ಚುನಾವಣೆ ರಾಜಕೀಯದಿಂದ ನಿವೃತ್ತಿ ಘೋಷಿಸಿದ ಅಂಬರೀಷ್

ಮಂಡ್ಯ, ಏಪ್ರಿಲ್ 24: 'ನನಗೆ ಆರೋಗ್ಯ ಚೆನ್ನಾಗಿಲ್ಲ, ನಾನು ಯಾವುದೇ ಚುನಾವಣೆಗೆ ನಿಲ್ಲೋದಿಲ್ಲ' ಎಂದು ಚುನಾವಣೆ ರಾಜಕೀಯದಿಂದ ನಟ ಅಂಬರೀಷ್ ನಿವೃತ್ತಿ ಘೋಷಿಸಿದ್ದಾರೆ.

ನನಗೆ ಬೇಸರವಾಗಿಲ್ಲ, ಅಂಬರೀಶ್ ಗೆ ಬೇಸರವಾಗೋದಿಲ್ಲ, ನನ್ನ ಆರೋಗ್ಯ ಚೆನ್ನಾಗಿಲ್ಲ, ಪ್ರಚಾರಕ್ಕಾಗಿ ಹೋಗೋದಿಲ್ಲ ಎಂದಿದ್ದಾರೆ.

Elections 2018 : MH Ambareesh hints at retirement from Election politics

ಅಂಬರೀಶ್ ಹೆಸರಿನಲ್ಲೇ ರೆಬೆಲ್ ಇದೆ. ನಾನು ಯಾರ ಬಳಿ ನೆರವು ಕೋರಿ ಹೋಗಿಲ್ಲ. ನಾನು ಜಿ ಪರಮೇಶ್ವರ್ ಮನೆಗೆ ಟಿಕೆಟ್ ಕೇಳೋಕೆ ಹೋಗಿದ್ದೆ ಎಂದು ಸುಳ್ಳು ಸುಳ್ಳು ಬರೆದಿದ್ದೀರಾ ಎಂದು ಪ್ರೀತಿಯಿಂದ ಗದರಿಸಿದರು.

ಅಂಬರೀಷ್ ಸುದ್ದಿಗೋಷ್ಠಿ ಮುಖ್ಯಾಂಶಗಳು:

* ಮೂರು ಪಕ್ಷದವರು ಕರೆದಿದ್ದರು. ಆದರೆ, ನಾನು ಯಾವ ಪಕ್ಷಕ್ಕೂ ಹೋಗೋ ಮನಸ್ಸಿಲ್ಲ. ನಾನು ಯಾರ ಹೆಸರನ್ನು ಸೂಚಿಸಿಲ್ಲ.
* ನಾನೇನು ಟಿಕೆಟ್ ಕೇಳಿಕೊಂಡು ಹೋಗಿಲ್ಲ. ಈಗ ಯಾರಾದ್ರೂ ನಿಂತು ಗೆಲ್ಲಲಿ, ನನಗೆ ಓಡಾಡಲು ಆಗುತ್ತಿಲ್ಲ. ಹೀಗಾಗಿ, ಯಾರ ಪರ ಪ್ರಚಾರ ಮಾಡೋಕೆ ಹೋಗಲ್ಲ.
* ಮಂಡ್ಯದ ಗಂಡು ಎನ್ನುತ್ತಾರೆ. ಮಂಡ್ಯ ಬಿಟ್ಟರೆ ನಾನು ಷಂಡ ಆಗುತ್ತಿದ್ದೆ.
* ಅನ್ನ ಭಾಗ್ಯ, ಕ್ಷೀರ ಭಾಗ್ಯ ಜನರಿಗೆ ತಲುಪುವಂತೆ ಮಾಡಬೇಕು. ಇಲ್ಲದಿದ್ದರೆ ಪ್ರಯೋಜನವಿಲ್ಲ.
* ಅಂಬರೀಷ್ ಹೆಸರಿನಲ್ಲೇ ಮಂಡ್ಯ ಎಂಎಲ್ಎ ಸ್ಥಾನವಿದೆ.
* ಎಲ್ಲಿ ಬೇಕಾದರೂ ನಿಲ್ಲಬಹುದಿತ್ತು. ಎಲ್ಲಾ ಜಾತಿ, ಜನರ ಅನ್ನ ತಿಂದಿದ್ದೇನೆ.
* ಮಂಡ್ಯದಲ್ಲಿ ನಾನಿಲ್ಲ ಎಂದ್ರೆ ಬೇರೆಯವರು ಬೆಳೆಯುತ್ತಾರೆ. ಚುನಾವಣೆ ಎಂದರೆ ಇವತ್ತು ಬಂದು ನಾಳೆ ಚುನಾವಣೆಗೆ ನಿಲ್ಲಿ ಎಂದರೆ ಆಗುತ್ತಾ?

* ಸಿದ್ದರಾಮಯ್ಯ ಅವರು ಸಂಕಷ್ಟದಲ್ಲಿದ್ದಾರೆ. ಈ ಹಿಂದೆ ಅವರನ್ನು ಗೆಲ್ಲಿಸಿಕೊಟ್ಟಿದ್ದೀರಿ. ಈಗ ಕರೆದರೆ ಪ್ರಚಾರಕ್ಕೆ ಹೋಗುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿ 'ನಾನು ಎಲ್ಲೂ ಹೋಗಲ್ಲ, ಯಾರು ಕರೆದರೂ ಹೋಗಲ್ಲ' ಎಂದರು.

ಸರಿ ಆಯ್ತು ಪ್ರೆಸ್ ಮೀಟ್ ಹೊರಡಿ ಎಂದರು. ಕೆಮರಾ ತರಬೇಡಿ, ದಿನ ಬನ್ನಿ ಊಟ ಮಾಡಿ ಹೋಗಿ ಬನ್ನಿ.. ನೋಡೋಣ ಅದೇನು ಬರ್ತದೋ, ರಿವರ್ಸ್ ಬರಿತೀರಾ ಅಂತಾ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+