• search
  • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಡ್ಯ ಜಿಲ್ಲಾ ಪಂಚಾಯತ್ ನಲ್ಲಿ ಅಧ್ಯಕ್ಷೆ-ಸದಸ್ಯರ ಜಟಾಪಟಿ

|

ಮಂಡ್ಯ, ಜೂನ್ 26: ಸಕ್ಕರೆ ನಗರಿ ಮಂಡ್ಯ ಕೊರೊನಾ ಸೋಂಕಿನಿಂದಾಗಿ ತತ್ತರಿಸುತ್ತಿದ್ದರೆ, ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸಬೇಕಾದ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಅಧಿಕಾರದಾಸೆ, ಸ್ವಪ್ರತಿಷ್ಠೆಗಾಗಿ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯನ್ನು ನಡೆಸದೆ ಮುಂದೂಡುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ಸ್ವಾಮಿ ಮತ್ತು ಸದಸ್ಯರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಒಂಬತ್ತು ತಿಂಗಳ ಹಿಂದೆಯೇ ಗೊತ್ತಾಗಿತ್ತು. ಮಾತಿನಂತೆ ತಮ್ಮ ಗಾದಿಯನ್ನು ನಾಗರತ್ನಸ್ವಾಮಿ ಅವರು ಬೇರೆಯವರಿಗೆ ಬಿಟ್ಟುಕೊಡಬೇಕಾಗಿತ್ತು. ಆದರೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವ ಮನಸ್ಸು ಮಾಡಲಿಲ್ಲ. ಹೀಗಾಗಿ ಅವರಿಂದ ರಾಜೀನಾಮೆ ಕೊಡಿಸಲೇಬೇಕೆಂಬ ಹಟಕ್ಕೆ ಬಿದ್ದ ಸದಸ್ಯರು ಅವರನ್ನು ಇನ್ನಿಲ್ಲದಂತೆ ಕಾಡುತ್ತಿದ್ದಾರೆ. ಇದೆಲ್ಲದರ ಪರಿಣಾಮ ಕಳೆದ ಹಲವು ಸಮಯಗಳಿಂದ ಕರೆಯಲಾಗುತ್ತಿರುವ ಜಿ.ಪಂ ಸಾಮಾನ್ಯ ಸಭೆ ಸ್ವಪಕ್ಷೀಯ ಸದಸ್ಯರ ಅಸಹಕಾರದಿಂದ ಮುಂದೂಡುತ್ತಲೇ ಬರುತ್ತಿದೆ. ಕಳೆದ ಐದು ಸಭೆಗಳು ಒಂದಲ್ಲ ಒಂದು ಕಾರಣಕ್ಕೆ ರದ್ದಾಗುತ್ತಲೇ ಬರುತ್ತಿರುವುದು ಸಮಾಜಕ್ಕೆ ಯಾವ ರೀತಿಯ ಸಂದೇಶವನ್ನು ಅಧ್ಯಕ್ಷರು ಮತ್ತು ಸದಸ್ಯರು ನೀಡುತ್ತಿದ್ದಾರೆ ಎಂಬುದೇ ಅರ್ಥವಾದಂತಿಲ್ಲ.

ಉಡುಪಿ ತಾಲ್ಲೂಕು ಅರಣ್ಯಾಧಿಕಾರಿ-ಶಾಸಕ ನಡುವೆ ಜಟಾಪಟಿ

 ಅಧ್ಯಕ್ಷ-ಸದಸ್ಯರ ನಡುವೆ ಜಟಾಪಟಿ

ಅಧ್ಯಕ್ಷ-ಸದಸ್ಯರ ನಡುವೆ ಜಟಾಪಟಿ

ಸಾಮಾನ್ಯವಾಗಿ ಜಿ.ಪಂ ಸಭೆಗಳಲ್ಲಿ ವಿರೋಧ ಪಕ್ಷಗಳ ಸದಸ್ಯರು ಅಧ್ಯಕ್ಷರ ವಿರುದ್ಧ ಆರೋಪ, ಪ್ರತ್ಯಾರೋಪಗಳನ್ನು ಮಾಡುತ್ತಾರೆ. ಅಲ್ಲದೆ ಅಧ್ಯಕ್ಷರ ವಿರುದ್ಧ ಪ್ರತಿಭಟನೆ ಮಾಡುತ್ತಾರೆ. ಆದರೆ ಮಂಡ್ಯದಲ್ಲಿ ಮಾತ್ರ ಎಲ್ಲವೂ ವಿಭಿನ್ನವಾಗಿದ್ದು, ಅಧಿಕಾರದಲ್ಲಿರುವ ಜೆಡಿಎಸ್ ಸದಸ್ಯರೇ ಪ್ರತಿ ಬಾರಿಯೂ ಜಿ.ಪಂ ಸಾಮಾನ್ಯ ಸಭೆ ಮುಂದೂಡುವಂತೆ ಮಾಡುತ್ತಿದ್ದು, ಅಧ್ಯಕ್ಷೆ ಮೇಲಿನ ಮನಸ್ತಾಪದಿಂದಾಗಿ ಅವರು ಕರೆದ ಸಭೆಗೆ ಬಾರದೆ ರಾಜಕೀಯ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಬಹಿರಂಗವಾಗಿಯೇ ಆರೋಪ ಮಾಡುತ್ತಿರುವುದು ಅಚ್ಚರಿ ಮೂಡಿಸುತ್ತಿದೆ.

ಜಿಪಂ ಅಧ್ಯಕ್ಷ ಗಾದಿ ಮೇಲೆ ಉಪಾಧ್ಯಕ್ಷೆ ಗಾಯಿತ್ರಿ ರೇವಣ್ಣ ಕಣ್ಣಿಟ್ಟಿದ್ದಾರೆ. ಆದರೆ ಬಿಟ್ಟುಕೊಡಲು ನಾಗರತ್ನ ಸ್ವಾಮಿ ತಯಾರಿಲ್ಲ. ಜಿಪಂ ಅಧಿಕಾರಾವಧಿ ಇನ್ನು ಎಂಟು ತಿಂಗಳು ಇದ್ದು, ಆನಂತರ ನಿರ್ಗಮಿಸುವ ಇರಾದೆ ಅವರದ್ದಾಗಿದೆ. ಆದರೆ ಹೇಗಾದರೂ ಮಾಡಿ ತಾನು ಕೂಡ ಅಧ್ಯಕ್ಷೆಯಾಗಲೇಬೇಕೆಂಬ ಬಯಕೆ ಉಪಾಧ್ಯಕ್ಷೆ ಗಾಯತ್ರಿ ರೇವಣ್ಣರದ್ದಾಗಿದೆ.

 ಉಪಾಧ್ಯಕ್ಷೆಗೆ ಸದಸ್ಯರ ಬೆಂಬಲ

ಉಪಾಧ್ಯಕ್ಷೆಗೆ ಸದಸ್ಯರ ಬೆಂಬಲ

ಉಪಾಧ್ಯಕ್ಷೆ ಗಾಯತ್ರಿ ರೇವಣ್ಣ ಅವರಿಗೆ ಸ್ವಪಕ್ಷದ ಒಂದಷ್ಟು ಸದಸ್ಯರು ಬೆಂಬಲ ನೀಡುತ್ತಿದ್ದಾರೆ. ಹೀಗಾಗಿ ಅವರು ಅಧ್ಯಕ್ಷರು ಕರೆಯುವ ಸಭೆಗೆ ಬಾರದೆ ಕೋರಂ ಕೊರತೆಯಿಂದಾಗಿ ಸಭೆ ರದ್ದಾಗುತ್ತಿದೆ. ಜೆಡಿಎಸ್ ಪ್ರಾಬಲ್ಯದ ಜಿಪಂನಲ್ಲಿ ಈ ರೀತಿಯ ರಾಜಕೀಯ ನಡೆಯುತ್ತಿದ್ದರೂ ಪಕ್ಷದ ಹಿರಿಯ ನಾಯಕರು ಒಂದೆಡೆ ಕುಳಿತು ಚರ್ಚೆ ನಡೆಸಿ ಕ್ರಮ ಕೈಗೊಳ್ಳದ ಕಾರಣ ಜನ ಹಿಡಿಶಾಪ ಹಾಕುವಂತಾಗಿದೆ. ಇಷ್ಟಕ್ಕೂ ಜಿ.ಪಂನಲ್ಲಿ ಸ್ವಪಕ್ಷೀಯರಾದ ಅಧ್ಯಕ್ಷರು-ಸದಸ್ಯರ ಜಟಾಪಟಿ, ಅಧ್ಯಕ್ಷರ ಅಧಿಕಾರದಾಸೆ, ಆಡಳಿತಾರೂಢ ಸದಸ್ಯರ ಸ್ವಪ್ರತಿಷ್ಠೆ ಎಲ್ಲವೂ ಮೇಳೈಸುತ್ತಿರುವುದು ಎದ್ದು ಕಾಣುತ್ತಿದೆ.

ಜಿ.ಪಂ ಸಭೆಯನ್ನು ಅಧ್ಯಕ್ಷರು ಕರೆದರೆ ಸಭೆಗೆ ಬರುವ ಸದಸ್ಯರು ಸಭಾಂಗಣಕ್ಕೆ ತೆರಳದೆ ನೇರವಾಗಿ ಉಪಾಧ್ಯಕ್ಷರ ಕೊಠಡಿಗೆ ತೆರಳಿ ಚರ್ಚೆ ನಡೆಸುತ್ತಿರುವುದು ಮಾಮೂಲಿಯಾಗಿದೆ. ಹೀಗಾಗಿ ಕಳೆದ ಒಂಬತ್ತು ತಿಂಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೆ ಜಿ.ಪಂ ನಿಂತ ನೀರಾಗಿದೆ.

 ಸದಸ್ಯರ ವಿಶ್ವಾಸ ತೆಗೆದುಕೊಳ್ಳದ ಅಧ್ಯಕ್ಷೆ

ಸದಸ್ಯರ ವಿಶ್ವಾಸ ತೆಗೆದುಕೊಳ್ಳದ ಅಧ್ಯಕ್ಷೆ

ಇನ್ನು ಸದಸ್ಯರು ಅಧ್ಯಕ್ಷೆ ಮೇಲೆ ಅವಿಶ್ವಾಸ ವ್ಯಕ್ತಪಡಿಸಲು ಕಾರಣವೇನು ಎಂಬುದನ್ನು ನೋಡುವುದಾದರೆ, ಸದಸ್ಯರು ನೀಡುತ್ತಿರುವ ಉತ್ತರ ವಿಭಿನ್ನವಾಗಿದೆ. ಅದೇನೆಂದರೆ, ಅಧ್ಯಕ್ಷೆ ನಾಗರತ್ನ ಸ್ವಾಮಿ ಅವರು ಕಳೆದ ಮೂರು ತಿಂಗಳಲ್ಲಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಸದಸ್ಯರಿಗೆ ಕರೆ ಮಾಡಿ ಸಭೆಗೆ ಹಾಜರಾಗುವಂತೆ ಮನವಿ ಮಾಡಲ್ಲ. ಕುಡಿಯುವ ನೀರಿಗೆ ಅನುದಾನ ಬಂದರೂ ನಮ್ಮೊಂದಿಗೆ ಚರ್ಚಿಸುವ ಸೌಜನ್ಯ ತೋರಿಲ್ಲ. ಜತೆಗೆ ಅನುದಾನವನ್ನು ತಮಗಿಷ್ಟ ಬಂದವರಿಗೆ ವಿತರಿಸಿದ್ದಾರೆ ಎಂಬ ಆರೋಪ ಸದಸ್ಯರದ್ದಾಗಿದೆ. ಆದರೆ ಅದೆಲ್ಲವನ್ನು ಮೀರಿದ್ದು ಎಂದರೆ ಅಧ್ಯಕ್ಷ ಗಾದಿಯನ್ನು ಬಿಟ್ಟುಕೊಡದಿರುವುದಾಗಿದೆ.

 ಮುಂದೂಡುತ್ತಲೇ ಇರುವ ಸಾಮಾನ್ಯ ಸಭೆ

ಮುಂದೂಡುತ್ತಲೇ ಇರುವ ಸಾಮಾನ್ಯ ಸಭೆ

ಇನ್ನು ಬುಧವಾರ (ಜೂ.24) ಕರೆಯಲಾಗಿದ್ದ ಜಿ.ಪಂ ಸಾಮಾನ್ಯ ಸಭೆ ನಡೆದಿದ್ದು, ಸಭೆಯು ಒಬ್ಬರೇ ಒಬ್ಬ ಸದಸ್ಯರ ಕೊರತೆಯಿಂದ ರದ್ದಾಗಿದೆ. ಇಲ್ಲಿ 42 ಜಿಲ್ಲಾ ಪಂಚಾಯಿತಿ ಸದಸ್ಯರು, 7 ತಾ.ಪಂ ಅಧ್ಯಕ್ಷರು, 7 ವಿಧಾನಸಭಾ ಸದಸ್ಯರು, ಇಬ್ಬರು ವಿಧಾನಪರಿಷತ್ ಸದಸ್ಯರು, ಒಬ್ಬ ಸಂಸದರು ಸೇರಿದಂತೆ ಒಟ್ಟು 58 ಸದಸ್ಯರ ಪೈಕಿ ಸಾಮಾನ್ಯ ಸಭೆ ನಡೆಯಲು 29 ಸದಸ್ಯರ ಕೋರಂ ಅಗತ್ಯವಿತ್ತಾದರೂ ಸಭೆಯಲ್ಲಿ ಕೇವಲ 28 ಸದಸ್ಯರು ಹಾಜರಿದ್ದರಿಂದ ಸಭೆಯನ್ನು ಮುಂದೂಡಲಾಗಿದೆ.

ಇಷ್ಟೇ ಆಗಿದ್ದರೆ ಪರ್ವಾಗಿರಲಿಲ್ಲ. ಆದರೆ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ನಡೆಯುತ್ತಿದ್ದ ಕಾವೇರಿ ಸಭಾಂಗಣದೊಳಗೆ ಆಗಮಿಸಿದ ಅತೃಪ್ತ ಜೆಡಿಎಸ್ ಸದಸ್ಯರು ಸಭಾ ಗೌರವ ಮರೆತು ಅಧ್ಯಕ್ಷರಿದ್ದ ವೇದಿಕೆ ಏರಿ ದರ್ಪ ಪ್ರದರ್ಶಿಸಿದಲ್ಲದೆ, ಅಧ್ಯಕ್ಷರು ಆಸೀನರಾಗಿರುವ ವೇದಿಕೆ ಮೇಲೇರಿ ಕೆಲ ಸದಸ್ಯರು ಸಾಮಾನ್ಯ ಸಭೆಗೆ ಕೋರಂ ಇದೆಯಾ? ಕೋರಂ ಇಲ್ಲದ ಮೇಲೆ ಸಭೆ ಹೇಗೆ ನಡೆಸುತ್ತೀರಾ? ಎನ್ನುತ್ತಾ ಸಭೆ ಮುಂದೂಡುವಂತೆ ಸಿಇಓ ಅವರನ್ನು ಪ್ರಶ್ನಿಸಿದ್ದಾರೆ. ಅಧ್ಯಕ್ಷರೊಂದಿಗೆ ಮಾತಿನ ಚಕಮಕಿಗಿಳಿಯುವ ಮೂಲಕ ಸಭೆಗೆ ಅಗೌರವ ತೋರಿದ್ದು ಮಾತ್ರ ನಿಜಕ್ಕೂ ಬೇಸರ ತರಿಸುವಂಥದ್ದಾಗಿದೆ.

English summary
Zilla panchayat meeting is cancelling every time due to disagreement between president and members of zilla panchayat,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X