Get Updates
Get notified of breaking news, exclusive insights, and must-see stories!

ಭವಿಷ್ಯ ನಿಜವಾದಲ್ಲಿ ' ನನ್ನ ತೋರ್ಬೆರಳ ಕತ್ತರಿಸಿ ಕೋಡಿಶ್ರೀಗಳ ಚರಣಕ್ಕೆ ಅರ್ಪಿಸುವೆ '

Recommended Video

      ಕೋಡಿ ಶ್ರೀಗಳಿಗೆ ಸವಾಲ್ ಹಾಕಿದ ಮಂಡ್ಯದ ಯುವಕ. | Kodi Mutt Swamiji

      ಮಂಡ್ಯ, ಸೆ 21: ಶಿವನೇ..!! ನಾಡಿನ ಹಿರಿಯ ಖಾವಿಧಾರಿಯೊಬ್ಬರ ಮೇಲೆ, ಕಾರ್ಯಕರ್ತನೊಬ್ಬನಿಗೆ ಈ ಪಾಟಿಯ ಸಿಟ್ಟೇ?

      " ಒಂದು ವೇಳೆ ಕೋಡಿ ಶ್ರೀಗಳು ನುಡಿದ ಭವಿಷ್ಯ ಸತ್ಯವಾದರೆ, ನನ್ನ ಹೆಬ್ಬೆರಳನ್ನು ಕತ್ತರಿಸಿ, ಶ್ರೀಗಳ ಪಾದಕ್ಕೆ ಅರ್ಪಿಸುವೆ " ಎಂದು ಬಿಜೆಪಿ ಕಾರ್ಯಕರ್ತನೊಬ್ಬನು ಸವಾಲು ಹಾಕಿದ್ದಾನೆ.

      ರಾಜ್ಯದಲ್ಲಿ ಶೀಘ್ರದಲ್ಲಿಯೇ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಗುರುವಾರ (ಸೆ 19) ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದರು.

      ಶ್ರೀಗಳ ಈ ಭವಿಷ್ಯಕ್ಕೆ ಸಿಟ್ಟಾಗಿ ಮಂಡ್ಯದ ಬಿಜೆಪಿ ಕಾರ್ಯಕರ್ತನು, ಕೋಡಿಶ್ರೀಗಳಿಗೆ ಈ ತೋರ್ಬೆರಳು ಕತ್ತರಿಸುವ ಸವಾಲು ಹಾಕಿದ್ದಾನೆ. ಶ್ರೀಗಳು ಎರಡು ಭವಿಷ್ಯ ನುಡಿದಿದ್ದರು. ಕಾರ್ಯಕರ್ತ ಮಾಡಿದ ಸವಾಲು, ಮುಂದೆ

      ಸಿದ್ದರಾಮಯ್ಯ ಅವರಿಗೆ ಶುಭ ಸೂಚನೆ ಇದೆ

      ಸಿದ್ದರಾಮಯ್ಯ ಅವರಿಗೆ ಶುಭ ಸೂಚನೆ ಇದೆ

      ಹಾಸನದ ಅರಸೀಕೆರೆ ತಾಲ್ಲೂಕಿನ ಗಂಗೆಮಡುವಿನಲ್ಲಿ ಶುಕ್ರವಾರ (ಸೆ 20) ಮಾತನಾಡಿದ ಕೋಡಿಶ್ರೀಗಳು, "ಮುಂಬರುವ ದಿನಗಳಲ್ಲಿ ಸಿದ್ದರಾಮಯ್ಯ ಅವರಿಗೆ ಶುಭ ಸೂಚನೆ ಇದೆ ಎಂದಿದ್ದರು. ಸಿದ್ದರಾಮಯ್ಯ ಅವರು ರಾಷ್ಟ್ರಮಟ್ಟದಲ್ಲಿ ದೊಡ್ಡ ನಾಯಕರಾಗಿ ಬೆಳೆಯಲಿದ್ದಾರೆ" ಎಂದು ಅವರು ಪರೋಕ್ಷವಾಗಿ ಹೇಳಿದ್ದರು.

      ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆ ಸನ್ನಿಹಿತ

      ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆ ಸನ್ನಿಹಿತ

      ಇದಕ್ಕೆ ಒಂದು ದಿನ ಹಾವೇರಿಯಲ್ಲಿ ಮಾತನಾಡಿದ್ದ ಶ್ರೀಗಳು, "ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆ ಸನ್ನಿಹಿತ". ನಾನು ಮೊದಲೇ ಭವಿಷ್ಯ ಹೇಳಿದ್ದೇನೆ. 18 ತಿಂಗಳ ನಂತರ ಮತ ಭಿಕ್ಷೆ ಎಂದು (ಚುನಾವಣೆ). ಇದನ್ನು ಚುನಾವಣೆ ಪೂರ್ವದಲ್ಲಿ ಹೇಳಿದ್ದೆ. ಮೈತ್ರಿ ಸರ್ಕಾರ 14 ತಿಂಗಳಿಗೆ ಪತನವಾಗಿದೆ. ಇನ್ನೂ ಕಾಲಾವಕಾಶ ಇದೆ. ಈಗ 14, 15 ತಿಂಗಳು ಮುಗಿದಿದೆ, ಇನ್ನು ಮೂರ್ನಾಲ್ಕು ತಿಂಗಳು ಕಾದು ನೋಡಿ" ಎಂದು ಒಗಟಾಗಿ ಹೇಳಿದ್ದರು.

      ಬಿಜೆಪಿ ಕಾರ್ಯಕರ್ತನೊಬ್ಬ ಸಿಟ್ಟಾಗಿದ್ದಾನೆ

      ಬಿಜೆಪಿ ಕಾರ್ಯಕರ್ತನೊಬ್ಬ ಸಿಟ್ಟಾಗಿದ್ದಾನೆ

      ಶ್ರೀಗಳ ಬಿಜೆಪಿ ಸರಕಾರ ಪತನಗೊಳ್ಳಲಿದೆ ಎನ್ನುವ ಭವಿಷ್ಯಕ್ಕೆ ಬಿಜೆಪಿ ಕಾರ್ಯಕರ್ತರೊಬ್ಬರು ಸಿಟ್ಟಾಗಿದ್ದಾರೆ. ಕಾರ್ಯಕರ್ತ ಶಿವಕುಮಾರ್, " ಶ್ರೀಗಳ ಬಗ್ಗೆ ನನಗೆ ಅಪಾರ ಗೌರವವಿದೆ. ಸರಕಾರ ಪತನಗೊಳ್ಳಲಿದೆ ಎನ್ನುವ ಅವರ ಹೇಳಿಕೆ ನನಗೆ ತೀವ್ರ ಬೇಸರ ತಂದಿದೆ" ಎಂದು ಹೇಳಿದ್ದಾರೆ.

      ಸುಳ್ಳಾದಲ್ಲಿ, ನನ್ನನ್ನು ಮಠದ ಶಿಷ್ಯನನ್ನಾಗಿ ಸ್ವೀಕರಿಸಬೇಕು

      ಸುಳ್ಳಾದಲ್ಲಿ, ನನ್ನನ್ನು ಮಠದ ಶಿಷ್ಯನನ್ನಾಗಿ ಸ್ವೀಕರಿಸಬೇಕು

      ಅಲ್ಲದೇ, " ಶ್ರೀಗಳ ಹೇಳಿಕೆಯಿಂದ ಬಿಜೆಪಿಯ ನನ್ನಂತಹ ನೂರಾರು ಕಾರ್ಯಕರ್ತರಿಗೆ ತುಂಬಾ ನೋವಾಗಿದೆ. ಅವರ ಭವಿಷ್ಯ ನಿಜವಾದಲ್ಲಿ ನನ್ನ ಹೆಬ್ಬೆರಳನ್ನು ಕತ್ತರಿಸಿ ಅವರ ಚರಣಕ್ಕೆ ಅರ್ಪಿಸುತ್ತೇನೆ. ಸುಳ್ಳಾದಲ್ಲಿ, ನನ್ನನ್ನು ಮಠದ ಶಿಷ್ಯನನ್ನಾಗಿ ಸ್ವೀಕರಿಸಬೇಕು" ಎಂದು ಶಿವಕುಮಾರ್, ಕೋಡಿಶ್ರೀಗಳಿಗೆ ಚಾಲೆಂಜ್ ಮಾಡಿದ್ದಾರೆ.

      ಬೆಳೆ ಒಂದು, ಫಸಲು ಇನ್ನೊಂದು, ಯಾವುದೇ ಸರ್ಕಾರ ಬಂದರೂ ಮತ ಕೇಳ್ತಾರೆ

      ಬೆಳೆ ಒಂದು, ಫಸಲು ಇನ್ನೊಂದು, ಯಾವುದೇ ಸರ್ಕಾರ ಬಂದರೂ ಮತ ಕೇಳ್ತಾರೆ

      "ಬೆಳೆ ಒಂದು, ಫಸಲು ಇನ್ನೊಂದು, ಯಾವುದೇ ಸರ್ಕಾರ ಬಂದರೂ ಮತ ಕೇಳ್ತಾರೆ ಎಂದಿದ್ದೆ" ಎಂದು ಹೇಳುತ್ತಲೇ ಬಿಎಸ್ ವೈ ಸರ್ಕಾರ ಪತನದ ಮುನ್ಸೂಚನೆ ನೀಡಿದ್ದಾರೆ. ಕಾರ್ತಿಕ ಕಳೆಯುವವರೆಗೂ ಈ ಲಕ್ಷಣ ಇದೆ ಎಂದು ತಿಳಿಸಿದ್ದರು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+