ಬಿಜೆಪಿ ಸೇರುವ ಬಗ್ಗೆ ಸುಮಲತಾ ಹೇಳಿದ್ದು ಹೀಗೆ

Recommended Video

      Lok Sabha Elections 2019 : ಗೆದ್ದ ಮೇಲೆ ಬಿಜೆಪಿ ಸೇರ್ತಾರೆ ಸುಮಲತಾ ?

      ಮಂಡ್ಯ, ಏಪ್ರಿಲ್ 05: ಬಿಜೆಪಿ ಸೇರುವ ಯಾವುದೇ ಪ್ರಸ್ತಾಪ ಇಲ್ಲ, ಪಕ್ಷ ಸೇರಬೇಕೆಂಬ ಷರತ್ತು ಹಾಕಿ ಬಿಜೆಪಿ ನನಗೆ ಬೆಂಬಲಿಸಿಲ್ಲ ಎಂದು ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಹೇಳಿದ್ದಾರೆ.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ನಗರದಲ್ಲಿ ಮುಸ್ಲಿಂ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಮಂಡ್ಯದ ಬೆಳವಣಿಗೆಗಳನ್ನು ನೋಡಿ ಬಿಜೆಪಿ ನಮಗೆ ಬೆಂಬಲ ನೀಡಿದೆ, ಪಕ್ಷ ಸೇರಬೇಕೆಂದು ಷರತ್ತು ವಿಧಿಸಿಲ್ಲ ಎಂದು ಅವರು ಹೇಳಿದರು.

      ಗೆದ್ದರೆ ನಾನು ಬಿಜೆಪಿ ಸೇರುತ್ತೇನೆ ಎಂಬ ಸುದ್ದಿ ಕೇವಲ ಊಹಾಪೋಹ ಅಷ್ಟೆ, ಕಾಂಗ್ರೆಸ್ ನನ್ನ ಮೊದಲ ಆದ್ಯತೆ ಆಗಿತ್ತು, ಅಲ್ಲಿಂದ ನನಗೆ ಟಿಕೆಟ್ ಸಿಗದ ಕಾರಣ ನಾನು ಪಕ್ಷೇತರವಾಗಿ ಸ್ಪರ್ಧಿಸಿದ್ದೇನೆ ಎಂದು ಸುಮಲತಾ ಅವರು ಹೇಳಿದರು.

      I will not join BJP, they supporting me unconditionally: Sumalatha

      ಗೆದ್ದ ನಂತರ ಬಿಜೆಪಿಗೆ ಸೇರುವುದು, ಬಿಡುವುದು ಅವರ ವಿವೇಚನೆಗೆ ಬಿಟ್ಟಿದ್ದು ಎಂದು ಯಡಿಯೂರಪ್ಪ ಅವರು ಸಹ ಹೇಳಿದ್ದಾರೆ ಎಂದ ಅವರು, ಬಿಜೆಪಿಗೆ ಸೇರುವುದಿದ್ದರೆ ಈಗಾಗಲೇ ನಾನು ಪಕ್ಷ ಸೇರಿಬಿಡಬಹುದಿತ್ತು, ಮುಂದೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿದ್ದರೆ ನಿಮ್ಮನ್ನು ಕೇಳಿಯೇ ತೆಗೆದುಕೊಳ್ಳುತ್ತೇನೆ ಎಂದು ಸುಮಲತಾ ಅವರು ಮುಸ್ಲಿಂ ಮುಖಂಡರಿಗೆ ಭರವಸೆ ನೀಡಿದರು.

      I will not join BJP, they supporting me unconditionally: Sumalatha

      ಮುಸ್ಲಿಂ ಸಭೆಯಲ್ಲಿ ಸುಮಲತಾ ಅವರು ಉರ್ದುವಿನಲ್ಲೇ ಮಾತನಾಡಿ ಮತ ಯಾಚಿಸಿದ್ದು ವಿಶೇಷವಾಗಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+