ಮಂಡ್ಯ ವಿದ್ಯಾರ್ಥಿನಿ ಮುಸ್ಕಾನ್‌ಗೆ 5 ಲಕ್ಷ ಬಹುಮಾನ ಘೋಷಣೆ

ಮಂಡ್ಯ, ಫೆಬ್ರವರಿ 9: ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದದ ನಡುವೆ ಮಂಡ್ಯದಲ್ಲಿ ಅಲ್ಲಾ ಹು ಅಕ್ಬರ್ ಎಂದು ಹುಡುಗರ ಮುಂದೆ ಕೂಗಿದ ಪಿಇಎಸ್ ಕಾಲೇಜು ವಿದ್ಯಾರ್ಥಿನಿ ಮುಸ್ಕಾನ್ ಖಾನ್‌ಗೆ ಜಮಾತ್ ಉಲೆಮಾ-ಎ-ಹಿಂದ್‌ 5 ಲಕ್ಷ ರೂ. ಬಹುಮಾನ ಘೋಷಿಸಿದೆ.

ಮಂಡ್ಯದ ಪಿಇಎಸ್ ಕಾಲೇಜಿನ ಬಳಿ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಎದುರು ಕೆಲವು ಹುಡುಗರು ಜೈ ಶ್ರೀರಾಮ್ ಎಂಬ ಘೋಷಣೆ ಕೂಗಿದ್ದರು. ಇದಕ್ಕೆ ಪ್ರತಿರೋಧವಾಗಿ ವಿದ್ಯಾರ್ಥಿನಿಯು ಅಲ್ಲಾ ಹು ಅಕ್ಬರ್ ಎಂಬ ಘೋಷಣೆ ಕೂಗಿದ್ದರು.

Recommended Video

      ಅಲ್ಲಾಹು ಅಕ್ಬರ್ ಎಂದು ಕೂಗಿದ ವಿದ್ಯಾರ್ಥಿನಿಗೆ ಜಮಾತ್ ನಿಂದ 5 ಲಕ್ಷ ರೂ. ಬಹುಮಾನ | Oneindia Kannada

      ಮುಸ್ಕಾನ್ ಖಾನ್ ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆಗಿರುವುದರ ಮಧ್ಯೆ ಜಮಾತ್ ಉಲೆಮಾ-ಎ-ಹಿಂದ್‌ ವಿದ್ಯಾರ್ಥಿನಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಟ್ವೀಟ್ ಮಾಡಿದೆ.

      Hijab: Jamiat Ulema-i-Hind announced Rs 5 Lakh Reward to BiBi Muskan Khan of Mandya PES College

      ಮಂಡ್ಯದ ಘಟನೆ ಬಗ್ಗೆ ವಿದ್ಯಾರ್ಥಿನಿ ಹೇಳಿದ್ದೇನು?:

      ಮಂಗಳವಾರ ನಾನು ಎಂದಿನಂತೆ ಕಾಲೇಜಿಗೆ ತೆರಳಿದ್ದೆ. ಈ ವೇಳೆ ಕೆಲವು ಯುವಕ ಗುಂಪು ಜೈ ಶ್ರೀರಾಮ್ ಎಂಬ ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ನಾನು ಅಲ್ಲಾ ಹು ಅಕ್ಬರ್ ಎಂಬ ಘೋಷಣೆ ಕೂಗಿದೆ. ಆದರೆ ನನ್ನನ್ನು ಹಿಂಬಾಲಿಸಿ ಬಂದ ಆ ಗುಂಪಿನಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಶೇ.10ರಷ್ಟಿದ್ದರೆ, ಉಳಿದ ಶೇ.90ರಷ್ಟು ನಮ್ಮ ಕಾಲೇಜಿನವರೇ ಆಗಿರಲಿಲ್ಲ ಎಂದು ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಹೇಳಿದ್ದಾರೆ.

      ನಮ್ಮ ಶಿಕ್ಷಣ ಕಸಿದುಕೊಳ್ಳುವ ಪ್ರಯತ್ನ:

      ಶಿಕ್ಷಣಕ್ಕೆ ನಾವು ಮೊದಲ ಆದ್ಯತೆ ನೀಡುತ್ತೇವೆ, ಆದರೆ ಅವರು ಒಂದು ತುಂಡು ಬಟ್ಟೆ ವಿಚಾರವನ್ನು ಮುಂದಿಟ್ಟುಕೊಂಡು ನಮ್ಮ ಶಿಕ್ಷಣವನ್ನು ಕಸಿದುಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ನಾವು ಯಾವಾಗಲೂ ಕಾಲೇಜಿಗೆ ಬುರ್ಖಾ ಹಾಗೂ ಹಿಜಾಬ್ ಅನ್ನು ಧರಿಸಿಕೊಂಡೇ ಹೋಗುತ್ತಿದ್ದೆವು. ಕಾಲೇಜು ತಲುಪಿದಾಗ ಬುರ್ಖಾ ತೆಗೆದು ಹಿಜಾಬ್ ಮಾತ್ರ ಧರಿಸಿಕೊಂಡು ತರಗತಿಯಲ್ಲಿ ಕುಳಿತುಕೊಳ್ಳುತ್ತಿದ್ದೆವು. ಆಗ ಹಿಜಾಬ್ ಧರಿಸುವುದಕ್ಕೆ ವಿರೋಧ ಇರಲಿಲ್ಲ. ಆದರೆ ಇತ್ತೀಚಿನ ಒಂದು ವಾರದಿಂದ ಹಿಜಾಬ್ ಧರಿಸುವುದಕ್ಕೂ ವಿರೋಧ ವ್ಯಕ್ತವಾಗುತ್ತಿದೆ.

      ಬುರ್ಖಾ ಹಾಕಿಕೊಂಡು ಬರದಂತೆ ಪ್ರಾಂಶುಪಾಲ ಸಲಹೆ:

      ಹಿಜಾಬ್ ನಮ್ಮ ಧರ್ಮದ ಒಂದು ಭಾಗವೇ ಆಗಿದ್ದು, ಕಾಲೇಜಿನ ಪ್ರಾಂಶುಪಾಲರು ಹಿಜಾಬ್ ಧರಿಸುವುದಕ್ಕೆ ಪ್ರತಿರೋಧ ವ್ಯಕ್ತಪಡಿಸಿಲ್ಲ. ಹೊರಗಿನಿಂದ ಬಂದವರು ಹಿಜಾಬ್ ಧರಿಸದಂತೆ ಹೇಳುತ್ತಿದ್ದಾರೆ. ಬುರ್ಖಾ ಹಾಕಿಕೊಂಡು ಬರದಂತೆ ನಮ್ಮ ಪ್ರಾಂಶುಪಾಲರು ಸಲಹೆ ನೀಡಿದ್ದಾರೆ ಎಂದು ಮುಸ್ಕಾನ್ ಖಾನ್ ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+