HD Revanna: ಮಂಡ್ಯದ ಬಹುತೇಕ ಫ್ಲೆಕ್ಸ್‌ಗಳಲ್ಲಿ ಎಚ್‌ಡಿ ರೇವಣ್ಣ ಫೋಟೋ ಮಾಯ: ಅಂತರ ಕಾಯ್ದುಕೊಂಡ ಜೆಡಿಎಸ್..

ಮಂಡ್ಯ ಜೂನ್ 25: ಆರೋಪಗಳ ಸರಮಾಲೆಯನ್ನೇ ಹೊತ್ತಿರುವ ಮಾಜಿ ಸಚಿವ ಎಚ್‌ಡಿ ರೇವಣ್ಣ ಅವರ ಫೋಟೋಗಳು ಮಂಡ್ಯದಲ್ಲಿ ಮಾಯವಾಗಿವೆ. ಬೃಹತ್‌ ಫ್ಲೆಕ್ಸ್‌ಗಳಲ್ಲಿ ಎಚ್‌ಡಿ ರೇವಣ್ಣ ಹಾಗೂ ಅವರ ಕುಟುಂಬಸ್ಥರ ಫೋಟೋ ಹೊರತುಪಡಿಸಿ ಬೇರೆಲ್ಲಾ ನಾಯಕರ ಫೋಟೋಗಳನ್ನು ಹಾಕಲಾಗಿದೆ. ಇದು ಜೆಡಿಎಸ್ ಪಕ್ಷ ಎಚ್‌ಡಿ ರೇವಣ್ಣ ಅವರಿಂದ ಅಂತರ ಕಾಯ್ದುಕೊಂಡಿರುವುದನ್ನು ಎತ್ತಿ ತೋರಿಸುತ್ತದೆ.

ಹೌದು... ಎಚ್‌ಡಿ ಕುಮಾರಸ್ವಾಮಿ ಕೇಂದ್ರ ಸಚಿವರಾದ ಬಳಿಕ ಮಂಡ್ಯದಲ್ಲಿ ದೊಡ್ಡ ದೊಡ್ಡ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ. ಆ ಪ್ಲೆಕ್ಸ್‌ಗಳಲ್ಲಿ ಜೆಡಿಎಸ್‌ ಪಕ್ಷ ಹಾಗೂ ಬಿಜೆಪಿ ನಾಯಕರ ಫೋಟೋಗಳನ್ನು ಒಟ್ಟಿಗೆ ಹಾಕಲಾಗಿದೆ. ಆದರೆ ಆ ಫ್ಲೆಕ್ಸ್‌ಗಳಲ್ಲಿ ಎಲ್ಲೂ ಕೂಡ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಅವರ ಪುತ್ರ ಎಚ್‌ಡಿ ರೇವಣ್ಣ ಅವರ ಫೋಟೋವನ್ನು ಹಾಕಲಾಗಿಲ್ಲ. ಎಚ್‌.ಡಿ ರೇವಣ್ಣ ಹಾಗೂ ಅವರ ಕುಟುಂಬಸ್ಥರ ಯಾವುದೇ ಒಂದು ಫೋಟೋವನ್ನು ಬೃಹತ್ ಫ್ಲೆಕ್ಸ್‌ಗಳಲ್ಲಿ ಕಾಣಿಸುವುದಿಲ್ಲ. ಇದು ಜೆಡಿಎಸ್ ಪಕ್ಷ ಎಚ್‌ಡಿ ರೇವಣ್ಣ ಅವರಿಂದ ಮುಜುಗರಕ್ಕೀಡಾಗಿರುವುದನ್ನು ತೋರಿಸುತ್ತದೆ.

HD Revanna photo is missing in most of Mandya s flexes

ಎಚ್‌ಡಿ ರೇವಣ್ಣ ಅವರನ್ನು ಕೆಲ ದಿನಗಳ ಹಿಂದೆ ಅಪಹರಣ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಅಲ್ಲದೆ ಇದೇ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರನ್ನೂ ಬಂಧಿಸಿ ಸದ್ಯ ಅವರು ಜಾಮೀನು ಪಡೆದು ಹೊರಗಿದ್ದಾರೆ. ಇನ್ನೂ ಇವರ ಪುತ್ರ ಪ್ರಜ್ವಲ್ ರೇವಣ್ಣ ಅವರು ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಅಲ್ಲದೆ ಇವರ ಮತ್ತೋರ್ವ ಪುತ್ರ ಸೂರಜ್ ರೇವಣ್ಣ ಅವರೂ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಐಡಿ ಕಸ್ಟಡಿಯಲ್ಲಿದ್ದಾರೆ.

ಹೀಗೆ ಕುಟುಂಬದ ಎಲ್ಲಾ ಸದಸ್ಯರು ಅತ್ಯಾಚಾರ, ಅಪಹರಣ ಹಾಗೂ ಅತ್ಯಾಚಾರಕ್ಕೆ ಸಹಕಾರ ನೀಡಿದ ಆರೋಪವನ್ನು ಎದುರಿಸುತ್ತಿರುವ ಕಾರಣ ಜೆಡಿಎಸ್‌ ಪಕ್ಷ ಮುಜುಗರಕ್ಕೀಡಾಗಿದೆ. ಇದರಿಂದ ಇವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡದೇ ಇದ್ದರೂ ಅವರಿಂದ ಅಂತರವನ್ನು ಕಾಯ್ದುಕೊಂಡಿದೆ.

HD Revanna photo is missing in most of Mandya s flexes

ಈ ಹಿಂದೆ ಜೆಡಿಎಸ್‌ ಫ್ಲೆಕ್ಸ್‌ಗಳಲ್ಲಿ ಎಚ್‌ಡಿ ರೇವಣ್ಣ ಅವರ ಫೋಟೋಗಳನ್ನು ಕಡ್ಡಾಯವಾಗಿ ಹಾಕಲಾಗುತ್ತಿತ್ತು. ಆದರೆ ಇತ್ತೀಚಿಗೆ ಎಚ್‌ಡಿ ರೇವಣ್ಣ ಅವರ ಮೇಲಿರುವ ಆರೋಪಗಳಿಂದಾಗಿ ಪಕ್ಷಕ್ಕೆ ಡ್ಯಾಮೇಜ್ ಆಗಿದೆ. ಫ್ಲೆಕ್ಸ್‌ಗಳಲ್ಲಿ ಎಚ್‌ಡಿ ದೇವೇಗೌಡ, ಎಚ್‌ಡಿ ಕುಮಾರಸ್ವಾಮಿ, ಯಡಿಯೂರಪ್ಪ, ವಿಜಯೇಂದ್ರ, ಆರ್, ಅಶೋಕ್ ಸೇರಿದಂತೆ ಹಲವು ಬಿಜೆಪಿ ನಾಯಕರ ಫೋಟೋಗಳನ್ನು ಹಾಕಲಾಗಿದೆ. ಅಲ್ಲದೆ ಮಾಜಿ ಸಂಸದೆ ಸುಮಲತಾ, ಮಾಜಿ ಸಚಿವ ಹೆಚ್.ವಿಶ್ವನಾಥ್ ಅವರ ಫೋಟೋಗಳ ಫ್ಲೆಕ್ಸ್‌ಗಳು ಮಂಡ್ಯದ ತುಂಬಾ ರಾಜಾಜಿಸುತ್ತಿವೆ.

ಆದರೆ ಎಚ್‌ಡಿ ರೇವಣ್ಣ ಅವರು ಮಾತ್ರ ಯಾವುದೇ ಪ್ಲೆಕ್ಸ್‌ಗಳಲ್ಲಿ ಕಾಣಿಸುತ್ತಿಲ್ಲ. ಇದರಿಂದ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಪಕ್ಷಗಳು ಎಚ್‌ಡಿ ರೇವಣ್ಣ ಅವರಿಂದ ಅಂತರ ಕಾಯ್ದುಕೊಂಡಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+