ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣಾ ಚಿಹ್ನೆ: ಸುಮಲತಾ ಕೇಳಿದ್ದಾವುದು, ಆಯೋಗ ಕೊಟ್ಟಿದ್ದು ಯಾವುದು?

|
Google Oneindia Kannada News

Recommended Video

Lok Sabha Elections 2019 : ಚುನಾವಣಾ ಚಿಹ್ನೆ: ಸುಮಲತಾ ಕೇಳಿದ್ದಾವುದು, ಆಯೋಗ ಕೊಟ್ಟಿದ್ದು ಯಾವುದು?

ಮಂಡ್ಯ, ಮಾರ್ಚ್ 29: ಮಂಡ್ಯದ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಅವರಿಗೆ ಇಂದು ಚುನಾವಣಾ ಆಯೋಗವು ಚುನಾವಣಾ ಚಿಹ್ನೆ ನೀಡಿದೆ.

ಸುಮಲತಾ ಅವರು ಎತ್ತುಗಳನ್ನು ಹಿಡಿದಿರುವ ರೈತ, ಕಬ್ಬನ ತೋಟ, ಕಹಳೆ ಊದುತ್ತಿರುವ ರೈತನ ಚಿಹ್ನೆಯನ್ನು ಕೊಡಿರೆಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಮೊದಲಿಗೆ ಅವರಿಗೆ ತಳ್ಳುವ ಗಾಡಿಯ ಗುರುತು ನೀಡಲಾಗಿತ್ತು, ಆ ನಂತರ ಅದು ಬದಲಾಗಿ ಕಹಳೆ ಊದುವ ವ್ಯಕ್ತಿಯ ಗುರುತು ದೊರೆಯಿತು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಲಕ್ಕಿ ಡ್ರಾ ಮೂಲಕ ಚಿಹ್ನೆಯನ್ನು ಆಯ್ಕೆ ಮಾಡಲಾಯಿತು, ಸುಮಲತಾ ಪಾಲಿಗೆ ತಳ್ಳುವ ಗಾಡಿಯ ಗುರುತು ಸಿಕ್ಕಿತು. ಅಂತಿಮವಾಗಿ ಕಹಳೆ ಊದುವ ವ್ಯಕ್ತಿಯ ಚಿಹ್ನೆ ಯಾರಿಗೂ ಸಿಗದೇ ಇದ್ದಾಗ ಅದನ್ನು ಸುಮಲತಾ ಅವರ ಬೇಡಿಕೆಯಂತೆ ಅವರಿಗೆ ನೀಡಲಾಯಿತು.

Election commission gives hand cart as election symbol for Sumalatha Ambareesh

ಸುಮಲತಾ ಅವರು ಬೇಡಿಕೆ ಇಟ್ಟಿದ್ದ ಚಿಹ್ನೆಯೇ ಅವರಿಗೆ ದೊರೆತಿದೆ. ಜೆಡಿಎಸ್ ನ ತೆನೆ ಹೊತ್ತ ರೈತ ಮಹಿಳೆಗೆ ಎದುರಾಗಿ ರೈತನನ್ನು ಬಿಂಬಿಸುವ ಚಿಹ್ನೆಗಳನ್ನೇ ಅವರು ಕೇಳಿದ್ದರು. ತಲೆಗೆ ಪೇಟ ಕಟ್ಟಿಕೊಂಡು ಕಹಳೆ ಊದುತ್ತಿರುವ ವ್ಯಕ್ತಿ ಸುಮಲತಾ ಅವರ ಚುನಾವಣಾ ಗುರುತಾಗಿದೆ.

ಐಟಿ ದಾಳಿ ಬಗ್ಗೆ ವದಂತಿ ಬಲೂನಿಗೆ ಸೂಜಿ ಚುಚ್ಚಿದ ಅಂಬಿ ಮಗ! ಐಟಿ ದಾಳಿ ಬಗ್ಗೆ ವದಂತಿ ಬಲೂನಿಗೆ ಸೂಜಿ ಚುಚ್ಚಿದ ಅಂಬಿ ಮಗ!

ನಿಖಿಲ್ ನಾಮಪತ್ರ ಅಸಿಂಧುಗೊಳಿಸಲು ಚುನಾವಣಾ ಆಯೋಗಕ್ಕೆ ಮನವಿನಿಖಿಲ್ ನಾಮಪತ್ರ ಅಸಿಂಧುಗೊಳಿಸಲು ಚುನಾವಣಾ ಆಯೋಗಕ್ಕೆ ಮನವಿ

ಮಂಡ್ಯ ಅಖಾಡದಲ್ಲಿ 22 ಅಭ್ಯರ್ಥಿಗಳು

ಮಂಡ್ಯ ಅಖಾಡದಲ್ಲಿ 22 ಅಭ್ಯರ್ಥಿಗಳು

ಮಂಡ್ಯ ಚುನಾವಣಾ ಕಣದಲ್ಲಿ 22 ಮಂದಿ ಅಭ್ಯರ್ಥಿಗಳು ಇದ್ದಾರೆ. ಇದರಲ್ಲಿ ಬಹುತೇಕರು ಪಕ್ಷೇತರ ಅಭ್ಯರ್ಥಿಗಳು, ಸುಮಲತಾ ಹೆಸರಿನ ಇನ್ನೂ ಇಬ್ಬರು ಮಹಿಳೆಯರು ಕಣದಲ್ಲಿದ್ದಾರೆ.

ಬಿ-ಫಾರಂ ಪಡೆದವರ ಹೆಸರು ಮೇಲೆ

ಬಿ-ಫಾರಂ ಪಡೆದವರ ಹೆಸರು ಮೇಲೆ

ಪಕ್ಷದ ಬಿ-ಫಾರಂ ಪಡೆದಿರುವ ಅಭ್ಯರ್ಥಿಗಳ ಹೆಸರು ಮತ್ತು ಚಿತ್ರಗಳು ಮತದಾನದ ಇವಿಎಂ ಮಷೀನ್‌ನಲ್ಲಿ ಮೇಲೆ ಹಾಕಲಾಗುತ್ತದೆ, ಆ ನಂತರ ಅಲ್ಫಾಬೆಟಿಕ್ ಆಧಾರದಲ್ಲಿ ಪಕ್ಷೇತರ ಅಭ್ಯರ್ಥಿಯ ಹೆಸರು ಹಾಕಲಾಗುತ್ತದೆ.

ಇವಿಎಂನಲ್ಲಿ ಅಭ್ಯರ್ಥಿ ಚಿತ್ರ ಇರಲಿದೆ

ಇವಿಎಂನಲ್ಲಿ ಅಭ್ಯರ್ಥಿ ಚಿತ್ರ ಇರಲಿದೆ

ಚುನಾವಣಾ ಚಿಹ್ನೆ ಅವರ ಆಯ್ಕೆಯದ್ದು ಸಿಗದಿದ್ದರೂ ಸಹ ಈಗ ಸಿಕ್ಕಿರುವ ಚಿಹ್ನೆಯ ಮೂಲಕ, ನಾಳೆಯಿಂದ ಚುನಾವಣಾ ಸಹಿತ ಕರಪತ್ರಗಳ ಮೂಲಕ ಸುಮಲತಾ ಅವರು ಪ್ರಚಾರ ಮಾಡುವವರಿದ್ದಾರೆ. ಇವಿಎಂನಲ್ಲಿ ಹೆಸರು, ಚಿಹ್ನೆಯ ಜೊತೆಗೆ ಅಭ್ಯರ್ಥಿಯ ಚಿತ್ರ ಸಹ ಇರುವ ಕಾರಣ ಸುಮಲತಾ ಅವರು ಹೆಚ್ಚಿನ ಆತಂಕಪಡುವ ಹಾಗಿಲ್ಲ.

ನಿಖಿಲ್-ಸುಮಲತಾ ನಡುವೆ ಭರ್ಜರಿ ಪೈಪೋಟಿ

ನಿಖಿಲ್-ಸುಮಲತಾ ನಡುವೆ ಭರ್ಜರಿ ಪೈಪೋಟಿ

ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ಅಂಬರೀಶ್ ನಡುವೆ ಮಂಡ್ಯದ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಪೈಪೋಟಿ ಎದುರಾಗಿದೆ. ಇಬ್ಬರೂ ಶಕ್ತಿಮೀರಿ ಚುನಾವಣಾ ಪ್ರಚಾರ ಮಾಡುತ್ತಿದ್ದು, ಮತದಾನವು ಏಪ್ರಿಲ್ 18 ರಂದು ನಡೆಯಲಿದೆ.

English summary
Election commission gives election symbol for Sumalatha Ambareesh, She is contesting from Mandya lok sabha constituency against CM's son Nikhil Kumaraswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X