ಮದ್ದೂರು ಸಂಚಾರಿ ಠಾಣೆ, ಟೌನ್ ಠಾಣೆ, ಸಿಪಿಐ ಕಚೇರಿ ಸೀಲ್ ಡೌನ್
ಮಂಡ್ಯ, ಜೂನ್ 25: ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ಮತ್ತೆ ಕಾಣಿಸಿಕೊಳ್ಳುತ್ತಿವೆ. ಮದ್ದೂರು ಸಂಚಾರಿ ಠಾಣೆಯ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಒಬ್ಬರಿಗೆ ಕೊರೊನಾ ಸೋಂಕು ತಗುಲಿದ್ದು, ಸಂಚಾರಿ ಠಾಣೆ, ಮದ್ದೂರು ಟೌನ್ ಠಾಣೆ ಹಾಗೂ ಮದ್ದೂರು ವೃತ್ತ ಕಚೇರಿಗಳನ್ನು ಸೀಲ್ ಡೌನ್ ಮಾಡಲಾಗಿದೆ.
Recommended Video
Bengaluru Urban Mobility Post Covid 2 | Oneindia Kannada
ಪಟ್ಟಣದ ಟ್ರಾಫಿಕ್ ಠಾಣೆಯ ಪೊಲೀಸ್ ಪೇದೆ ಸೇರಿ 8 ಜನರಿಗೆ ಮದ್ದೂರಿನಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಹೆಡ್ ಕಾನ್ ಸ್ಟೆಬಲ್ ಗೆ ಸೋಂಕಿನ ಸುದ್ದಿ ತಿಳಿದು ಸ್ಥಳಕ್ಕೆ ಎಸ್ಪಿ ಪರಶುರಾಮ್ ಭೇಟಿ ನೀಡಿ ಪರಿಶೀಲಿಸಿದ್ದು, ಠಾಣೆಯನ್ನು ಸೀಲ್ ಡೌನ್ ಮಾಡಿ ಬೇರೆಡೆ ಕರ್ತವ್ಯ ನಿರ್ವಹಿಸಲು ಸೂಚಿಸಿದ್ದಾರೆ.
ಮದ್ದೂರು ಸಂಚಾರಿ ಠಾಣೆ, ಟೌನ್ ಠಾಣೆ ಹಾಗೂ ಮದ್ದೂರು ಸಿಪಿಐ ಕಚೇರಿಗಳು ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ಪೊಲೀಸ್ ವಸತಿ ಗೃಹಗಳಲ್ಲಿ ಕಾರ್ಯ ನಿರ್ವಹಿಸುತ್ತವೆ. ಜೊತೆಗೆ ತುರ್ತು ಸಂದರ್ಭದಲ್ಲಿ ಮಾತ್ರ ಸಾರ್ವಜನಿಕರು ಇಲ್ಲಿಗೆ ಭೇಟಿ ನೀಡುವಂತೆ ಕೋರಲಾಗಿದೆ.

ಸೋಂಕಿತ ಪೇದೆ ಟ್ರಾಫಿಕ್ ಠಾಣೆಯಲ್ಲಿ ನ್ಯಾಯಾಲಯ ಪ್ರಕರಣಗಳ ಉಸ್ತುವಾರಿ ವಹಿಸಿದ್ದರು. ಹೀಗಾಗಿ ನ್ಯಾಯಾಧೀಶರಿಗೂ ಆತಂಕ ಎದುರಾಗಿದೆ. ನ್ಯಾಯಾಧೀಶರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಕಾರಣ ಅವರಿಗೂ 14 ದಿನ ಹೋಂ ಕ್ವಾರೆಂಟೈನ್ಗೆ ಸೂಚನೆ ನೀಡಲಾಗಿದೆ. ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಕೆ.ಸಿ. ಬುಕ್ ಹೌಸ್ ಮಾಲೀಕರಿಗೂ ಸೋಂಕು ಧೃಡವಾಗಿದ್ದು, ಲೀಲಾವತಿ ಬಡಾವಣೆ, ಕೂಳಗೆರೆ, ಹಾಗಲಹಳ್ಳಿಯಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.












Click it and Unblock the Notifications