ಬಿಸಿ ಬಿಸಿ ಮದ್ದೂರು ವಡೆಯ ಹಿಂದೊಂದು ಸಿಂಪಲ್ ಕಹಾನಿ!

ಹಲವರು ರೈಲು ಪ್ರಯಾಣಕ್ಕೆ ಒಂದು ಅರ್ಥ ನೀಡಿದ್ದೇ ಈ ಮದ್ದೂರು ವಡೆ ಎಂದರೂ ತಪ್ಪಿಲ್ಲ. ಕೈಗೆಟುಕುವ ಬೆಲೆಯ, ರುಚಿ ರುಚಿಯ, ಕ್ರಿಸ್ಪಿ ಮದ್ದೂರು ವಡೆ ಸೃಷ್ಟಿಯಾಗದ್ದರ ಹಿಂದೆ ಒಂದು ತಮಾಷೆಯ ಇತಿಹಾಸವಿದೆ.

ಬೆಂಗಳೂರಿನಿಂದ ಮೈಸೂರಿಗೆ ಅಥವಾ ಮೈಸೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ಮೈಸೂರು ತಲುಪುವ ಮೊದಲು ಏನಿಲ್ಲವೆಂದರೂ ಕನಿಷ್ಠ ನೂರು ಬಾರಿ 'ಮದ್ದೂರ್ ವಡೆ...' ಎಂಬ ಕೂಗು ಕೇಳಿರುತ್ತದೆ. ಆ ಸದ್ದಿನೊಂದಿಗೆ ಘಮ್ಮೆನ್ನುವ ಮದ್ದೂರ್ ವಡೆಯ ಪರಿಮಳ ನಿಮ್ಮ ಮೂಗಿಗೂ ಬಡಿದಿರುತ್ತದೆ. ಬಿಸಿ ಇದ್ರೆ ಕಾಸು... ಇಲ್ಲಾಂದ್ರೆ ಕಾಸು ವಾಪಾಸು ಎನ್ನುವ ತರಹೇವಾರಿ ಟ್ಯೂನಿನ ಧ್ವನಿಯೂ ನಿಮ್ಮಲ್ಲಿ ನಗು ಮೂಡಿಸಿರುತ್ತೆ.

ಹೌದು, ಶತಮಾಗಳನ್ನು ಪೂರೈಸಿದ ಮದ್ದೂರು ವಡೆಯ ಘಮ ಇಂದಿಗೂ ಹಾಗೆಯೇ ಇದೆ. ಹಲವರು ರೈಲು ಪ್ರಯಾಣಕ್ಕೆ ಒಂದು ಅರ್ಥ ನೀಡಿದ್ದೇ ಈ ಮದ್ದೂರು ವಡೆ ಎಂದರೂ ತಪ್ಪಿಲ್ಲ. ಕೈಗೆಟುಕುವ ಬೆಲೆಯ, ರುಚಿ ರುಚಿಯ, ಕ್ರಿಸ್ಪಿ ಮದ್ದೂರು ವಡೆ ಸೃಷ್ಟಿಯಾಗದ್ದರ ಹಿಂದೆ ಒಂದು ತಮಾಷೆಯ ಇತಿಹಾಸವಿದೆ.[ರವಾ ಇಡ್ಲಿಗೂ ವಿಶ್ವಯುದ್ಧಕ್ಕೂ ಎತ್ತಣಿಂದೆತ್ತಣ ಸಂಬಂಧವಯ್ಯ?]

History of Maddur Vada, a very famous recipe in south Karnataka

1881 ರಲ್ಲಿ ಬೆಂಗಳೂರು - ಮಂಗಳೂರು ರೈಲು ಮಾರ್ಗ ಆರಂಭವಾಗುತ್ತಿದ್ದಂತೆಯೇ ಉಡುಪಿ-ಮಂಗಳೂರು ಬೀಜಾಡಿಯ ಆಚಾರ್ಯರೊಬ್ಬರು ರೈಲ್ವೇ ಕ್ಯಾಂಟೀನಲ್ಲಿ ಇಡ್ಲಿ, ಕಾಫಿ, ವಡಾ ಅಂಗಡಿ ಇಟ್ಟಿದ್ದರಂತೆ. ಪ್ರತಿದಿನ ರೈಲಿನಲ್ಲಿ ಓಡಾಡುವ ಪ್ರಯಾಣಿಕರಿಂದಾಗಿ ಕ್ಯಾಂಟೀನಿಗೆ ಸಾಕಷ್ಟು ಬೇಡಿಕೆ ಇತ್ತು. ಹಸಿದು ಬರುವ ಜನರಿಗಾಗಿ ಪ್ರತಿದಿನ ಬೋಂಡಾ, ಇಡ್ಲಿ ಮಾಡಿ ಕಾಯುತ್ತಿದ್ದ ಆಚಾರ್ಯರಿಗೆ ಒಂದು ದಿನ ಇದ್ದಕ್ಕಿದ್ದಂತೆ ತಲೆಬಿಸಿಯಾಯ್ತು.[ಪೇಪರ್ ನಲ್ಲಿ ಬೋಂಡಾ ಕಟ್ಟಿಕೊಟ್ರೆ ತಗೋಬೇಡಿ, ಅದು ವಿಷ!]

ಯಾಕಂದ್ರೆ ಆವತ್ತು ಬೋಂಡಾ ಮಾಡೋದಕ್ಕೆ ಕಡಲೆಹಿಟ್ಟೆಲ್ಲ ಮುಗಿದುಹೋಗಿತ್ತು. ಏನು ಮಾಡಬೇಕೆಂದೇ ತೋಚದ ಆಚಾರ್ಯರು ತಕ್ಷಣ ಕ್ಯಾಂಟೀನಿನಲ್ಲಿದ್ದ ರವೆ, ಹಿಟ್ಟು, ಈರುಳ್ಳಿ, ಮೆಣಸಿನ ಕಾಯಿ ಎಲ್ಲವನ್ನೂ ಮಿಶ್ರಣ ಮಾಡಿ, ಅದನ್ನು ಚಿಕ್ಕ ಚಿಕ್ಕ ಚಪಾತಿಯಾಕಾರದಲ್ಲಿ ತಟ್ಟಿ ಎಣ್ಣೆಯಲ್ಲಿ ಕರಿದರಂತೆ. ಪ್ರಯಾಣಿಕರು ಬಂದು ಬೋಂಡಾ ಕೇಳಲಿದರೆ, ಆಚಾರ್ಯರು ಹೊಸ ರುಚಿ ಅಂತ ಕೊಟ್ಟಿದ್ದು, ಪುಟ್ಟ ತಟ್ಟೆಯಾಕಾರದ ತಿನಿಸು! ಏನಿದು ಎಂದು ಕೇಳಿದವರಿಗೆ ಅವರು ಥಟ್ಟಂತ ಕೊಟ್ಟ ಉತ್ತರ 'ಮದ್ದೂರು ವಡೆ'.[ಡೆಡ್ಲಿ ಕಾಂಬಿನೇಶನ್ ಮತ್ತು ಇಡ್ಲಿ ಕಾಂಬಿನೇಶನ್..]

History of Maddur Vada, a very famous recipe in south Karnataka

ಆ ಕ್ಷಣದಲ್ಲಿ ಹಸಿದು ಬಂದು ಜನರಿಗೋಸ್ಕರ ಆಚಾರ್ಯರು ಸಂಶೋಧಿಸಿದ ಮದ್ದೂರು ವಡೆ, ಇಂದಿನವರೆಗೂ ತನ್ನ ಅದೇ ಚಾರ್ಮ್ ಉಳಿಸಿಕೊಂಡಿದೆ ಎಂದರೆ ಅದಕ್ಕೆ ಕಾರಣ, ವಡೆಯ ವಿಶಿಷ್ಠ ರುಚಿ! ಅಂದು ಆಚಾರ್ಯರ ಬಾಯಲ್ಲಿ ನಾಮಕರಣಗೊಂಡ ಮದ್ದೂರು ವಡೆ ಇಂದು ದೇಶ-ವಿದೇಶಗಳಲ್ಲೂ ಪ್ರಸಿದ್ಧಿ ಪಡೆದಿದೆ.[ಹವ್ಯಕ ಮೆಸ್ ನ ತಂಬುಳಿ, ಪಾಯಸ, ತಿಳಿಸಾರು ಚಂದ, ಊಟ ಬೊಂಬಾಟು]

ಕಡಲೆಬೇಳೆ, ತೆಂಗಿನ ಕಾಯಿ, ಈರುಳ್ಳಿ, ಎಳ್ಳು, ಹಸಿಮೆಣಸಿನಕಾಯಿ, ಚಿರೋಟಿ ರವೆ, ಉಪ್ಪು, ನೀರು ಇವುಗಳ ಸಮ್ಮಿಶ್ರಣ, ಎಣ್ಣೆಯಿರುವ ಬಿಸಿ ಬಾಣಲೆಗೆ ಬಿದ್ದು, ಒಂದೈದು ನಿಮಿಷದ ನಂತರ ಬಂಗಾರದ ಬಣ್ಣದಲ್ಲಿ ಹೊರಬಂದು ಪ್ಲೇಟಿಗೆ ಬಿದ್ದರೆ ಸಾಕು, ನೋಡು ನೋಡುತ್ತಲೇ ಮಾಯ! ಅದು ಮದ್ದೂರು ವಡಾ ಮಹಿಮೆ! ಆ ರುಚಿ ಸವಿದವನೇ ಬಲ್ಲ!

ಇತ್ತೀಚೆಗೆ ಮದ್ದೂರು ವಡೆಯಲ್ಲೇ ಬೇರೆ ಬೇರೆ ಮಾರ್ಪಾಡುಗಳನ್ನು ಮಾಡಲಾಗಿದೆಯಾದರೂ, ಮದ್ದೂರು ವಡೆಗೆ ಮದ್ದೂರು ವಡೆಯೇ ಸಾಕ್ಷಿ ಎಂಬಷ್ಟರ ಮಟ್ಟಿಗೆ ಅದು ಖಾದ್ಯ ಪ್ರಪಂಚದಲ್ಲಿ ಅತ್ಯಮೂಲ್ಯ ಸ್ಥಾನ ಪಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+