನಿ ಮಾಡಲು ಹೊರಟಿದ್ದಾರೆ!

      "ನಾವೆಲ್ಲ ಇಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರಧಾನಿಯಾಗಿ ಮಾಡಬೇಕೆಂದು ಶ್ರಮಿಸುತ್ತಿದ್ದರೆ, ಅವರು ಸುಮಲತಾ ಗೆಲುವಿಗಾಗಿ ಹೋರಾಡುತ್ತ, ನರೇಂದ್ರ ಮೋದಿ ಅವರನ್ನೇ ಮತ್ತೆ ಪ್ರಧಾನಿಯನ್ನಾಗಿ ಮಾಡಲು ಹೊರಟಿದ್ದಾರೆ. ಇಂಥ ನಡೆಯನ್ನು ಹೇಗೆ ಒಪ್ಪಿಕೊಳ್ಳುವುದು"- ಸುರೇಶ್ ಗೌಡ

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+