ಮಂಡ್ಯದಲ್ಲಿ ಭೂಮಿ ಕಂಪಿಸಿದ ಅನುಭವ, ಆತಂಕದಲ್ಲಿ ಜನತೆ

ಮಂಡ್ಯ, ನವೆಂಬರ್ 29: ಭೂಮಿ ಕಂಪಸಿದ ಅನುಭವವಾಗಿ ಜನರು ಆತಂಕಗೊಂಡು ಎಲ್ಲರೂ ಮನೆಯಿಂದ ಓಡಿಬಂದಿರುವ ಘಟನೆ ಮಂಡ್ಯದಲ್ಲಿ ಗುರುವಾರ ನಡೆದಿದೆ.

ಗುರುವಾರ ಮಧ್ಯಾಹ್ನ 3.45ರ ಸುಮಾರಿಗೆ ಭಾರಿ ಶಬ್ದ ಕೇಳಿಬಂದಿದ್ದು, ಜನರು ಮನೆಯಿಂದ ತಕ್ಷಣವೇ ಓಡಿಬಂದಿದ್ದಾರೆ, ಕೇವಲ ಐದು ಸೆಕೆಂಡುಗಳ ಕಾಲ ಶಬ್ದ ಕೇಳಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಂಡ್ಯ, ಕೆಆರ್ ಪೇಟೆ, ಪಾಂಡವಪುರ ಭಾಗಗಳಲ್ಲಿ ಈ ಭೂಮಿ ಕಂಪಿಸಿದ ಅನುಭವವಾಗಿದೆ. ಆ ಶಬ್ದೆಲ್ಲಿಂದ ಬಂತು ಎಂದು ಅಧಿಕಾರಿಗಳು ಪತ್ತೆ ಹಚ್ಚಬೇಕಿದೆ. ಮನೆಯಲ್ಲಿ ಇಟ್ಟಿದ್ದ ಮೊಬೈಲ್, ಪಾತ್ರೆಗಳು ಎಲ್ಲವೂ ಕಂಪಿಸಿವೆ ಎಂದು ತಿಳಿದುಬಂದಿದೆ.

Earth quake in various parts of Mandya district

ಕೆಲವು ತಿಂಗಳುಗಳ ಹಿಂದೆ ಕೆಆರ್‌ಎಸ್ ನಲ್ಲಿಯೂ ಇಂತಹದ್ದೇ ಶಬ್ದ ಕೇಳಿ ಬಂದಿದ್ದು, ಆತಂಕ ಸೃಷ್ಟಿ ಮಾಡಿತ್ತು, ಬಳಿಕ ಅಲ್ಲಿಯೇ ಇರುವ ಭೂಮಾಪನ ಕೇಂದ್ರದ ಅಧಿಕಾರಿಗಳು ಪರಿಶೀಲನೆ ನಡೆಸಿ ಬಳಿಕ ಇದು ಭೂಕಂಪವಲ್ಲ ಬದಲಾಗಿ ಸುತ್ತಮುತ್ತಲು ನಡೆಯುತ್ತಿರುವ ಗಣಿಗಾರಿಕೆ ನಡೆಯುತ್ತಿರುವ ಪ್ರದೇಶದಲ್ಲಿ ನಿಷೇಧಿತ ವಸ್ತುಗಳನ್ನು ಬಳಕೆ ಮಾಡಿ ಸ್ಫೋಟ ಮಾಡಿದ್ದಾರೆ ಎಂದು ಅಧಿಕಾರಿಗಳು ವರದಿ ನೀಡಿದ್ದರು. ಇದೀಗ ಕೆಆರ್‌ಎಸ್ ಭಾಗದಲ್ಲಿ ಇಂತಹ ಯಾವುದೇ ಶಬ್ದ ಕೇಳಿಸಿಲ್ಲವಾದರೂ ಆ ಶಬ್ದಕ್ಕೂ ಇದಕ್ಕೂ ಸಾಮ್ಯತೆ ಇದೆ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+