ಮಂಡ್ಯದಿಂದ 16 ಮಂದಿ ರೌಡಿಶೀಟರ್‌ಗಳ ಗಡಿಪಾರು

ಮಂಡ್ಯ, ಏಪ್ರಿಲ್ 09:ಲೋಕಸಭಾ ಚುನಾವಣಾ ದಿನಗಳು ಹತ್ತಿರವಾಗುತ್ತಿದ್ದಂತೆಯೇ ಮಂಡ್ಯದಲ್ಲಿ ಚುನಾವಣಾ ಕಾವು ಏರುತ್ತಿದ್ದು, ಅಭ್ಯರ್ಥಿಗಳ ಪರ ಮತಪ್ರಚಾರದ ಭರಾಟೆಯೂ ಸಾಗಿದೆ. ಈ ನಡುವೆ ಜಿಲ್ಲೆಯಲ್ಲಿ ಶಾಂತಿಯುತ ಮತ್ತು ಸುವ್ಯವಸ್ಥಿತವಾಗಿ ಚುನಾವಣೆ ನಡೆಸುವುದು ಬಹುಮುಖ್ಯವಾಗಿರುವ ಕಾರಣದಿಂದಾಗಿ ಪೊಲೀಸರು ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಮಂಜುಶ್ರೀ ಅವರ ಆದೇಶದ ಮೇರೆಗೆ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಸುಮಾರು 16 ಮಂದಿ ರೌಡಿಶೀಟರ್ ಗಳನ್ನು ಪೊಲೀಸ್ ಇಲಾಖೆ ಗಡಿಪಾರು ಮಾಡಿದೆ.

ಈ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ಡಿ. ಮಾಹಿತಿ ನೀಡಿದ್ದು, ಮಂಡ್ಯ ನಗರದ ಸೂರ್ಯ, ಕೆ.ಆರ್.ಪೇಟೆ ತಾಲೂಕಿನ ಬಂಡಿಹೊಳೆ ಗ್ರಾಮದ ಕೆ.ಕೆ.ಫಣೀಶ, ಅಗ್ರಹಾರ ಬಡಾವಣೆಯ ಸೈಯದ್, ಜಯನಗರ ಬಡಾವಣೆಯ ಕಿರಣ, ಮಾರಿಗುಡಿ ಬೀದಿಯ ವೆಂಕಟೇಶ, ಮಂಡ್ಯ ಇಂದಿರಾ ಕಾಲೋನಿ ಕುಮಾರ, ಕೆ.ಆರ್.ಪೇಟೆ ತಾಲೂಕು ಊಚನಹಳ್ಳಿಯ ವಿಜಯ, ಕೆ.ಆರ್.ಪೇಟೆ ಬಸವನಗುಡಿಯ ಗಣೇಶ, ಕೆ.ಆರ್.ಉಪೇಟೆ ನಾಗಮಂಗಲ ರಸ್ತೆಯ ಕಾರ್ತಿಕ್, ಮಂಡ್ಯದ ಮರಿಗೌಡ ಬಡಾವಣೆಯ ಕುಮಾರ, ಮದ್ದೂರು ತಾಲೂಕು ಗೆಜ್ಜಲಗೆರೆ ಗ್ರಾಮದ ವೀರೇಶ್, ಮದ್ದೂರು ಮೇಗಲದೊಡ್ಡಿ ಬೀದಿಯ ವರುಣ್, ಎಂ.ಜಿ.ಸೂರಜ್ ಗೌಡ, ಲೀಲಾವತಿ ಬಡಾವಣೆಯ ಎಂ.ಬಿ.ಪ್ರಶಾಂತ, ಚಿಕ್ಕಮಂಡ್ಯದ ಪ್ರಮೋ, ಮಳವಳ್ಳಿ ತಾಲೂಕು ಅಮೃತೇಶ್ವರನಹಳ್ಳಿಯ ಮರಿಲಿಂಗೇಗೌಡ ಅವರನ್ನು ಗಡಿಪಾರು ಮಾಡಿರುವುದಾಗಿ ತಿಳಿಸಿದ್ದಾರೆ.

Deported of 16 rowdy sheeters from Mandya

ಈ ಹಿಂದೆಯೇ ರೌಡಿ ಶೀಟರ್ ಅಶೋಕ್ ಪೈನನ್ನು ಪೊಲೀಸ್ ಇಲಾಖೆ ಗಡಿಪಾರು ಮಾಡಿತ್ತು. ಇದೀಗ ಹದಿನಾರು ಮಂದಿಯನ್ನು ಗಡಿಪಾರು ಮಾಡಲಾಗಿದ್ದು, ಇದು ಶಾಂತಿಯುತ ಚುನಾವಣೆಗೆ ಸಹಕಾರಿಯಾದಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+