ಸುಳ್ಳು ದೂರು ದಾಖಲಿಸಿದ ಆರೋಪ: ಮಂಡ್ಯದಲ್ಲಿ ಪಿಎಸ್‌ಐ ಸಸ್ಪೆಂಡ್, ಸಂಪೂರ್ಣ ಘಟನೆ ವಿವರ ಇಲ್ಲಿದೆ

ಮಂಡ್ಯ, ಆಗಸ್ಟ್‌, 01: ಜಿಲ್ಲೆಯೊಳಗೆ ಅಕ್ರಮ ಮರಳು ಗಣಿಗಾರಿಕೆ ಸದ್ದಿಲ್ಲದೆ ನಡೆಯುತ್ತಿರುವ ಬೆನ್ನಲ್ಲೇ ಪೊಲೀಸ್ ಇಲಾಖೆಯೊಳಗೆ ಹೈಡ್ರಾಮಾವೊಂದು ನಡೆದಿರುವ ಸಂಗತಿ ಬೆಳಕಿಗೆ ಬಂದಿದೆ.

ನಗರದ ಅಗ್ನಿಶಾಮಕ ಠಾಣೆ ಎದುರು ಅಕ್ರಮವಾಗಿ ಮರಳನ್ನು ಸಾಗಿಸುತ್ತಿದ್ದ ಲಾರಿಯೊಂದನ್ನು ತಡೆಹಿಡಿದ ಮಂಡ್ಯ ಪೂರ್ವ ಠಾಣೆ ಪಿಎಸ್‌ಐ ಆರ್‌.ಮಂಜುನಾಥ್ ಮೇಲೆ ಮರಳು ದಂಧೆಕೋರರು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆಂದು ಸ್ವತಃ ಪಿಎಸ್‌ಐ ಅವರೇ ದೂರು ನೀಡಿ ಎಫ್‌ಐಆರ್ ದಾಖಲಿಸಿದ್ದಾರೆ.

False complaint registers Allegation: PSI suspended in Mandya

ಆದರೆ, ದೂರಿನಲ್ಲಿರುವಂತೆ ಪಿಎಸ್‌ಐ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆದಿದ್ದರೆ ದೊಡ್ಡ ಪ್ರಮಾಣದ ಗಾಯಗಳಾಗಬೇಕಿತ್ತು. ಯಾವುದೇ ಗಾಯದ ಗುರುತು ಕಂಡುಬರದ ಹಿನ್ನೆಲೆಯಲ್ಲಿ ಸುಳ್ಳು ದೂರು ನೀಡಿದ ಆರೋಪದ ಮೇಲೆ ಪಿಎಸ್‌ಐ ಆರ್‌.ಮಂಜುನಾಥ್ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ಆದೇಶ ಹೊರಡಿಸಿದ್ದಾರೆ.

ಘಟನೆ ಹಿನ್ನೆಲೆ ಏನು?

ಮಂಡ್ಯ ಪೂರ್ವ ಪೊಲೀಸ್ ಠಾಣೆಯ ಪಿಎಸ್‌ಐ ಆರ್‌.ಮಂಜುನಾಥ್ ಅವರು ಜುಲೈ 28ರಂದು ರಾತ್ರಿ 9:30ರ ಸಮಯದಲ್ಲಿ ಜೀಪ್ ಚಾಲಕ ನಾಗರಾಜು ಜೊತೆ ಗುತ್ತಲು ರಸ್ತೆಯಲ್ಲಿ ಗಸ್ತಿನಲ್ಲಿದ್ದರು. ಇದೇ ವೇಳೆ ಮದ್ದೂರು ಕಡೆಯಿಂದ ಮಂಡ್ಯ ನಗರಕ್ಕೆ ಹೆದ್ದಾರಿ ರಸ್ತೆಯಲ್ಲಿ ಒಂದು ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿರುವ ಬಗ್ಗೆ ಬಾತ್ಮೀದಾರರಿಂದ ಮಾಹಿತಿ ಬಂದಿದೆ. ಈ ಮಾಹಿತಿಯನ್ನು ಆಧರಿಸಿ ರಾತ್ರಿ 9:50ಕ್ಕೆ ಅಗ್ನಿಶಾಮಕ ಠಾಣೆ ಎದುರು ಮದ್ದೂರು ಕಡೆಯಿಂದ ಒಂದು ಟಿಪ್ಪರ್ ಲಾರಿ ಬರುತ್ತಿದ್ದು, ಅನುಮಾನಗೊಂಡ ಪಿಎಸ್‌ಐ ಲಾರಿಯನ್ನು ತಡೆಹಿಡಿದು ನಿಲ್ಲಿಸಿದ್ದಾರೆ.

ಲಾರಿಯಲ್ಲಿ ಸಾಗಿಸುತ್ತಿರುವ ಸರಕಿನ ಬಗ್ಗೆ ಚಾಲಕನನ್ನು ವಿಚಾರಿಸಸುತ್ತಿದ್ದಾಗ, ಲಾರಿ ಚಾಲಕ ಮತ್ತು ಆತನ ಜೊತೆಯಲ್ಲಿದ್ದ ಇನ್ನೂ 3 ಜನರು ಕೆಳಗಿಳಿದು ಬಂದು ನನಗೆ ತಳ್ಳಾಡಲು ಶುರು ಮಾಡಿದರು. ಅದರಲ್ಲಿ ಒಬ್ಬ ವ್ಯಕ್ತಿ ತನ್ನ ಬಳಿ ಇದ್ದ ಒಂದು ಕಬ್ಬಿಣದ ರಾಡ್‌ನಿಂದ ನನ್ನ ಬೆನ್ನಿನ ಮೇಲೆ ಹಲ್ಲೆ ಮಾಡಿದನು. ನಾನು ಆತನನ್ನು ಹಿಡಿಯಲು ಹೋದಾಗ ಮತ್ತೆ ಕಬ್ಬಿಣದ ರಾಡ್‌ನಿಂದ ನನ್ನ ಎಡ ತೋಳಿನ ಮೇಲೂ ಸಹ ಹಲ್ಲೆ ನಡೆಸಿದನು.

ಅಷ್ಟರಲಲ್ಲಿ ಜೀಪ್ ಚಾಲಕ ನಾಗರಾಜು ಸ್ಥಳಕ್ಕೆ ಓಡಿಬರುತ್ತಿದ್ದಂತೆ ಗುಂಪಿನಲ್ಲಿದ್ದವರು ಅರ್ಜುನ್ ಓಡು, ಓಡು ಎಂದು ಹೇಳಿ ಎಲ್ಲರೂ ಲಾರಿಯನ್ನು ಅಲ್ಲೇ ಬಿಟ್ಟು ಓಡಿಹೋಗಿದ್ದಾರೆ. ಆ ಸಮಯದಲ್ಲಿ ಹಲ್ಲೆ ನಡೆಸಿದ ವ್ಯಕ್ತಿ ಅರ್ಜುನ್ ಎಂದು ತಿಳಿದುಬಂದಿತು ಎಂದು ಪಿಎಸ್‌ಐ ದೂರಿನಲ್ಲಿ ತಿಳಿಸಿದ್ದರು.

ಟಿಪ್ಪರ್ ಲಾರಿ (ಕೆಎ-19 ಎಬಿ-3736) ಬಾಡಿ ಮಟ್ಟಕ್ಕೆ ಮರಳು ತುಂಬಿದ್ದು, ಲಾರಿ ಚಾಲಕ ಮತ್ತು ಆತನ ಜೊತೆಯಲ್ಲಿದ್ದ ಮೂವರು ವ್ಯಕ್ತಿಗಳು ಎಲ್ಲಿಂದಲೋ ಮರಳನ್ನು ಕದ್ದುಕೊಂಡು ಬಂದು ನಗರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಮರಳು ಸಾಗಿಸುತ್ತಿರುವುದಾಗಿ ಕಂಡುಬಂದಿದೆ ಎಂದು ಉಲ್ಲೇಖಿಸಿದ್ದಾರೆ. ಮರಳು ತುಂಬಿದ್ದ ಲಾರಿಯನ್ನು ವಶಪಡಿಸಿಕೊಂಡು ಠಾಣೆಯ ಮುಂದೆ ನಿಲ್ಲಿಸಿ ಜೀಪ್ ಚಾಲಕ ನಾಗರಾಜು ಅವರೊಂದಿಗೆ ಜಿಲ್ಲಾ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿರುವುದಾಗಿ ಪಿಎಸ್‌ಐ ತಿಳಿಸಿದ್ದರು.

ಪಿಎಸ್‌ಐ ನೀಡಿದ ದೂರನ್ನು ದಾಖಲಿಸಿಕೊಂಡು ಆರೋಪಿಗಳಾದ ಅರ್ಜುನ್ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್ 379, 353, 324, 332, 34ರ ಪ್ರಕಾರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಪಿಎಸ್‌ಐ ಸುಳ್ಳು ದೂರು ನೀಡಿದ್ದಾರಾ?

ಅಕ್ರಮ ಮರಳು ಸಾಗಣೆ ಕುರಿತಂತೆ ಪೂರ್ವ ಪೊಲೀಸ್ ಠಾಣೆ ಪಿಎಸ್‌ಐ ಆರ್‌.ಮಂಜುನಾಥ್ ಸುಳ್ಳು ದೂರು ನೀಡಿದರಾ ಅಥವಾ ಅಕ್ರಮ ಮರಳು ಗಣಿಗಾರಿಕೆ, ಸಾಗಣೆಯನ್ನು ಮುಚ್ಚಿಡುವುದಕ್ಕೆ ಪೊಲೀಸ್ ಇಲಾಖೆಯೊಳಗೆ ಷಡ್ಯಂತ್ರಗಳು ನಡೆಯುತ್ತಿವೆಯೇ? ಇದರ ಹಿಂದೆ ಪೊಲೀಸ್ ಹಿರಿಯ ಅಧಿಕಾರಿಗಳು ಶಾಮೀಲಾಗಿದ್ದಾರೆಯೇ? ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಅನುಮಾನಗಳು ಮೂಡಲಾರಂಭಿಸಿವೆ.

ಪಿಎಸ್‌ಐ ಆರ್‌.ಮಂಜುನಾಥ್ ಯಾವ ನಿರ್ಧಿಷ್ಟ ಕಾರಣವನ್ನಿಟ್ಟುಕೊಂಡು ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ತಡೆಹಿಡಿದರು? ಹಾಗೂ ದಂಧೆಕೋರರು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆಂದು ದೂರಿನಲ್ಲಿ ದಾಖಲಿಸಿದ್ದೇಕೆ? ಈ ಪ್ರಕರಣವನ್ನು ಹಿರಿಯ ಅಧಿಕಾರಿಗಳ ಗಮನಕ್ಕೂ ತರದೆ ಆತುರಾತುರವಾಗಿ ಎಫ್‌ಐಆರ್ ಮಾಡಿದ್ದೇಕೆ? ಎಂಬ ಪ್ರಶ್ನೆಗಳಿಗೆ ಉತ್ತರವೇ ದೊರಕದಂತಾಗಿದೆ.

ಪ್ರಕರಣ ಸಂಬಂಧ ಉತ್ತರ ನೀಡುವುದಕ್ಕೆ ಪೊಲೀಸ್ ಇಲಾಖೆಯೊಳಗಿರುವವರೇ ತಡವರಿಸುತ್ತಿರುವುದನ್ನು ನೋಡಿದರೆ ಅಕ್ರಮ ಮರಳು ಗಣಿಗಾರಿಕೆ, ಸಾಗಣೆ ಹಿಂದೆ ಏನೋ ಮರ್ಮ ಅಡಗಿರುವಂತೆ ಕಂಡುಬರುತ್ತಿದೆ. ಅದನ್ನು ಮುಚ್ಚಿಡಲು ಈ ಹೈಡ್ರಾಮಾ ನಡೆಸಲಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ನಿದ್ರಾವಸ್ಥೆಯಲ್ಲಿ ಟಾಸ್ಕ್‌ಫೋರ್ಸ್

ರಾತ್ರಿ ಸಮಯದಲ್ಲೇ ಅಕ್ರಮವಾಗಿ ಮರಳು ತುಂಬಿದ ಲಾರಿಗಳು ರಾಜಾರೋಷವಾಗಿ ನಗರದ ಮೂಲಕ ಹೊರಜಿಲ್ಲೆಗಳಿಗೆ ಸಾಗಿಸುತ್ತಿವೆ ಎಂಬ ಮಾಹಿತಿ ಇದೆ. ಅಕ್ರಮ ಮರಳು ಗಣಿಗಾರಿಕೆ ನಡೆಸುವ ಅಡ್ಡೆಗಳು, ಸಾಗಣೆ ಮಾಡುವ ಲಾರಿಗಳ ಮೇಲೆ ಹದ್ದಿನ ಕಣ್ಣಿಡಬೇಕಿರುವ ಟಾಸ್ಕ್‌ಫೋರ್ಸ್ ನಿದ್ರಾವಸ್ಥೆಯಲ್ಲಿರುವುದು ಹೊಸದೇನಲ್ಲ. ಟಾಸ್ಕ್‌ಫೋರ್ಸ್‌ನಿಂದ ಅಕ್ರಮ ಮರಳು ಗಣಿಗಾರಿಕೆ ಅಡ್ಡೆಗಳ ಮೇಲೆ ದೊಡ್ಡ ಮಟ್ಟದ ದಾಳಿ ನಡೆಸಿ ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣಕ್ಕೆ ಕಡಿವಾಣ ಹಾಕಿದ ನಿದರ್ಶನಗಳೂ ಇಲ್ಲ.

ಅಕ್ರಮ ಮರಳು ಸಾಗಣೆ ಪ್ರಕರಣ ಸಂಬಂಧ ಪಿಎಸ್‌ಐ ನೀಡಿರುವ ದೂರಿನಲ್ಲಿ ಹುರುಳಿಲ್ಲ. ಆರೋಪಿಗಳು ಕಬ್ಬಿಣದ ರಾಡ್‌ನಿಂದ ಬೆನ್ನು ಮತ್ತು ಕೈ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದು, ಹಲ್ಲೆ ಸಂಬಂಧ ದೊಡ್ಡ ಪ್ರಮಾಣದ ಗಾಯಗಳಾಗಿಲ್ಲ. ಅಲ್ಲದೆ, ಪ್ರಕರಣ ಕುರಿತಂತೆ ನನ್ನ ಅಥವಾ ಡಿವೈಎಸ್‌ಪಿ ಗಮನಕ್ಕೂ ತಾರದೆ ಎಫ್‌ಐಆರ್ ದಾಖಲಿಸಿದ್ದಾರೆ. ಇದರ ಬಗ್ಗೆ ಕೂಲಂಕುಶ ತನಿಖೆ ನಡೆಸಿ ಡಿವೈಎಸ್ಪಿ ವರದಿ ಸಲ್ಲಿಸಿದರ ಮೇರೆಗೆ ಸುಳ್ಳು ದೂರು ಎಂದು ಕಂಡುಬಂದ ಹಿನ್ನೆಲೆಯಲ್ಲಿ ಪಿಎಸ್‌ಐ ಆರ್‌.ಮಂಜುನಾಥ್ ಅವರನ್ನು ಅಮಾನತುಗೊಳಿಸಿದ್ದೇನೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎನ್.ಯತೀಶ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+