ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಟ್ಟೆ ಕಿಚ್ಚಿನಿಂದ ಸಂಸದರನ್ನೇ ತಪ್ಪಿಗೆ ಗುರಿಪಡಿಸುವುದು ಸರಿಯಲ್ಲ: ಮಂಡ್ಯದಲ್ಲಿ ಸುಮಲತಾ ಆಕ್ರೋಶ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ನವೆಂಬರ್‌, 18: ನರೇಗಾ ಎಂದರೆ ಏನು ಎಂಬುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಅದರಲ್ಲಿ ಯಾವ ಕೆಲಸಗಳಿವೆ ಎನ್ನುವುದು ಜನಸಾಮಾನ್ಯರಿಗೆ ಗೊತ್ತಿಲ್ಲ. ಕೆಲವರು ಹೊಟ್ಟೆಕಿಚ್ಚಿನಿಂದ ಸಂಸದರನ್ನೇ ಅಪರಾಧಗಳಿಗೆ ಗುರಿ ಮಾಡುವುದು ಸರಿಯಲ್ಲ ಎಂದು ಸಂಸದೆ ಸುಮಾಲತಾ ಅಂಬರೀಷ್ ಮಂಡ್ಯದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ ಅವರನ್ನು ಶುಕ್ರವಾರ ಭೇಟಿ ಮಾಡಿ ನರೇಗಾ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿ ನಂತರ ಸುದ್ದಿಗಾರೊಂದಿಗೆ ಮಾತನಾಡಿದರು. ನರೇಗಾದಲ್ಲಿ ಏನೇನು ಮಾಡಿಸಬಹುದು ಎಂಬುದರ ನಿರ್ಧಾರವು ಜಿಲ್ಲಾ ಪಂಚಾಯಿತಿ ಸಿಇಒ ಮತ್ತು ಪಿಡಿಒಗಳದ್ದಾಗಿರುತ್ತದೆ. ನಾವು ಅವರನ್ನು ಕೇಳಬಹುದು. ಜೊತೆಗೆ ಕೆಲಸ ಎಲ್ಲಿ ಆಗಬೇಕು ಎಂಬುವುದನ್ನು ತಿಳಿಸಬಹುದಷ್ಟೇ. ಸಂಸದರು ದಿಶಾ ಸಭೆಯಲ್ಲಿ ನಂಬರ್‌ ಒನ್ ಇದ್ದಾರೆ, ಆದರೆ ನರೇಗಾದಲ್ಲಿ ಹಿಂದಿದ್ದಾರೆ ಎಂದು ಹೇಳುವುದೇ ತಪ್ಪು ಕಲ್ಪನೆ ಎಂದು ತಿರುಗೇಟು ನೀಡಿದ್ದಾರೆ.

ಯೋಗೇಶ್ವರ್‌ರಿಂದ ಗೋಲ್‌ಮಾಲ್ ರಾಜಕಾರಣ: ಎಚ್.ಡಿ.ಕುಮಾರಸ್ವಾಮಿಯೋಗೇಶ್ವರ್‌ರಿಂದ ಗೋಲ್‌ಮಾಲ್ ರಾಜಕಾರಣ: ಎಚ್.ಡಿ.ಕುಮಾರಸ್ವಾಮಿ

ಮುಂದಿನ ದಿನದಲ್ಲಿ ಜಿಲ್ಲೆಗೆ ಟಾಪ್ 10 ಸ್ಥಾನ

ಜಿಲ್ಲೆಯು ನರೇಗಾದಲ್ಲಿ 2019ರ ತನಕವೂ ನಾಲ್ಕನೇ ಸ್ಥಾನದಲ್ಲಿ ಇತ್ತು. ಆದರೆ ಕೋವಿಡ್ ಸಂದರ್ಭದಲ್ಲಿ ಸ್ವಲ್ಪ ಅಡೆತಡೆಯಾಗಿದೆ. ಮುಂದಿನ ದಿನಗಳಲ್ಲಿ ನರೇಗಾ ಬಗ್ಗೆ ಅಭಿವೃದ್ಧಿ ಸಾಧಿಸುವ ಭರವಸೆ ಇದೆ. ಪ್ರಸ್ತುತದಲ್ಲಿ ಎಂಎಲ್‌ಸಿ ಚುನಾವಣೆ, ಮಳೆ ಹಾವಳಿ ಹೆಚ್ಚಾಗಿದ್ದರಿಂದ ಕಷ್ಟವಾಗಿದೆ. ಮಾರ್ಚ್‌ವರೆಗೂ ಸಮಯವಿದೆ. 31ನೇ ಸ್ಥಾನದಿಂದ 29ನೇ ಸ್ಥಾನಕ್ಕೆ ಕಳೆದ ಒಂದು ತಿಂಗಳ ಈಚೆಗೆ ಅಭಿವೃದ್ಧಿ ಆಗಿದೆ. ಮುಂದಿನ ದಿನಗಳಲ್ಲಿ ಟಾಪ್ 10ನೇ ಸ್ಥಾನಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ಯಪಡಿಸಿದರು. ಅಕ್ರಮದಲ್ಲಿ ಭಾಗಿಯಾಗಿರುವುದು ಸಾಬೀತಾದ ಮೇಲೆ ಪಿಡಿಒಗಳನ್ನು ಅಮಾನತು ಮಾಡಲಾಗಿದೆ. ಪಂಚಾಯತಿ ಅಭಿವೃದ್ಧಿ ಮಾಡುವುದು ಅಷ್ಟೇ ಅವರ ಕೆಲಸವಾಗಿದೆ. ಸರ್ಕಾರದ ಸಂಬಳ ತೆಗೆದುಕೊಳ್ಳುವ ಹಾಗೆಯೇ ಕೆಲಸ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

Dont right to hate MPs; Sumalatha said in Mandya

ತರಾಟೆ ತೆಗೆದುಕೊಂಡಿದ್ದಾರೆ ಎನ್ನುವುದು ಸುಳ್ಳು

"ಯಾವುದೇ ಅಧಿಕಾರಿಗಳನ್ನು ಅಮಾನತುಗೊಳಿಸುವ ಅಥವಾ ವರ್ಗಾವಣೆ ಮಾಡುವ ಅಧಿಕಾರ ಸಂಸದರಿಗೆ ಇರುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಬಂದಾಗ ಅಧಿಕಾರಿಗಳು ಬರುತ್ತಾರೆ, ಆದರೆ ಸಂಸದರ ಕಾರ್ಯಕ್ರಮ ಎಂದರೆ ಅವರಿಗೆ ಭಯವಿಲ್ಲದಂತಾಗಿದೆ. ಇನ್ನು ಜನಸಾಮನ್ಯರ ಜೊತೆ ಹೇಗೆ ವರ್ತಿಸುತ್ತಾರೆ? ಎನ್ನುವುದೇ ಪ್ರಶ್ನೆ ಆಗಿದೆ. ಜಿಲ್ಲೆಗೆ ಸಿಇಒ ಆಗಿ ಅಧಿಕಾರಿ ವಹಿಸಿಕೊಂಡು ಕೇವಲ ನಾಲ್ಕು ತಿಂಗಳಾಗಿದೆ. ನರೇಗಾದಲ್ಲಿ ನಾನು ಮ್ಯಾಜಿಕ್ ಮಾಡಲು ಸಾಧ್ಯವಿಲ್ಲ. ನನಗೆ ಸಿಕ್ಕಿರುವ ಕಾರ್ಯಕ್ರಮದ ಪಟ್ಟಿಯಲ್ಲಿ ಜಿಲ್ಲಾ ಪಂಚಾಯತಿ ಸಭೆಯ ಮಾಹಿತಿ ಇಲ್ಲ. ಜನಪ್ರತಿನಿಧಿಗಳು ಬರುವ ಹಾಗೆ ಸಂಸದರು ಭೇಟಿ ಕೊಟ್ಟಿದ್ದಾರೆ ಅಷ್ಟೇ. ಸಂಸದರು ನನಗೆ ತರಾಟೆ ತೆಗೆದುಕೊಂಡಿದ್ದಾರೆ ಎನ್ನುವುದು ಸುಳ್ಳು," ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ ಸ್ಪಷ್ಟಪಡಿಸಿದರು.

English summary
Sumalatha expressed outrage in mandya, Don't right to hate MPs, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X