ಗೆದ್ದರೂ, ಸೋತರೂ ಮಂಡ್ಯದಲ್ಲೇ ಇರುವೆ : ನಿಖಿಲ್
Recommended Video
ಮಂಡ್ಯ, ಏಪ್ರಿಲ್ 24 : 'ನಾನು ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ. ನಾನು ಸೋತರೂ ಗೆದ್ದರೂ ಮಂಡ್ಯದಲ್ಲಿಯೇ ಇರುತ್ತೇನೆ' ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಮಂಡ್ಯದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ನಿಖಿಲ್ ಕುಮಾರಸ್ವಾಮಿ ಅವರು ಚುನಾವಣೆಯಲ್ಲಿ ಬೆಂಬಲ ನೀಡಿದ ಎಲ್ಲಾ ಜನರಿಗೆ ಧನ್ಯವಾದಗಳನ್ನು ಅರ್ಪಿಸಿದರು. 'ನಾವು ಯಾರನ್ನೂ ಟಾರ್ಗೆಟ್ ಮಾಡಿಲ್ಲ. ಮಾಡುವುದೂ ಇಲ್ಲ' ಎಂದು ಸ್ಪಷ್ಟಪಡಿಸಿದರು.
'ಮುಖ್ಯಮಂತ್ರಿಗಳಿಗೆ ರಾಜ್ಯದಲ್ಲಿ ಮಾಡಲು ಸಾಕಷ್ಟು ಬೇರೆ ಕೆಲಸಗಳಿವೆ. ಟಾರ್ಗೆಟ್ ಮಾಡೋಕೆ ಅವರಿಗೆ ಸಮಯವಿಲ್ಲ. ಚುನಾವಣೆ ಬಳಿಕ ನಾವು ಯಾರನ್ನೂ ಟಾರ್ಗೆಟ್ ಮಾಡಿಲ್ಲ' ಎಂದು ಹೇಳುವ ಮೂಲಕ ಸುಮತಲಾತ ಅಂಬರೀಶ್ ಅವರ ಆರೋಪಕ್ಕೆ ತಿರುಗೇಟು ನೀಡಿದರು.
ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 18ರಂದು ಚುನಾವಣೆ ನಡೆದಿದೆ. ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಅವರು ಕಣದಲ್ಲಿದ್ದಾರೆ. ಮೇ 23ರಂದು ಮತ ಎಣಿಕೆ ನಡೆಯಲಿದೆ....

ಮಂಡ್ಯದಲ್ಲೇ ಇರುತ್ತೇನೆ
'ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ನನಗಿದೆ. ನಾನು ಗೆದ್ದರೂ ಅಥವ ಸೋತರೂ ನಾನು ಮಂಡ್ಯದಲ್ಲಿಯೇ ಇರುತ್ತೇನೆ. ಜಮೀನು ಖರೀದಿ ಮಾಡಿ ಮಂಡ್ಯದಲ್ಲಿಯೇ ನೆಲೆಸುತ್ತೇನೆ' ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

ಹೋರಾಟದ ಬಗ್ಗೆ ಜನರಿಗೆ ಗೊತ್ತಿದೆ
'ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ಹೋರಾಟಗಳ ಬಗ್ಗೆ ಜನರಿಗೆ ಗೊತ್ತಿದೆ. ಆದ್ದರಿಂದ ಗೆಲ್ಲುತ್ತೇನೆ ಎಂಬ ವಿಶ್ವಾಸ ನನಗಿದೆ. ಚುನಾವಣೆಯಲ್ಲಿ ಒಂದಷ್ಟು ಗೊಂದಲಗಳಿದ್ದವು. ನಾವು ಎಲ್ಲರೂ ಸೇರಿಕೊಂಡು ಚುನಾವಣೆ ಎದುರಿಸಿದ್ದೇವೆ' ಎಂದರು.

ಸರ್ಕಾರ ಉರುಳುವುದಿಲ್ಲ
'ಮೇ 23ರಂದು ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉರುಳುವುದಿಲ್ಲ. ಇಂತಹ ಸುದ್ದಿಗಳಲ್ಲ ಸುಳ್ಳು. ಈ ಚುನಾವಣೆಯಿಂದ ನಾನು ಸಾಕಷ್ಟು ಕಲಿತಿದ್ದೇನೆ' ಎಂದು ನಿಖಿಲ್ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಗ್ರಾಮೀಣಾಭಿವೃದ್ಧಿ ನನ್ನ ಕನಸು
'ಗ್ರಾಮೀಣಾಭಿವೃದ್ಧಿ ನನ್ನ ಕನಸು. ಹಲವಾರು ಆಲೋಚನೆಗಳು ನನ್ನ ಮನಸ್ಸಿನಲ್ಲಿ ಇವೆ. ಇವುಗಳನ್ನು ನನಸು ಮಾಡಲು ಚುನಾವಣೆಯಲ್ಲಿ ಗೆಲ್ಲಬೇಕಾಗಿದೆ. ನಾವು ಯಾರ ಬಳಿಯೂ ಚುನಾವಣಾ ಸಮೀಕ್ಷೆ ಮಾಡಿಸಿಲ್ಲ. ಮೇ 23ರ ತನಕ ಕಾಯುತ್ತೇವೆ. ಬಳಿಕ ಯಾರಿಗೆ ಗೆಲುವು ಎಂಬುದು ತಿಳಿಯಲಿದೆ' ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.












Click it and Unblock the Notifications