ಖಾತೆ ಬಗ್ಗೆ ಅಸಮಾಧಾನವಿಲ್ಲ: ಸಿಎಸ್ ಪುಟ್ಟರಾಜು ಸ್ಪಷ್ಟನೆ

Recommended Video

      ತಮಗೆ ಕೊಟ್ಟಿರುವ ಖಾತೆ ಬಗ್ಗೆ ಸ್ಪಷ್ಟನೆ ಕೊಟ್ಟ ಸಿ ಎಸ್ ಪುಟ್ಟರಾಜು | Oneindia Kannada

      ಬೆಂಗಳೂರು, ಜೂನ್ 09: ಪ್ರಬಲ ಖಾತೆ ಸಿಗದಿರುವುದಕ್ಕೆ ಜೆಡೆಎಸ್ ವರಿಷ್ಠರ ಮೇಲೆ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದ್ದ ಮೇಲುಕೋಟೆ ಶಾಸಕ ಸಿಎಸ್ ಪುಟ್ಟರಾಜು ಸ್ಪಷ್ಟೀಕರಣ ನೀಡಿದ್ದಾರೆ.

      ಸಣ್ಣ ನೀರಾವರಿ ಖಾತೆ ಸಿಕ್ಕಿರುವುದಕ್ಕೆ ಬೇಸರವಿಲ್ಲ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಬೇಕೆಂಬ ಕನಸಿತ್ತು ಅದು ಆಗಿದೆ ಅಷ್ಟೇ ಸಾಕಿದೆ ಎಂದು ಅವರು ಹೇಳಿದ್ದಾರೆ.

      ಮಾಧ್ಯಮಗಳಲ್ಲಿ ಬಂಡಾಯದ ಬಗ್ಗೆ ಪ್ರಕಟವಾಗುತ್ತಿರುವ ವರದಿಗಳು ಸತ್ಯಕ್ಕೆ ದೂರವಾಗಿರುವುದು ಎಂದಿರುವ ಅವರು, ನಮ್ಮ ಬೆಂಬಲಿಗರೂ ಸಹ ಯಾವುದೇ ಪ್ರತಿಭಟನೆಗೆ ಮುಂದಾಗಬಾರದು ಎಂದು ಅವರು ಮನವಿ ಮಾಡಿದ್ದಾರೆ.

      I am not upset because of given portfolio: CS Puttaraju

      ಪುಟ್ಟರಾಜು ಅವರಿಗೆ ಸಣ್ಣ ನೀರಾವರಿ ಖಾತೆ ನೀಡಲಾಗಿತ್ತು. ಇದರಿಂದ ಬೇಸರಗೊಂಡಿದ್ದ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಒತ್ತಾಯ ಹೇರಿದ್ದರು.

      ಪುಟ್ಟರಾಜು ಅವರು ಕೂಡ ದುರ್ಬಲ ಖಾತೆ ಕೊಟ್ಟಿದ್ದಾರೆಂದು ಅಸಮಾಧಾನಗೊಂಡಿದ್ದಾರೆ. ಸರ್ಕಾರಿ ಕಾರನ್ನು ವಾಪಾಸ್ ಕಳುಹಿಸಿದ್ದಾರೆ ಎನ್ನಲಾಗಿತ್ತು. ಆದರೆ ಇದನ್ನು ಅವರು ಅಲ್ಲಗಳೆದಿದ್ದು, ಸರ್ಕಾರಿ ಕಾರು ತಮ್ಮ ಬಳಿಯೇ ಇದೆ ಎಂದಿದ್ದಾರೆ.

      ಜಿಟಿ ದೇವೇಗೌಡ ಹಾಗೂ ಸಿಎಸ್ ಪುಟ್ಟರಾಜು ಅವರು ದುರ್ಬಲ ಖಾತೆ ನೀಡಿರುವುದಕ್ಕೆ ಜೆಡಿಎಸ್ ವರಿಷ್ಠರ ಮೇಲೆ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿತ್ತು. ಆದರೆ ಅಂತಹದ್ದೇನು ಇಲ್ಲ ಎಂದು ಪುಟ್ಟರಾಜು ಅವರು ಸ್ಪಷ್ಠನೆ ನೀಡಿದ್ದಾರೆ. ಆದರೆ ಜಿಟಿ ದೇವೇಗೌಡರ ಅಸಮಾಧಾನ ಮುಂದುವರೆದಿದ್ದು ಅವರು ಯಾರ ಕೈಗೂ ಸಿಗುತ್ತಿಲ್ಲ ಎನ್ನಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+