• search
 • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಡ್ಯದಲ್ಲಿ ದಿಗ್ಗಜರ ಭಾಷಣದ ಸಾರಾಂಶ ಗ್ರಹಿಸಿದ್ದೇನೆ : ಎಚ್‌ಡಿಕೆ ವ್ಯಂಗ್ಯ

|
   Lok Sabha Elections 2019 : ಮಂಡ್ಯದ ದಿಗ್ಗಜರ ಭಾಷಣ ಕೇಳಿದ ಎಚ್‍ಡಿಕೆ

   ಮಂಡ್ಯ, ಏಪ್ರಿಲ್ 16 : 'ಮಂಡ್ಯದಲ್ಲಿಂದು ಪಕ್ಷೇತರ ಅಭ್ಯರ್ಥಿ ಪರವಾಗಿ ನಡೆದ ಸಮಾವೇಶದ ದಿಗ್ಗಜರ ಭಾಷಣದ ಸಾರಾಂಶವನ್ನು ಗ್ರಹಿಸಿದ್ದೇನೆ' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.

   ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರ ಮಂಗಳವಾರ ಅಂತ್ಯಗೊಂಡಿತು. ಅಂತಿಮ ದಿನ ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ 'ಸ್ವಾಭಿಮಾನಿ ಸಮ್ಮಿಲನ' ಹೆಸರಿನಲ್ಲಿ ಬೃಹತ್ ಸಮಾವೇಶ ನಡೆಸಿದರು.

   ನಿಗಿ ನಿಗಿ ಕೆಂಡವಾದ ಮಂಡ್ಯ ರಣಾಂಗಣದಲ್ಲಿ ಗೆಲ್ಲೋರು ಯಾರು?

   ಸಮಾವೇಶದಲ್ಲಿ ಸುಮಲತಾ, ನಟ ದರ್ಶನ್, ಯಶ್, ಅಂಬರೀಶ್ ಪುತ್ರ ಅಭಿಷೇಕ್ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ವಿರುದ್ಧ ಹಲವು ಆರೋಪಗಳನ್ನು ಮಾಡಿದರು. ಸಂಜೆ ಟ್ವಿಟರ್ ಮೂಲಕ ಕುಮಾರಸ್ವಾಮಿ ಈ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.

   ಮತ ಬೇಡ ಮಂಡ್ಯದ ಸ್ವಾಭಿಮಾನ ಕೊಡಿ: ಸುಮಲತಾ ಭಾವನಾತ್ಮಕ ಭಾಷಣ

   ಸಮಾವೇಶದಲ್ಲಿ ಮಾತನಾಡಿದ್ದ ದರ್ಶನ್, 'ರೈತರ ಕಷ್ಟ ಅವರಿಗೆ ಏನು ಗೊತ್ತು ಎಂದು ಪ್ರಶ್ನೆ ಮಾಡಿದ್ದರು. ನಮ್ಮನ್ನು ಪ್ರಶ್ನೆ ಮಾಡೋರು ಒಂದು ಲೋಟ ಹಾಲು ಕರೆಯಲಿ. ಹಸು ಕರು ಹಾಕಿದ ಹತ್ತು ದಿನ ಯಾವ ಆಹಾರ ಕೊಡಬೇಕು ಎಂಬುದನ್ನು ಹೇಳಲಿ' ಎಂದು ಸವಾಲು ಹಾಕಿದ್ದರು...

   ಮಂಡ್ಯ ಚುನಾವಣಾ ಪುಟ

   ಕುಮಾರಸ್ವಾಮಿ ಟ್ವೀಟ್

   ಮಂಡ್ಯದಲ್ಲಿಂದು ಪಕ್ಷೇತರ ಅಭ್ಯರ್ಥಿ ಪರವಾಗಿ ನಡೆದ ಸಮಾವೇಶದ ದಿಗ್ಗಜರ ಭಾಷಣದ ಸಾರಾಂಶವನ್ನು ಗ್ರಹಿಸಿದ್ದೇನೆ. ನನ್ನ ಬಗ್ಗೆ ಮಾಡಿರುವ ವೈಯಕ್ತಿಕ ಆಪಾದನೆಗಳಿಗೆ ಉತ್ತರ ನೀಡುವ ಶಕ್ತಿ ಮಂಡ್ಯ ಜಿಲ್ಲೆಯ ನನ್ನ ಬಾಂಧವರಿಗಿದೆ ಎಂದು ಟ್ವೀಟ್ ಮಾಡಿದ್ದಾರೆ.

   ಅಂಬರೀಶ್ ಜೊತೆಗಿನ ಸ್ನೇಹ

   ಅದು ರಾಜಕಾರಣದ ವ್ಯಾಪ್ತಿಯನ್ನೂ ಮೀರಿದ ಅಪ್ಪಟ ಗೆಳೆತನ.ಈಸ್ನೇಹಕ್ಕೆ ಅವರ ಕುಟುಂಬ ಸೂಕ್ತಕಾಣಿಕೆ ನೀಡಿದೆ.ಮಂಡ್ಯದ ಮಣ್ಣಿನಮೇಲೆ ನಿಂತು ನಾನು ಮಾತನಾಡುತ್ತಿದ್ದೇನೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

   ಯಶ್ ಹೇಳಿದ್ದೇನು?

   ಯಶ್ ಹೇಳಿದ್ದೇನು?

   ಸಮಾವೇಶದಲ್ಲಿ ಮಾತನಾಡಿದ್ದ ನಟ ಯಶ್, 'ನಾವು ಪ್ರಚಾರಕ್ಕೆ ಬಂದೆವು ಎಂದು ಸಿನಿಮಾದವರನ್ನು ನಂಬಬೇಡಿ ಎಂದು ಹೇಳುತ್ತಾರೆ. ಕೊನೆಗೆ ನಾನು ಕೂಡಾ ಸಿನಿಮಾ ನಿರ್ಮಾಪಕ ಎಂದು ಹೇಳುತ್ತಾರೆ. ಸಿನಿಮಾದವರನ್ನು ನಂಬಬಾರದು ಎಂದರೆ ಇವರನ್ನು ನಂಬಬಾರದು ಎಂದು' ಟಾಂಗ್ ನೀಡಿದ್ದರು.

   ಸುಮಲತಾ ಏನು ಹೇಳಿದ್ದರು?

   ಸುಮಲತಾ ಏನು ಹೇಳಿದ್ದರು?

   ಸಮಾವೇಶದಲ್ಲಿ ಮಾತನಾಡಿದ್ದ ಸುಮಲತಾ ಅವರು, 'ಎದುರಾಳಿಗಳಿಗೆ ಮಹಿಳೆಯರ ಮೇಲೆ ಗೌರವವಿಲ್ಲ. ರೈತರ ಬಗ್ಗೆ ಕಾಳಜಿ ಇಲ್ಲ. ಸೈನಿಕರ ಬಗ್ಗೆ ಗೌರವವಿಲ್ಲ. ಇವರ ಕುಟುಂಬದ ಬಗ್ಗೆ ಮಾತ್ರ ಕಾಳಜಿ ಇದೆ. ನಿಮ್ಮ ಸ್ನೇಹಿತರ ಪತ್ನಿ ಎನ್ನುವುದನ್ನು ಮರೆತು ನನ್ನ ತೇಜೋವಧೆ ಮಾಡಿದರು' ಎಂದು ಬೇಸರ ವ್ಯಕ್ತಪಡಿಸಿದ್ದರು.

   English summary
   In a tweet Karnataka Chief Minister H.D.Kumaraswamy replayed for the allegation made by Sumalatha Ambareesh in a rally of last day of election campaign. Voting will be held on April 18.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X